ಸಾನಿಯಾಗೆ 'ರಾಕೆಟ್ ರಾಣಿ' ಎಂದು ಬಿರುದು ಕೊಟ್ಟ ಕಿಂಗ್ ಖಾನ್

Posted By:
Subscribe to Oneindia Kannada

ಹೈದರಾಬಾದ್, ಜುಲೈ 014: ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಬಹುನಿರೀಕ್ಷಿತ 'ಏಸ್ ಅಗೇನ್​ಸ್ ಆಡ್ಸ್' ಜೀವನ ಚರಿತ್ರೆ ಪುಸ್ತಕವನ್ನು ಕಿಂಗ್ ಖಾನ್ ಶಾರುಖ್ ಖಾನ್ ಅವರು ಬುಧವಾರ ಅನಾವರಣಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಾನಿಯಾರನ್ನು ಹಾಡಿ ಹೊಗಳಿದ ಕಿಂಗ್ ಖಾನ್, ಸಾನಿಯಾ ಅವರು ಟೆನಿಸ್ ಲೋಕದ 'ರಾಕೆಟ್ ರಾಣಿ' ಎಂದು ಬಣ್ಣಿಸಿದರು.

ಬಾಲಿವುಡ್ ನಟ ಶಾರುಖ್ ಖಾನ್ ಬುಧವಾರ ಬಿಡುಗಡೆಗೊಳಿಸಲಿದ್ದಾರೆ. 29 ವರ್ಷದ ಸಾನಿಯಾ ಹಾಗೂ ಅವರ ತಂದೆ ಇಮ್ರಾನ್ ಮಿರ್ಜಾ ಅವರು ಈ ಪುಸ್ತಕವನ್ನು ಬರೆದಿದ್ದಾರೆ.

ಅಧಿಕೃತವಾಗಿ ಒಂದು ವಾರದ ಹಿಂದೆಯೇ ಈ ಪುಸ್ತಕ ಅನಾವರಣಗೊಂಡಿದೆ. ಆದರೆ, ಸೆಲೆಬ್ರಿಟಿಗಳಿಂದ ಪುಸ್ತಕವನ್ನು ಮತ್ತೊಮ್ಮೆ ಅನಾವರಣಗೊಳಿಸಿ ಹೆಚ್ಚಿನ ಪ್ರಚಾರವನ್ನು ನೀಡಲಾಗುತ್ತಿದೆ.

ಪಿಟಿ ಉಷಾ, ಮೇರಿ ಕೋಮ್, ಸಾನಿಯಾ ಮಿರ್ಜಾರಂಥ ಕ್ರೀಡಾಪಟುಗಳು ಯುವ ಜನಾಂಗದ ಮಾದರಿಯಾಗಿದ್ದಾರೆ. ವೃತ್ತಿ ಬದುಕನ್ನು ಕಟ್ಟಿಕೊಂಡ ರೀತಿ ಅನುಕರಣೀಯ. ದೇಶದ ಹೆಮ್ಮಯ ಸಂಕೇತವಾದ ಇಂಥ ಒಬ್ಬ ಸಾಧಕಿಯ ಜೀವನ ಚರಿತ್ರೆ ಅನಾವರಣಗೊಳಿಸಿದ್ದು ನನ್ನ ಸಂತೋಷ ಎಂದಿದ್ದಾರೆ. ಹೈದರಾಬಾದಿನಲ್ಲಿ ಬುಧವಾರ ನಡೆದ ಸಮಾರಂಭದ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಚಿತ್ರಗಳು ಮುಂದಿವೆ ನೋಡಿ...

ಸಾನಿಯಾ ಬಗ್ಗೆ ವಿಶೇಷ ಸಂಗತಿಗಳಿವೆ

ಸಾನಿಯಾ ಬಗ್ಗೆ ವಿಶೇಷ ಸಂಗತಿಗಳಿವೆ

ಹೈದರಾಬಾದ್​ನಲ್ಲಿ ಪುಟ್ಟ ಬಾಲಕಿಯಾಗಿದ್ದ ದಿನಗಳಿಂದ, ಯೂಸುಫ್ ಗಡ್ ದ ಕಾಲೇಜಿನ ವಿದ್ಯಾರ್ಥಿ ಜೀವನ ನಂತರ ವಿಶ್ವ ನಂ. 1 ಆಟಗಾರ್ತಿಯಾಗಿ ಬೆಳೆದಿದ್ದು ಎಲ್ಲವನ್ನು ಈ ಪುಸ್ತಕ ಹೊಂದಿದೆ.

ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಕಥೆ

ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಕಥೆ

ಸಾನಿಯಾರ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನ ಹಲವು ವಿಶಿಷ್ಟ, ಕುತೂಹಲಕಾರಿ ವಿಷಯಗಳನ್ನು ಈ ಪುಸ್ತಕ ಹೊಂದಿದೆ. ಅಪ್ಪ-ಮಗಳು ಸೇರಿ ಸುಮಾರು 5 ವರ್ಷಗಳ ನಂತರ ಪುಸ್ತಕ ಬರೆದು ಮುಗಿಸಿದ್ದಾರೆ.

ಮತ್ತೊಮ್ಮೆ ಲೋಕಾರ್ಪಣೆಯಾಗಲಿದೆ

ಮತ್ತೊಮ್ಮೆ ಲೋಕಾರ್ಪಣೆಯಾಗಲಿದೆ

ಹಾರ್ಪರ್ ಕಾಲಿನ್ಸ್ ಪುಸ್ತಕದ ಪ್ರಕಾಶಕರಾಗಿರುವ ಈ ಪುಸ್ತಕವನ್ನು ಜುಲೈ 17ರಂದು ಮುಂಬೈನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತೊಮ್ಮೆ ಲೋಕಾರ್ಪಣೆ ಮಾಡಲಿದ್ದಾರೆ.

ಪುಸ್ತಕಕ್ಕೆ ಪ್ರಚಾರ ನೀಡಲು ಮುಂದಾದ ಸೆಲೆಬ್ರಿಟಿಗಳು

ಪುಸ್ತಕಕ್ಕೆ ಪ್ರಚಾರ ನೀಡಲು ಮುಂದಾದ ಸೆಲೆಬ್ರಿಟಿಗಳು

ಪರಿಣಿತಿ ಚೋಪ್ರಾ , ನಿರ್ದೇಶಕಿ ಫರ್ಹಾ ಖಾನ್ ಅವರು ಕೂಡಾ ಪುಸ್ತಕಕ್ಕೆ ಪ್ರಚಾರ ನೀಡಲಿದ್ದಾರೆ.

ಆನ್​ಲೈನ್​ ನಲ್ಲಿ ಖರೀದಿಗೆ ಲಭ್ಯವಾಗಿದೆ

ಆನ್​ಲೈನ್​ ನಲ್ಲಿ ಖರೀದಿಗೆ ಲಭ್ಯವಾಗಿದೆ

238 ಪುಟಗಳ ಈ ಪುಸ್ತಕದ ಬೆಲೆ 290 ರು ಇರುವ ಏಸ್ ಅಗೇನ್​ಸ್ ಆಡ್ಸ್ ಸದ್ಯಕ್ಕೆ ಅನೇಕ ಪುಸ್ತಕ ಮಳಿಗೆಗಳು ಹಾಗೂ ಆನ್​ಲೈನ್​ ನಲ್ಲಿ ಖರೀದಿಗೆ ಲಭ್ಯವಾಗಿದೆ.

ಮಹಿಳಾ ಸಾಧಕಿಯರ ಬಗ್ಗೆ ಗೌರವ

ಮಹಿಳಾ ಸಾಧಕಿಯರ ಬಗ್ಗೆ ಗೌರವ

ಮಹಿಳಾ ಸಾಧಕಿಯರ ಬಗ್ಗೆ ನನಗೆ ವಿಶೇಷ ಗೌರವ. ಅವರ ಕೈಯಲ್ಲಿ ಆಗದೆ ಇರುವ ಕಾರ್ಯವೇ ಇಲ್ಲ. ಸಾನಿಯಾ ಅವರು ರಾಕೆಟ್(racquet) ರಾಣಿ ಎಂದು ಶಾರುಖ್ ಹೇಳಿದರು

 ಮಹಿಳೆಯರಿಗೆ ಪ್ರೀತಿ, ಪ್ರೋತ್ಸಾಹ ನೀಡಿ

ಮಹಿಳೆಯರಿಗೆ ಪ್ರೀತಿ, ಪ್ರೋತ್ಸಾಹ ನೀಡಿ

ಮಹಿಳೆಯರಿಗೆ ಪ್ರೀತಿ, ಪ್ರೋತ್ಸಾಹ ನೀಡಿದರೆ ಸಾನಿಯಾರಂಥ ಅದ್ಭುತ ಪ್ರತಿಭೆಗಳನ್ನು ಕಾಣಬಹುದು. ಇಮ್ರಾನ್ ಮಿರ್ಜಾ ಅವರು ತಂದೆಯಾಗಿ ಆಕೆಯನ್ನು ಬೆಳೆಸಿದ ರೀತಿ ಅನನ್ಯ ಎಂದು ಶಾರುಖ್ ಅವರು ಶ್ಲಾಘಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bollywood superstar Shah Rukh Khan today (July 13) launched the autobiography of tennis star Sania Mirza titled 'Ace Against Odds' here in Hyderabad.
Please Wait while comments are loading...