36 ವರ್ಷದ ಚಿನ್ನದ ಬರ ಹಾಕಿ ತಂಡದಿಂದ ನೀಗುವುದೆ?

Written By:
Subscribe to Oneindia Kannada

ರಿಯೋ ಡಿ ಜನೈರೊ ಅಗಸ್ಟ್ 07: ಭಾರತ ಪುರುಷರ ಹಾಕಿ ತಂಡ ರಿಯೋ ಒಲಿಂಪಿಕ್ಸ್ ನಲ್ಲಿ ಶುಭಾರಂಭ ಮಾಡಿದೆ. 3-2 ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ತೇರ್ಗಡೆಯಾಗಿದೆ.

ಒಲಿಂಪಿಕ್ ಹಾಕಿ ಸೆಂಟರ್​ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರೂಪಿಂದರ್ ಪಾಲ್ ಸಿಂಗ್ (27, 49ನೇ ನಿಮಿಷ) ಅವಳಿ ಗೋಲು ಹಾಗೂ ಕನ್ನಡಿಗ ವಿಆರ್ ರಘುನಾಥ್ (15) ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ 3-2 ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿತು. ಭಾರತಕ್ಕೆ ಲಭಿಸಿದ 7 ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಮೂರರಲ್ಲಿ ಯಶಸ್ಸು ಸಿಕ್ಕಿತು.[ಮರಕಾನ ಸ್ಟೇಡಿಯಂನಲ್ಲಿ ಮನಸೆಳೆದ ಭಾರತದ ಕ್ರೀಡಾಪಡೆ]

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

hockey

2000ದ ಸಿಡ್ನಿ ಒಲಿಂಪಿಕ್ಸ್‌ ಬಳಿಕ ಗೇಮ್ಸ್‌ನ ಮೊದಲ ಪಂದ್ಯದಲ್ಲಿ ಜಯ ಸಾಧಿಸಿದ ಸಾಧನೆ ಮಾಡಿತು. ಈ ಮೂಲಕ ಭಾರತ ಹಾಕಿ ತಂಡ 12 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಮೊದಲ ಪಂದ್ಯ ಗೆದ್ದ ಸಾಧನೆ ಮಾಡಿದಂತೆ ಆಗಿದೆ.

2004ರ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕೊನೆಯದಾಗಿ ಭಾರತ ಹಾಕಿ ತಂಡ ಶುಭಾರಂಭ ಕಂಡಿತ್ತು. 2008ರಲ್ಲಿ ಅರ್ಹತೆಯನ್ನೇ ಪಡೆದಿರದಿದ್ದರೆ, 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಲೀಗ್ ಹಂತದಲ್ಲಿ ಆಡಿದ ಎಲ್ಲ 5 ಪಂದ್ಯಗಳಲ್ಲೂ ಭಾರತ ಸೋಲು ಕಂಡಿತ್ತು.

hockey

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian men's hockey team will aim to to end their 36-year wait for a hockey medal today when they play against Ireland in the Rio Olympics 2016. India last won a hockey medal, a gold, in 1980 in Moscow. They have a record 8 golds. India are clubbed in Pool B with defending champions Germany, twice winners and London 2012 silver medalist the Netherlands, Argentina, Canada, besides Ireland.
Please Wait while comments are loading...