ಚಿತ್ರಗಳಲ್ಲಿ ವಿಂಬಲ್ಡನ್ : ರೋಜರ್ ಫೆಡರರ್ ಗೆ ಗೆಲುವಿನ ಹಿಗ್ಗು

Posted By:
Subscribe to Oneindia Kannada

ಲಂಡನ್, ಜುಲೈ 07: ದಾಖಲೆಯ 18ನೆ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯ ಬೆನ್ನು ಹತ್ತಿರುವ ಸ್ವಿಟ್ಜರ್ಲೆಂಡ್ ನ ರೋಜರ್ ಫೆಡರರ್ ಅವರು ಸೆಮಿಫೈನಲ್ ಹಂತ ತಲುಪಿದ್ದಾರೆ.

34 ವರ್ಷ ವಯಸ್ಸಿನ ಫೆಡರರ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಲಿಕ್ ವಿರುದ್ಧ 6-7 4-6 6-3 7-6 6-3 ಅಂತರದಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಮುಟ್ಟಿದ್ದಾರೆ. [300ನೇ ಗ್ರಾನ್ ಸ್ಲಾಮ್ ಗೆದ್ದ ಸೆರೆನಾ ವಿಲಿಯಮ್ಸ್]

ಮೂರನೇ ಸೀಡ್ ಹೊಂದಿರುವ ಫೆಡರರ್ ಅವರು ಉಪಾಂತ್ಯದಲ್ಲಿ ಮಿಲೋಸ್ 6ನೇ ಸೀಡ್ ನ ರೋನಿಕ್ ಅವರನ್ನು ಎದುರಿಸಲಿದ್ದಾರೆ. ನೋವಾಕ್ ಜೋಕೋವಿಕ್ ವಿರುದ್ಧ ಗೆಲುವು ಸಾಧಿಸಿದ್ದ ಸ್ಯಾಮ್ ಕ್ವೆರಿ ವಿರುದ್ಧದ ಕವಾರ್ಟರ್ ಫೈನಲ್ ನಲ್ಲಿ 6-4 7-5 5-7 6-4 ಅಂತರದಲ್ಲಿ ರೊನಿಕ್ ಅವರು ಜಯ ಸಾಧಿಸಿದರು.

ಈ ಮೂಲಕ 34 ವರ್ಷದ ರೋಜರ್ ಫೆಡರರ್ ವಿಂಬಲ್ಡನ್​ನಲ್ಲಿ ಸೆಮಿಫೈನಲ್ ಪ್ರವೇಶಿಸಿದ 2ನೇ ಹಿರಿಯ ಆಟಗಾರ. 1974ರಲ್ಲಿ 39 ವರ್ಷದ ಆಸ್ಟ್ರೇಲಿಯಾದ ಕೆನ್ ರೋಸ್​ವಾಲ್ ಉಪಾಂತ್ಯಕ್ಕೇರಿದ್ದರು.[ಆಟಗಾರರಿಗೆ ಮೇಡ್ ಇನ್ ಇಂಡಿಯಾ ಉತ್ಪನ್ನ ಬೇಕೇ ಬೇಕು!]

ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ಗೆಲುವು

ಅತಿ ಹೆಚ್ಚು ಗ್ರ್ಯಾನ್ ಸ್ಲಾಮ್ ಗೆಲುವು

7 ಬಾರಿ ವಿಂಬಲ್ಡನ್ ಚಾಂಪಿಯನ್ ರೋಜರ್ ಫೆಡರರ್ ಅವರು 307ನೇ ಗ್ರ್ಯಾನ್ ಸ್ಲಾಮ್ ಗೆಲುವು ಸಾಧಿಸುವ ಮೂಲಕ ಅತಿ ಹೆಚ್ಚು ಪಂದ್ಯ ಗೆದ್ದ ಮಾರ್ಟಿನಾ ನವ್ರಾಟಿಲೋವಾ(306) ವಿಶ್ವ ದಾಖಲೆಯನ್ನು ಮುರಿದರು. ಹಾಲಿ ವಿಂಬಲ್ಡನ್ ಚಾಂಪಿಯನ್ ಸೆರೆನಾ ವಿಲಿಯಮ್ಸ್(302) ಮೂರನೇ ಸ್ಥಾನದಲ್ಲಿದ್ದಾರೆ.[ನಡಾಲ್ ಅವರು ವಿಂಬಲ್ಡನ್ ಆಡುತ್ತಿಲ್ಲ]

3ನೇ ಹಂತ ತಲುಪಿದ ರೋಹನ್ ಬೋಪಣ್ಣ ಜೋಡಿ

3ನೇ ಹಂತ ತಲುಪಿದ ರೋಹನ್ ಬೋಪಣ್ಣ ಜೋಡಿ

ವಿಂಬಲ್ಡನ್ ಮಿಶ್ರ ಡಬಲ್ಸ್ 3ನೇ ಹಂತ ತಲುಪಿದ ಭಾರತ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಆನಸ್ತೇಶಿಯಾ ರೋಡಿಯೊನೊವಾ

ಪುರುಷರ ಡಬಲ್ಸ್ ನ ಅಪ್ಡೇಟ್

ಪುರುಷರ ಡಬಲ್ಸ್ ನ ಅಪ್ಡೇಟ್

ಸೆರ್ಬಿಯಾದ ನೆನಾದ್ ಜಿಮೊನ್ಜಿಕ್ ಹಾಗೂ ಜೆಕ್ ರಿಪಬ್ಲಿಕ್ ನ ರಾಡೆಕ್ ಸ್ಟೇಪನೆಕ್ ಅವರು ಯುಎಸ್ ನ ಮೈಕ್ ಹಾಗೂ ಬಾಬ್ ಬ್ರಿಯಾನ್ ಜೋಡಿಯನ್ನು ಮಣಿಸಿದ ಖುಷಿಯಲ್ಲಿ ಎಗರಿದ್ದು ಹೀಗೆ.. ಚಿತ್ರಕೃಪೆ: AP/PTI

ವಿಲಿಯಮ್ಸ್ ಸಿಸ್ಟರ್ಸ್ ಆಟದ ಭಂಗಿ

ವಿಲಿಯಮ್ಸ್ ಸಿಸ್ಟರ್ಸ್ ಆಟದ ಭಂಗಿ

ಯುಎಸ್ ನ ವೀನಸ್ ಹಾಗೂ ಸೆರೆನಾ ವಿಲಿಯಮ್ಸ್ ಅವರು ಅಂಡ್ರಿಯಾ ಹ್ಲವಾಸ್ಕೊವಾ ಹಾಗೂ ಲೂಸಿ ಹ್ರಾಡೆಕಾ ವಿರುದ್ಧದ ಪಂದ್ಯದ ದೃಶ್ಯ

ಸೆರೆನಾ ವಿಲಿಯಮ್ಸ್ ಗೆಲುವಿನ ಸಂಭ್ರಮ.

ಸೆರೆನಾ ವಿಲಿಯಮ್ಸ್ ಗೆಲುವಿನ ಸಂಭ್ರಮ.

ರಷ್ಯಾದ ಅನಾಸ್ತೇಶಿಯಾ ಪವ್ಲಿಯುಚೆಂಕೋವಾ ವಿರುದ್ಧ ಯುಎಸ್ ನ ಸೆರೆನಾ ವಿಲಿಯಮ್ಸ್ ಗೆಲುವಿನ ಸಂಭ್ರಮ.

ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ

ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ

ಮಿಶ್ರ ಡಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಹಾಗೂ ಕ್ರೋವೇಶಿಯಾದ ಇವಾನ್ ಡೊಡಿಕ್ ಅವರು ಬ್ರಿಟನ್ನಿನ ನೀಲ್ ಸ್ಕುಪಸ್ಕಿ ಹಾಗೂ ಅನ್ನಾ ಸ್ಮಿತ್ ವಿರುದ್ಧದ ಪಂದ್ಯದಲ್ಲಿ

ಮಾರ್ಟಿನಾ ಹಾಗೂ ಲಿಯಾಂಡರ್ ಜೋಡಿ

ಮಾರ್ಟಿನಾ ಹಾಗೂ ಲಿಯಾಂಡರ್ ಜೋಡಿ

ಸ್ವಿಟ್ಜರ್ಲೆಂಡ್ ನ ಮಾರ್ಟಿನಾ ಹಿಂಗೀಸ್ ಹಾಗೂ ಭಾರತದ ಲಿಯಾಂಡರ್ ಪೇಸ್ ಅವರು ಜರ್ಮನಿಯ ಲೌರಾ ಹಾಗೂ ನ್ಯೂಜಿಲೆಂಡ್ ನ ಅರ್ಟೆಮ್ ಸಿಟಾಕ್ ವಿರುದ್ಧದ ಪಂದ್ಯದಲ್ಲಿ

8ನೇದಿನದಂದು ಪುರುಷದ ಸಿಂಗಲ್ಸ್

8ನೇದಿನದಂದು ಪುರುಷದ ಸಿಂಗಲ್ಸ್

8ನೇ ದಿನದಂದು ಪುರುಷದ ಸಿಂಗಲ್ಸ್ ನಲ್ಲಿ ಜೆಕ್ ರಿಪಬ್ಲಿಕ್ ನ ತಾಮಸ್ ಬೆರ್ಡಿಕ್ ಹಾಗೂ ಜಿರಿ ವೆಸೆಲ್ ನಡುವಿನ ಪಂದ್ಯದ ದೃಶ್ಯ

ಮಿಶ್ರ ಡಬಲ್ಸ್ ಪಂದ್ಯದಲ್ಲಿ ಲಿಯಾಂಡರ್ ಪೇಸ್

ಮಿಶ್ರ ಡಬಲ್ಸ್ ಪಂದ್ಯದಲ್ಲಿ ಲಿಯಾಂಡರ್ ಪೇಸ್

ಮಿಶ್ರ ಡಬಲ್ಸ್ ಪಂದ್ಯದಲ್ಲಿ ಲಿಯಾಂಡರ್ ಪೇಸ್ ಅವರ ಆಟದ ಭಂಗಿ

ಬ್ರಿಟನ್ನಿನ ತಾರೆ ಆಂಡಿ ಮರೆಗೆ ಗೆಲುವು

ಬ್ರಿಟನ್ನಿನ ತಾರೆ ಆಂಡಿ ಮರೆಗೆ ಗೆಲುವು

ಬ್ರಿಟನ್ನಿನ ತಾರೆ ಆಂಡಿ ಮರೆಗೆ ಆಸ್ಟ್ರೇಲಿಯಾದ ನಿಕ್ ವಿರುದ್ಧ ಗೆಲುವು ಸಿಕ್ಕ ಸಂದರ್ಭ

ಮಹಿಳೆಯರ ಡಬಲ್ಸ್ ಪಂದ್ಯದ ವೇಳೆ ಸಾನಿಯಾ

ಮಹಿಳೆಯರ ಡಬಲ್ಸ್ ಪಂದ್ಯದ ವೇಳೆ ಸಾನಿಯಾ

ಮಹಿಳೆಯರ ಡಬಲ್ಸ್ ಪಂದ್ಯದ ವೇಳೆ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Wimbledon updates : Roger Federer beats Marin Cilic to reach semi-finals. The 34-year-old Swiss saved three match points in the fourth before breaking Cilic's resistance 6-7 4-6 6-3 7-6 6-3.
Please Wait while comments are loading...