ಕಂಗ್ರಾಟ್ಸ್: ಪಾಕ್ ಬಗ್ಗುಬಡಿದ ಭಾರತ ಏಷ್ಯನ್ ಹಾಕಿ ಚಾಂಪಿಯನ್

Written By:
Subscribe to Oneindia Kannada

ಕೌಂಟನ್, ಅ 30: ದೀಪಾವಳಿ ಅಮವಾಸ್ಯೆಯ ದಿನದಂದು ಭಾರತದ ಹಾಕಿ ತಂಡ ದೇಶಕ್ಕೆ ಭರ್ಜರಿ ಉಡುಗೊರೆ ನೀಡಿದೆ. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ಸ್ ನಲ್ಲಿ ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

2011ರಲ್ಲಿ ಚಾಂಪಿಯನ್ ಆಗಿದ್ದ ಭಾರತ ಎರಡನೇ ಬಾರಿಗೆ ಈ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಭಾನುವಾರ ರಾತ್ರಿ ( ಅ 30) ಮಲೇಷ್ಯಾದ ಕೌಂಟನ್ ನಲ್ಲಿ ನಡೆದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಭಾರತ, ಪಾಕಿಸ್ತಾನವನ್ನು 3-2 ಗೋಲುಗಳ ಅಂತರದಿಂದ ಬಗ್ಗುಬಡಿದು ಪ್ರಶಸ್ತಿ ಗೆದ್ದುಕೊಂಡಿದೆ.

ಚೀನಾ, ಜಪಾನ್, ದಕ್ಷಿಣ ಕೊರಿಯಾ, ಪಾಕಿಸ್ತಾನ, ಮಲೇಷ್ಯಾ ಮತ್ತು ಭಾರತ ಈ ಟೂರ್ನಿಯಲ್ಲಿ ಭಾಗವಹಿಸಿತ್ತು. ಟೂರ್ನಿಯಲ್ಲಿ ಅಜೇಯ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ್ದ ಭಾರತ, ಆತ್ಮವಿಶ್ವಾಸದಿಂದ ಆಡಿ ಪಂದ್ಯ ಗೆದ್ದುಕೊಂಡಿದೆ.

India beat Pakistan to win Asian Champions Trophy hockey title

ಗೋಲು ಗಳಿಸುವ ಕೆಲವೊಂದು ಅವಕಾಶಗಳನ್ನು ಭಾರತ ಕೈಚೆಲ್ಲಿದರೂ ನಿಗದಿತ ಸಮಯದಲ್ಲಿ ಗೆಲುವಿನ ದಡ ಸೇರುವಲ್ಲಿ ಸಫಲವಾಯಿತು.

ಪಂದ್ಯದ 18ನೇ ಮತ್ತು 23ನೇ ನಿಮಿಷದಲ್ಲಿ ರೂಪಿಂದರ್ ಪಾಲ್ ಸಿಂಗ್ ಮತ್ತು ಯೂಸಫ್ ಗೋಲು ಹೊಡೆದು ತಂಡಕ್ಕೆ 2-0 ಮುನ್ನಡೆ ಗಳಿಸಿಕೊಟ್ಟರು.

ಇದಾದ ನಂತರ ಪಾಕಿಸ್ತಾನದ ಮೊಹಮ್ಮದ್ ಬಿಲಾಲ್ (26ನೇ ನಿಮಿಷ) ಪೆನಾಲ್ಟಿ ಕಾರ್ನರ್ ಮೂಲಕ ಪಾಕಿಗೆ ಮೊದಲ ಗೋಲು ತಂದುಕೊಟ್ಟರೆ, ಆಲಿ ಶಾನ್ (38ನೇ ನಿಮಿಷ) ಎರಡನೇ ಗೋಲು ಹೊಡೆದರು.

ಈ ಸಮಯದಲ್ಲಿ ತೀವ್ರ ಪೈಪೋಟಿಯಿಂದ ಸಾಗುತ್ತಿದ್ದ ಪಂದ್ಯಕ್ಕೆ ನಿಖಿನ್ ತಿಮ್ಮಯ್ಯ ಮೂರನೇ ಗೋಲು (51ನೇ ನಿಮಿಷ) ಹೊಡೆಯುವ ಮೂಲಕ ಭಾರತಕ್ಕೆ ಅಮೂಲ್ಯ ಮುನ್ನಡೆಗಳಿಸಿಕೊಟ್ಟರು.

ಈ ಮುನ್ನಡೆಯನ್ನು ಕೊನೆಯವರೆಗೂ ಕಾಯ್ದುಕೊಂಡ ಭಾರತ ಎರಡನೇ ಬಾರಿಗೆ ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯ ಮೇಲೆ ಷರಾ ಬರೆಯಿತು.ಭಾರತ ಹಾಕಿ ತಂಡಕ್ಕೆ ಅಭಿನಂದನೆಗಳು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Favorites India prevailed 3-2 over arch-rivals Pakistan to reclaim the Asian Champions Trophy hockey, presenting a perfect Diwali gift to the nation here on Sunday (October 30).
Please Wait while comments are loading...