ವಿಶ್ವ ಹಾಕಿ ಲೀಗ್, ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ

Posted By:
Subscribe to Oneindia Kannada

ಲಂಡನ್, ಜೂನ್ 18 : ಇಲ್ಲಿ ನಡೆಯುತ್ತಿರುವ ಪುರುಷರ ವಿಶ್ವ ಹಾಕಿ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ಬಗ್ಗು ಬಡಿದು ತನ್ನ ಗೆಲುವಿನ ನಾಗಲೋಟವನ್ನು ಮುಂದುವರೆಸಿದೆ.

ಭಾನುವಾರ ಪುರುಷರ ವಿಶ್ವ ಹಾಕಿ ಲೀಗ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸಾಂಘಿಕ ಹೋರಾಟದ ನೆರವಿನಿಂದ ಭಾರತ 7-1 ಅಂತರದಿಂದ ಗೆಲುವು ಸಾಧಿಸಿದೆ.

Hockey World League: India rout Pakistan 7-1

ಹರ್ಮನ್‌ ಪ್ರೀತ್ ಸಿಂಗ್‌ 13 ಮತ್ತು 33ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ, ತಲ್ವಿಂದರ್ 21 ಮತ್ತು 24, ಆಕಾಶ್ ದೀಪ್ ಸಿಂಗ್‌ 47 ಮತ್ತು 48 ನಿಮಿಷಗಳಲ್ಲಿ ತಲಾ ಎರಡು ಗೋಲುಗಳನ್ನು ಬಾರಿಸಿದರು. ಇನ್ನು ಪ್ರದೀಪ್ 49ನೇ ನಿಮಿಷದಲ್ಲಿ ಏಕೈಕ ಗೋಲು ಬಾರಿಸಿದರು.

ಕಪ್ಪುಪಟ್ಟಿ ಕಟ್ಟಿ ಉಗ್ರರ ದಾಳಿ ಖಂಡಿಸಿದ ಭಾರತದ ಹಾಕಿ ಆಟಗಾರರು

ಹರ್ಮನ್ ಪ್ರೀತ್ ಸಿಂಗ್ ಹಾಗೂ ತಲ್ವಿಂದರ್ ಸಿಂಗ್ ಸಹಾಸದದಿಂದ ಮೊದಲಾರ್ಧದಲ್ಲಿ ಭಾರತ 3-0 ಅಂತರದಿಂದ ಮುನ್ನಡೆ ಸಾಧಿಸಿತು. ಇನ್ನು ದ್ವಿತೀಯಾರ್ಧದಲ್ಲಿ ಪಾಕಿಸ್ತಾನದಲ್ಲಿ ಮೇಲೆ ಮತ್ತಷ್ಟು ಸವಾರಿ ಮಾಡಿದ ಭಾರತ ನಾಲ್ಕು ಗೋಲುಗಳನ್ನು ಭಾರಿಸಿತು.

ಪಾಕಿಸ್ತಾನದ ಪರ ಮುಹಮ್ಮದ್ ಉಮರ್ ಅವರು ಒಂದು ಗೋಲು ಬಾರಿಸಲಷ್ಟೇ ಶಕ್ತರಾದರು. ಸ್ಕಾಟ್ಲೆಂಡ್ ಮತ್ತು ಕೆನಡಾ ತಂಡಗಳನ್ನು ಸೋಲಿಸಿ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡ ಜೂನ್ 20ರಂದು ಪ್ರಬಲ ನೆದರ್ ಲೆಂಡ್ ತಂಡವನ್ನು ಎದುರಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Penalty corner specialist Harmanpreet Singh and forwards Talwinder Singh and Akashdeep Singh scored a brace apiece as India flayed Pakistan 7-1 in a Pool B clash to storm into the quarter-finals of the Hockey World League (HWL) Semi Final here on Sunday (June 18).
Please Wait while comments are loading...