ಹಾಕಿ ಶ್ರೇಯಾಂಕ : 5ನೇ ಸ್ಥಾನಕ್ಕೇರಿದ ಭಾರತ ಪುರುಷರ ತಂಡ

Posted By:
Subscribe to Oneindia Kannada

ಬೆಂಗಳೂರು, ಜೂನ್ 28: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್(ಎಫ್ ಐಎಚ್) ಮಂಗಳವಾರ ಪ್ರಕಟ ಮಾಡಿರುವ ನೂತನ ಶ್ರೇಯಾಂಕ ಪಟ್ಟಿಯಂತೆ ಭಾರತೀಯ ಪುರುಷರ ಹಾಕಿ ತಂಡ ಸರ್ವಶ್ರೇಷ್ಠ ಐದನೇ ಸ್ಥಾನಕ್ಕೇರಿದೆ.

ಲಂಡನ್ನಿನಲ್ಲಿ ಮುಕ್ತಾಯವಾದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಂತರ ಶ್ರೇಯಾಂಕ ಬಿಡುಗಡೆಯಾಗಿದ್ದು, ಈ ಟೂರ್ನಿಯಲ್ಲಿ ಭಾರತ ತಂಡ ಪ್ರಪ್ರಥಮ ಬಾರಿಗೆ ಫೈನಲ್ ತಲುಪಿದ ಸಾಧನೆ ಮಾಡಿತ್ತು. [ಚಾಂಪಿಯನ್ಸ್ ಟ್ರೋಫಿ: 38ವರ್ಷಗಳ ಬಳಿಕ ಫೈನಲ್ ತಲುಪಿದ ಭಾರತ]

Hockey Rankings: Indian men's team climbs to 5th spot

ಈ ಮೂಲಕ ಏಳನೇ ಶ್ರೇಯಾಂಕದಿಂದ ಐದನೇ ಶ್ರೇಯಾಂಕಕ್ಕೆ ಬಡ್ತಿ ಪಡೆದುಕೊಂಡಿದೆ. ಇದಕ್ಕೂ ಮುನ್ನ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿಯಲ್ಲಿ ಓಲ್ತಾಮನ್ಸ್ ಕೋಚಿಂಗ್ ತಂಡ ರನ್ನರ್ ಅಪ್ ಆಗಿತ್ತು. [ಹಾಕಿ ಇಂಡಿಯಾ ಕ್ಯಾಪ್ಟನ್ ಸರ್ದಾರ್ ಮೇಲೆ ರೇಪ್ ಕೇಸ್]

ಚಾಂಪಿಯನ್ಸ್ ಟ್ರೋಫಿ ಫೈನಲ್​ ನಲ್ಲಿ ಭಾರತ ವಿರುದ್ಧ ಗೆಲುವು ಸಾಧಿಸಿದ(1-3) ಆಸ್ಟ್ರೇಲಿಯಾ ತಂಡ ಶ್ರೇಯಾಂಕ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದೆ. ದ್ವೀತಿಯ ಸ್ಥಾನ ನೆದರ್ಲೆಂಡ್ ಹಾಗೂ ತೃತೀಯ ಸ್ಥಾನವನ್ನು ಜರ್ಮನಿ ತಂಡಗಳಿವೆ.

ಮಹಿಳಾ ವಿಭಾಗದಲ್ಲಿ ಅರ್ಜೆಂಟೀನಾ ಅಗ್ರ ಸ್ಥಾನ ಪಡೆದಿದ್ದು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದೆ. ಭಾರತದ ವನಿತೆಯರು 13ನೇ ಸ್ಥಾನ ಪಡೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India's men's team climbed to the 5th spot of the International Hockey Federation (FIH) rankings on Tuesday (June 28).
Please Wait while comments are loading...