ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಚಾಲೆಂಜ್ ಕಪ್ ನಲ್ಲಿ ಭಾರತಕ್ಕೆ 2ನೇ ಸ್ಥಾನ, ಹೆಮ್ಮೆಯ ಸಾಧನೆ

ಐಸ್ ಹಾಕಿ ಚಾಲೆಂಜ್ ಕಪ್ ಏಷ್ಯಾದ 1ನೇ ವಿಭಾಗದಲ್ಲಿ ಭಾರತೀಯ ಆಟಗಾರರು ಹೆಮ್ಮೆಯ ಸಾಧನೆ ಮಾಡಿದ್ದಾರೆ. ಮಂಗಳವಾರದಂದು ಕೊನೆಗೊಂಡ ಐಐಎಚ್ಎಫ್ ಚಾಲೆಂಜ್ ಕಪ್ ಟೂರ್ನಮೆಂಟ್ ನಲ್ಲಿ ಭಾರತ ಎರಡನೇ ಸ್ಥಾನ ಪಡೆದುಕೊಂಡಿದೆ.

By Mahesh

ಕುವೈಟ್ ಸಿಟಿ, ಏಪ್ರಿಲ್ 26: ಐಸ್ ಹಾಕಿ ಚಾಲೆಂಜ್ ಕಪ್ ಏಷ್ಯಾದ 1ನೇ ವಿಭಾಗದಲ್ಲಿ ಭಾರತೀಯ ಆಟಗಾರರು ಹೆಮ್ಮೆಯ ಸಾಧನೆ ಮಾಡಿದ್ದಾರೆ. ಮಂಗಳವಾರದಂದು ಕೊನೆಗೊಂಡ ಐಐಎಚ್ಎಫ್ ಚಾಲೆಂಜ್ ಕಪ್ ಟೂರ್ನಮೆಂಟ್ ನಲ್ಲಿ ಭಾರತ ಎರಡನೇ ಸ್ಥಾನ ಪಡೆದುಕೊಂಡಿದೆ. ಅತಿಥೇಯ ಕುವೈಟ್ ತಂಡ ಮೊದಲ ಸ್ಥಾನ ಗಳಿಸಿದೆ.

ಒಮಾನ್ ವಿರುದ್ಧ 0-13ರಲ್ಲಿ ಗೆಲುವು ಸಾಧಿಸಿದ ಅತಿಥೇಯ ತಂಡ ಕುವೈಟ್ ಚಿನ್ನದ ಪದಕ ಗೆದ್ದರೆ, ಭಾರತದ ಎರಡನೇ ಸ್ಥಾನ, ಒಮಾನ್ ಮೂರನೇ ಸ್ಥಾನ ಪಡೆದುಕೊಂಡಿತು. ಮಕಾವ್ ಕೊನೆ ಸ್ಥಾನ ಗಳಿಸಿತು.

Ice Hockey: India finish 2nd at Challenge Cup of Asia in Kuwait

ಉತ್ತರ ಅಮೆರಿಕ, ಕೆನಡಾ, ಫಿನ್ ಲ್ಯಾಂಡ್, ಲಟ್ವಿಯ, ಚೆಕ್ ರಿಪಬ್ಲಿಕ್, ಮತ್ತುಸ್ಲೋವಾಕಿಯದಲ್ಲಿ ಹೆಚ್ಚು ಕಂಡು ಬರುವ ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಹಿಮಾಲಯ ಶ್ರೇಣಿಯ ಯುವ ಭಾರತ ತಂಡಕ್ಕೆ ಟೂರ್ನಮೆಂಟ್ ಆರಂಭದಲ್ಲಿ ಪ್ರಯೋಜಕರ ಕೊರತೆ ಎದುರಾಗಿತ್ತು.

ಕರ್ಜಕಿಸ್ತಾನದಲ್ಲಿ ವಿಶೇಷ ತರಬೇತಿ ಪಡೆದುಕೊಂಡ ಭಾರತ ತಂಡಕ್ಕೆ 26 ಲಕ್ಷ ರು ಖರ್ಚು ವೆಚ್ಚ ತಗುಲಿತ್ತು. ಟೂರ್ನಿ ಆರಂಭದಲ್ಲಿ ಹಣದ ಕೊರತೆ ಎದುರಾದಾಗ ಆಟಗಾರರು ತಮ್ಮ ಜೇಬಿನಿಂದ ಹಣ ತೆಗೆದು ತಂಡದ ತರಬೇತಿಗೆ ನೀಡಿದ್ದರು.

ಏಪ್ರಿಲ್ 22 ರಿಂದ 25ರ ವರೆಗೆ ನಡೆದ ಪಂದ್ಯಾವಳಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಒಮಾನ್ ವಿರುದ್ಧ ಏಪ್ರಿಲ್ 22ರಂದು ಆಡಿ 3-2 ರಲ್ಲಿ ಗೆಲುವು ಸಾಧಿಸಿತು. ಇದು ಕಳೆದ ಐದು ವರ್ಷಗಳಲ್ಲಿ ಭಾರತ ತಂಡದ ಮೊದಲ ಗೆಲುವಾಗಿತ್ತು. 2012ರಲ್ಲಿ ಮಕಾವ್ ಚಾಲೆಂಜ್ ಕಪ್ ನಲ್ಲಿ ಒಂದು ಪಂದ್ಯ ಮಾತ್ರ ಗೆದ್ದಿತ್ತು.

ಒಮಾನ್ ವಿರುದ್ಧ ಗೆದ್ದು ಕುವೈಟ್ ವಿರುದ್ಧ 8-5ರಲ್ಲಿ ಸೋತ ಭಾರತ ಮುಂದಿನ ಪಂದ್ಯದಲ್ಲಿ ಮಕಾವ್ ವಿರುದ್ಧ 7-3 ರಲ್ಲಿ ಗೆದ್ದು ಲೀಗ್ ಪಟ್ಟಿಯಲ್ಲಿ ಎರಡೇ ಸ್ಥಾನಕ್ಕೇರಿತು.

1. ಕುವೈಟ್ (ಆಡಿದ ಪಂದ್ಯ 4, ಗೆಲುವು 3, ಸೋಲು 0) - ಅಂಕಗಳು - 9
2. ಭಾರತ (P 3, W 2, L 1) - P - 6
3. ಒಮಾನ್ (P 3, W 1, L 2) - P - 3
4. ಮಕಾವ್ (P 3, W 0, L 3) - P - 0

ಹೆಚ್ಚಿನ ಮಾಹಿತಿಗೆ ಐಸ್ ಹಾಕಿ ಇಂಡಿಯಾ ವೆಬ್ ತಾಣಕ್ಕೆ ಭೇಟಿ ನೀಡಿ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:15 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X