ಹಾಂಗ್ ಕಾಂಗ್ ಓಪನ್: ಅಂತಿಮ ಹಣಾಹಣಿಯಲ್ಲಿ ಸಿಂಧುಗೆ ಸೋಲು

Posted By:
Subscribe to Oneindia Kannada

ಹಾಂಗ್ ಕಾಂಗ್, ನವೆಂಬರ್ 27: ಹಾಂಗ್ ಕಾಂಗ್ ಓಪನ್ ಬಾಡ್ಮಿಂಟನ್ ಟೂರ್ನಮೆಂಟ್ ನ ಅಂತಿಮ ಹಣಾಹಣಿಯಲ್ಲಿ ಭಾರತ ಹೆಮ್ಮೆಯ ಆಟಗಾರ್ತಿ ಪಿವಿ ಸಿಂಧು ಅವರು ಸೋಲು ಕಂಡಿದ್ದಾರೆ. ಚೈನೀಸ್ ತೈಪೆಯ ಸ್ಪರ್ಧಿ ಗೆಲುವು ಸಾಧಿಸಿ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.


ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಅವರು ನಾಲ್ಕನೇ ಸೀಡೆಡ್ ನ ಚೈನೀಸ್ ತೈಪೆಯ ತಾಯಿ ತ್ಸು ಯಿಂಗ್ ಅವರ ವಿರುದ್ಧ 15-21, 17-21 ಅಂತರದಲ್ಲಿ ಸೋಲು ಕಂಡರು.

Hong Kong Open2016 Super Series final : PV Sindhu loses to Tai Tzu Ying

ಹಾಂಗ್ ಕಾಂಗ್ ನ ಚೆಯುಂಗ್ ಗ್ಯಾನ್ ಯಿ ವಿರುದ್ಧ ಗೆದ್ದು ಸಿಂಧು ಫೈನಲ್ ಹಂತ ಪ್ರವೇಶಿಸಿದ್ದರು. ಚೀನಾ ಓಪನ್ ಸೂಪರ್ ಸರಣಿ ಪ್ರಶಸ್ತಿ ಗೆದ್ದಿರುವ ಸಿಂಧು ಅವರು ಹಾಂಗ್ ಕಾಂಗ್ ಓಪನ್ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ.

ಇನ್ನೊಂದೆಡೆ ಭಾರತದ ಸಮೀರ್ ವರ್ಮ ಅವರು ಮೂರನೇ ಸೀಡೆಡ್ ನ ಜೋರ್ಗೆಂಗ್ಸೆನ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hong Kong Open2016 Super Series final : Olympic Silver medalist P.V. Sindhu loses 15-21 17-21 to Tai Tzu-ying
Please Wait while comments are loading...