ಅರ್ಜುನ ಪ್ರಶಸ್ತಿಗೆ ಕನ್ನಡಿಗ ರಘುನಾಥ್ ಹೆಸರು ಶಿಫಾರಸು

Posted By:
Subscribe to Oneindia Kannada

ನವದೆಹಲಿ, ಮೇ 11: ಕರ್ನಾಟಕದ ಹೆಮ್ಮೆಯ ಹಾಕಿ ಪಟು ವಿಆರ್ ರಘುನಾಥ್ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿ, ಕೇಂದ್ರ ಸರ್ಕಾರಕ್ಕೆ ಪಟ್ಟಿಯನ್ನು ಹಾಕಿ ಇಂಡಿಯಾ ಕಳಿಸಿದೆ.

ವಿಆರ್ ರಘುನಾಥ್ ಅಲ್ಲದೆ ಭಾರತೀಯ ಮಹಿಳಾ ಹಾಕಿ ತಂಡದ ನಾಯಕಿ ರಿತು ರಾಣಿ, ಧರಮ್ ವೀರ್ ಸಿಂಗ್ ಅವರ ಹೆಸರು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. [ಕ್ರೀಡಾಪಟುಗಳಿಗೆ ಅಭಯ ನೀಡಿದ ಸಿಎಂ ಸಿದ್ದರಾಮಯ್ಯ]

Hockey: Raghunath, Ritu Rani recommended for Arjuna Award

ಸಿಲ್ವನಸ್ ಡಂಗ್ ಡಂಗ್ ಅವರ ಹೆಸರನ್ನು ಮೇಜರ್ ಧ್ಯಾನ್ ಚಂದ್ ಜೀವಮಾನದ ಸಾಧನೆ ಪ್ರಶಸ್ತಿಗೆ ಹಾಗೂ ಕೊಚ್ ಸಿಆರ್ ಕುಮಾರ್ ಅವರ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಿ ಹಾಕಿ ಇಂಡಿಯಾ ಮೇ11 ರಂದು ಪ್ರಕಟಣೆ ಹೊರಡಿಸಿದೆ.

ಭಾರತದ ಫೀಲ್ಡ್ ಹಾಕಿ ಆಟಗಾರರಾಗಿದ್ದ ವಿ.ಎಚ್ ರಾಮಚಂದ್ರ ಅವರ ಪುತ್ರ ವಿ.ಆರ್ ರಘುನಾಥ್ ಅವರು 2005ರಲ್ಲಿ ಗಾಯಾಳು ಸಂದೀಪ್ ಸಿಂಗ್ ಬದಲಿಗೆ ಹಾಕಿ ಇಂಡಿಯಾ ತಂಡ ಸೇರಿಕೊಂಡರು. 2007ರಲ್ಲಿ ಸುಲ್ತಾನ್ ಅಜ್ಲಾನ್ ಶಾ ಕಪ್ ನಲ್ಲಿ ಕಂಚಿನ ಪದಕ ಗೆದ್ದುಕೊಂಡ ತಂಡದಲ್ಲಿದ್ದರು. 2008ರಲ್ಲಿ ಬೆಳ್ಳಿ, ಏಷ್ಯಾಕಪ್ ನಲ್ಲಿ 2007ರಲ್ಲಿ ಚಿನ್ನ, 2013ರಲ್ಲಿ ಬೆಳ್ಳಿ ಗೆದ್ದ ತಂಡದಲ್ಲಿ ಆಡಿ 6 ಗೋಲು ಗಳಿಸಿ ಟೂರ್ನಮೆಂಟ್ ನ ಶ್ರೇಷ್ಠ ಆಟಗಾರ ಎನಿಸಿಕೊಂಡರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian women's team captain Ritu Rani and senior's men's team drag-flicker VR Raghunath were today (May 11) recommended by Hockey India for the Arjuna Award.
Please Wait while comments are loading...