ವಿಶ್ವಕಪ್ ಕಬ್ಬಡಿ: ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತ

Posted By: Prithviraj
Subscribe to Oneindia Kannada

ಅಹಮದಾಬಾದ್, ಅಕ್ಟೋಬರ್, 12: ಮಂಗಳವಾರ ಬಾಂಗ್ಲಾದೇಶದ ವಿರುದ್ಧ ಇಲ್ಲಿ ನಡೆದ ವಿಶ್ವಕಪ್ ಕಬಡ್ಡಿ ಪಂದ್ಯದಲ್ಲಿ 57-20 ಅಂತರದಲ್ಲಿ ಭಾರತ ಜಯಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿರುವ ಭಾರತ ಬಾಂಗ್ಲಾದೇಶವನ್ನು ಬಗ್ಗುಬಡಿದು ಒಟ್ಟು 11 ಅಂಕಗಳೊಂದಿಗೆ 'ಎ' ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು ಪ್ರಶಸ್ತಿಯೆಡೆಗೆ ಹೆಜ್ಜೆ ಇಟ್ಟಿದೆ. [ರವಿಚಂದ್ರನ್ ಅಶ್ವಿನ್ ಮುರಿದ ಟೆಸ್ಟ್ ದಾಖಲೆಗಳ ಪಟ್ಟಿ]

ಉದ್ಘಾಟನಾ ಪಂದ್ಯದಲ್ಲೇ ರಿಪಬ್ಲಿಕ್ ಆಫ್ ಕೊರಿಯಾ ವಿರುದ್ಧ ಸೋತು ಹಿನ್ನಡೆ ಅನುಭವಿಸಿದ್ದ ಭಾರತ ಆಸ್ಟೇಲಿಯಾ ವಿರುದ್ಧ ನಡೆದ ಎರಡನೇ ಪಂದ್ಯದಲ್ಲಿ ಗೆಲುವಿನ ಲಯಕ್ಕೆ ಮರಳಿತ್ತು. ಬಂಗ್ಲಾದೇಶದ ವಿರುದ್ಧವೂ ಮಂಗಳವಾರ ಭಾರತ ಉತ್ತಮ ಪ್ರದರ್ಶನ ತೋರಿತು.

ವಿಶ್ವಕಪ್ ಕಬ್ಬಡಿ: ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತ

ಟಾಸ್ ಗೆದ್ದು ಕೋಟ್ ಆಯ್ಕೆಮಾಡಿಕೊಂಡ ನಾಯಕ ಅನೂಪ್ ಕುಮಾರ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರಾದೂ ರೈಡಿಂಗ್ ನಲ್ಲಿ ವಿಫಲವಾಗಿದ್ದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

ಇನ್ನೂ ಡುಪ್ಕಿ ಸ್ಪೆಷಲಿಸ್ಟ್ ಪ್ರದೀಪ್ ನರ್ವಾಲ್ ಹಾಗೂ ಟಾಲ್ ರೈಡರ್ ಅಜಯ್ ಠಾಕೂರ್ ಭಾರತದ ಪರ ಉತ್ತಮ ಪ್ರದರ್ಶನ ತೋರಿ. ಪ್ರಥಮಾರ್ಧ ಹಾಗೂ ದ್ವಿತೀಯಾರ್ಧ ಎರಡರಲ್ಲೂ ಭಾರತ ಮುನ್ನಡೆ ಕಾಯ್ದುಕೊಳ್ಳುವಂತೆ ಮಾಡಿದರು. [ಕಿವೀಸ್ ವಿರುದ್ಧ ಸರಣಿ, ಕ್ರಿಕೆಟರ್ಸ್ ಗೆ ಟ್ವಿಟ್ಟರಲ್ಲಿ ಬಹುಪರಾಕ್!]

ಡಿಫೆಂಡಿಂಗ್ ವಿಭಾಗದಲ್ಲಿ ಸುರೇಂದ್ರ ನಾಡಾ, ಸಂದೀಪ್ ನರ್ವಾಲ್ ಉತ್ತಮ ಪ್ರದರ್ಶನ ತೋರಿದರು. ಅಜಯ್ ಠಾಕೂರ್ 12 ರೈಡ್ ಮಾಡಿ 10 ಪಾಯಿಂಟ್ ಗಳಿಸಿದರು.

ರೈಡಿಂಗ್ ನಲ್ಲಿ ಬಾಂಗ್ಲಾದೇಶ ವಿಫಲವಾದರೂ, ಡಿಫೆಂಡಿಗ್ ನಲ್ಲಿ ಉತ್ತಮ ಪ್ರದರ್ಶನ ತೋರಿತು. ನಾಯಕ ಅನುಪ್ ಕುಮಾರ್ ರನ್ನು ಮೂರು ಬಾರಿ ಕಟ್ಟಿಹಾಕುವಲ್ಲಿ ಬಾಂಗ್ಲಾ ಯಶಸ್ವಿಯಾಯಿತು.

ಇದಕ್ಕೂ ಮುನ್ನ ಕೀನ್ಯಾ ಮತ್ತು ಇರಾನ್ ತಂಡಗಳ ನಡುವೆ ನಡೆದ ಪಂದ್ಯ ರೋಚಕವಾಗಿತ್ತು. ಗೆಲುವಿನ ಸನಿಹದಲ್ಲಿದ್ದ ಕೀನ್ಯಾ ತಂಡ ಕೊನೆಯ 4 ನಿಮಿಷಗಳಲ್ಲಿ ಮಾಡಿದ ತಪ್ಪಿಗೆ ಗೆಲುವು ಕೈಚೆಲ್ಲಿಕೊಳ್ಳಬೇಕಾಯಿತು.

ಪ್ರಥಮಾರ್ಧ ಮುನ್ನಡೆ ಸಾಧಿಸಿದ್ದ ಬಲಿಷ್ಠ ಇರಾನ್ ತಂಡಕ್ಕೆ ದ್ವಿತೀಯಾರ್ಧದಲ್ಲಿ ಕೀನ್ಯಾ ತೀವ್ರ ಪ್ರತಿರೋಧ ತೋರಿದರೂ 33-28 ಅಂಕಗಳ ಅಂತರದಿಂದ ಸೋಲು ಕಂಡಿತು. ಹಾಟ್ರಿಕ್ ಪಂದ್ಯ ಗೆಲ್ಲುವ ಮೂಲಕ 15 ಅಂಕಗಳೊಂದಿಗೆ 'ಬಿ' ಗುಂಪಿನಲ್ಲಿ ಇರಾನ್ ತಂಡ ಅಗ್ರಸ್ಥಾನ ಕಾಯ್ದುಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India outclassed Bangladesh 57-20 in a league clash of the Kabaddi World Cup in Ahmedabad on Tuesday.
Please Wait while comments are loading...