ವಿಡಿಯೋ: ರೊನಾಲ್ಡೊ ಸೂಪರ್ ಆಟ, ಯುರೋ ಫೈನಲ್ ಗೆ ಎಂಟ್ರಿ

Posted By:
Subscribe to Oneindia Kannada

ಲಿಯಾನ್(ಫ್ರಾನ್ಸ್), ಜುಲೈ 07: ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ನಾನಿ ತಲಾ ಒಂದೊಂದು ಗೋಲು ಬಾರಿಸಿ ಪೋರ್ಚುಗಲ್ ತಂಡವನ್ನು ಯುರೋ 2016 ಟೂರ್ನಿಯ ಫೈನಲ್ ಗೆ ತಲುಪಿಸಿದ್ದಾರೆ. ವೇಲ್ಸ್ ವಿರುದ್ಧದ ಪಂದ್ಯದಲ್ಲಿ ರೊನಾಲ್ಡೊ ಪಡೆ ಬಹುತೇಕ ಪ್ರಾಬಲ್ಯ ಮೆರೆದು ಅಂತಿಮ ಹಂತ ತಲುಪಿದೆ.

ಬುಧವಾರ ತಡರಾತ್ರಿ ನಡೆದ ಉಪಾಂತ್ಯ ಪಂದ್ಯದ 50ನೇ ನಿಮಿಷದಲ್ಲಿ ಅದ್ಭುತ ಹೆಡರ್‌ ಮೂಲಕ ರೊನೊಲ್ಡೊ ಅವರು ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದರು. [ಯುರೋ 2016 ಫುಟ್ಬಾಲ್ ಹಬ್ಬ ಫುಲ್ ವೇಳಾಪಟ್ಟಿ]

ನಂತರ 53ನೇ ನಿಮಿಷದಲ್ಲಿ ನಾನಿ ಅವರು ರೊನೊಲ್ಡೊ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದರು. [ಕೊಹ್ಲಿ ಬೆಂಬಲಿಸುವ ತಂಡ ಯಾವುದು?]

ಈ ಮೂಲಕ 2-0 ಮುನ್ನಡೆಯನ್ನು ಪಡೆದ ಪೋರ್ಚುಗಲ್ ಹಿಂತಿರುಗಿ ನೋಡಲಿಲ್ಲ. ಪಂದ್ಯದ 83ನೇ ನಿಮಿಷದಲ್ಲಿ ವೇಲ್ಸ್ ತಂಡ ಉತ್ತಮ ಅವಕಾಶವನ್ನು ಹಾಳು ಮಾಡಿಕೊಂಡಿತು. ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿ ನಿಗದಿತ 90 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದುಕೊಂಡಿದೆ. [ವಿಡಿಯೋ : ಇಟಲಿ ಮಣಿಸಿ ಸೆಮಿಫೈನಲ್ ತಲುಪಿದ ಜರ್ಮನಿ]

2004ರ ನಂತರ ಫೈನಲ್ ಗೇರಿದ ಪೋರ್ಚುಗೀಸ್

2004ರ ನಂತರ ಫೈನಲ್ ಗೇರಿದ ಪೋರ್ಚುಗೀಸ್

ಪೋರ್ಚುಗಲ್ ತಂಡ 2004ರಲ್ಲಿ ತವರು ನೆಲದಲ್ಲಿ ಯುರೋ ಕಪ್ ಫೈನಲ್‌ನಲ್ಲಿ ಗ್ರೀಸ್ ವಿರುದ್ಧ ಸೋತ ಬಳಿಕ ಇದೇ ಮೊದಲ ಬಾರಿ ಫೈನಲ್‌ಗೆ ತಲುಪಿದೆ. ಚಿತ್ರದಲ್ಲಿ : ಮೊದಲ ಗೋಲು ಗಳಿಸಿದ ರೊನಾಲ್ಡೊ

ಫ್ರಾನ್ಸ್ ಅಥವಾ ಜರ್ಮನಿ ಜತೆ ಗುದ್ದಾಟ

ಫ್ರಾನ್ಸ್ ಅಥವಾ ಜರ್ಮನಿ ಜತೆ ಗುದ್ದಾಟ

ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್ ನಲ್ಲಿ ಅತಿಥೇಯ ಫ್ರಾನ್ಸ್ ಹಾಗೂ ಹಾಲಿ ಚಾಂಪಿಯನ್ ಜರ್ಮನಿ ಮುಖಾಮುಖಿಯಾಗಲಿದ್ದು, ಈ ಪಂದ್ಯ ಗೆದ್ದವರು ಪೋರ್ಚುಗೀಸರನ್ನು ಎದುರಿಸಲಿದ್ದಾರೆ.

ಪೋರ್ಚುಗಲ್ ಸಾಧನೆ

ಪೋರ್ಚುಗಲ್ ಸಾಧನೆ

ಟೂರ್ನಿ ಆರಂಭದಲ್ಲಿ ಫೇವರೀಟ್ ತಂಡಗಳ ಪೈಕಿ ಕೊನೆ ಸ್ಥಾನದಲ್ಲಿದ್ದ ಪೋರ್ಚುಗಲ್ ತಂಡಕ್ಕೆ ನಾಯಕ ರೊನಾಲ್ಡೊ ಬಲ ತಂದಿದ್ದಾರೆ. ಯುರೋ ಕಪ್‌ನಲ್ಲಿ ಮೂರು ಸೆಮಿಫೈನಲ್‌ (2004, 2012, 2016) ಆಡಿದ ಏಕೈಕ ಆಟಗಾರ ಎನಿಸಿದ್ದಾರೆ.

ಮೂರು ಸೆಮಿಫೈನಲ್‌ ಆಡಿದ ಆಟಗಾರ

ಮೂರು ಸೆಮಿಫೈನಲ್‌ ಆಡಿದ ಆಟಗಾರ

ಕ್ರಿಸ್ಟಿಯಾನೊ ರೊನಾಲ್ಡೊ ಯುರೋ ಕಪ್‌ನಲ್ಲಿ ಮೂರು ಸೆಮಿಫೈನಲ್‌ಗಳನ್ನು(2004, 2012, 2016) ಆಡಿದ ಮೊದಲ ಆಟಗಾರ. ಪಂದ್ಯದ 50ನೇ ನಿಮಷದಲ್ಲಿ ಅದ್ಭುತ ಹೆಡರ್‌ ಮೂಲಕ ರೊನಾಲ್ಡೊ ಅವರು ಗೋಲು ಗಳಿಸಿದ ಚಿತ್ರ

ಮೈಕಲ್ ಪ್ಲಾಟಿನಿ ದಾಖಲೆ ಸರಿಗಟ್ಟಿದ ರೊನಾಲ್ಡೊ

ಮೈಕಲ್ ಪ್ಲಾಟಿನಿ ದಾಖಲೆ ಸರಿಗಟ್ಟಿದ ರೊನಾಲ್ಡೊ

ಒಟ್ಟಾರೆ ಯುರೋ ಚಾಂಪಿಯನ್ ಶಿಪ್ ನಲ್ಲಿ 20 ಪಂದ್ಯಗಳನ್ನಾಡಿರುವ ರೊನಾಲ್ಡೊ ಅವರು ಯುರೋ ಕಪ್‌ನಲ್ಲಿ 9 ಗೋಲು ಬಾರಿಸಿ ಮೈಕಲ್ ಪ್ಲಾಟಿನಿ ದಾಖಲೆ ಸರಿಗಟ್ಟಿದ್ದಾರೆ.

ನಾನಿ ಹೊಡೆದ ಗೋಲು

ನಾನಿ ಹೊಡೆದ ಗೋಲು

53ನೇ ನಿಮಿಷದಲ್ಲಿ ನಾನಿ ಅವರು ರೊನೊಲ್ಡೊ ನೀಡಿದ ಪಾಸ್ ಅನ್ನು ಗೋಲಾಗಿ ಪರಿವರ್ತಿಸಿದರು.

ರೊನಾಲ್ಡೋ ಗೆಳೆಯ ಬೇಲ್

ರೊನಾಲ್ಡೋ ಗೆಳೆಯ ಬೇಲ್

ರೊನಾಲ್ಡೋ ಗೆಳೆಯ ವೇಲ್ಸ್ ತಂಡದ ಸ್ಟಾರ್ ಗರೇತ್ ಬೇಲ್ ಅವರು ಹೆಚ್ಚಿನ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಚಿತ್ರದಲ್ಲಿ ಬಲಬದಿಯಲ್ಲಿ ಬೇಲ್ AP/PTI

50ರ ದಶಕದ ನಂತರ ವೇಲ್ಸ್ ಸಾಧನೆ

50ರ ದಶಕದ ನಂತರ ವೇಲ್ಸ್ ಸಾಧನೆ

50ರ ದಶಕದ ನಂತರ ವೇಲ್ಸ್ ಉತ್ತಮ ಸಾಧನೆ ತೋರಿ ಸೆಮಿಫೈನಲ್ ತಂದ ತಲುಪಿ ಪ್ರೇಕ್ಷಕರ ಮೆಚ್ಚುಗೆ ವ್ಯಕ್ತಪಡಿಸಿತು.

ಎರಡನೇ ಗೋಲಿನ ಸಂಭ್ರಮದಲ್ಲಿ ಪೋರ್ಚುಗೀಸ್

ಎರಡನೇ ಗೋಲಿನ ಸಂಭ್ರಮದಲ್ಲಿ ಪೋರ್ಚುಗೀಸ್

ಎರಡನೇ ಗೋಲಿನ ಸಂಭ್ರಮದಲ್ಲಿ ಪೋರ್ಚುಗೀಸ್ ತಂಡದ ಆಟಗಾರರು

ರೋಚಕ ಫೈನಲ್ ನಿರೀಕ್ಷೆ

ರೋಚಕ ಫೈನಲ್ ನಿರೀಕ್ಷೆ

ಎಲ್ಲಾ ಪಂದ್ಯಗಳು ಸೋನಿ ಸಿಕ್ಸ್/ ಸೋನಿ ಇಎಸ್ ಪಿಎನ್ ನಲ್ಲಿ ಪ್ರಸಾರವಾಗಲಿವೆ. ಸೈಂಟ್ ಡೆನಿಸ್ ನಲ್ಲಿ ಫೈನಲ್ ನಡೆಯಲಿದ್ದು ರೋಚಕ ಹಣಾಹಣಿ ನಿರೀಕ್ಷಿಸಬಹುದು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Cristiano Ronaldo scored one and assisted another to lead Portugal to a 2-0 win over Wales in the semifinals of the European Championship here on Wednesday(July 06).
Please Wait while comments are loading...