ಏಷ್ಯಾ ಕಪ್‌ ಹಾಕಿ: ಪಾಕಿಸ್ತಾನವನ್ನು ಮಟ್ಟ ಹಾಕಿದ ಭಾರತ!

Written By: Ramesh
Subscribe to Oneindia Kannada

ಢಾಕಾ, ಸೆ. 30 : ಅತ್ತ ಪಾಕಿಸ್ತಾನದ ಗಡಿಯಲ್ಲಿ ನುಸುಳುಕೋರರನ್ನು ಮಟ್ಟಹಾಕಿದ್ದರೆ. ಇತ್ತ ಭಾರತ ಕಿರಿಯರ ಹಾಕಿ ತಂಡ 18 ವರ್ಷದೊಳಗಿನವರ ಏಷ್ಯಾ ಕಪ್‌ ಹಾಕಿ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಅಬ್ಬರಿಸುವ ಮೂಲಕ ಫೈನಲ್ ಗೆ ಪ್ರವೇಶಿಸಿದೆ.

ಗುರುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 3-1 ಗೋಲು ಗಳಿಂದ ಪಾಕಿಸ್ತಾನವನ್ನು ಮಣಿಸಿತು. ಪಂದ್ಯ ಆರಂಭದಲ್ಲೇ ದಿಲ್ ಪ್ರೀತ್ ಸಿಂಗ್‌ ಭಾರತದ ಪಾಳಯದಲ್ಲಿ ಸಂತಸದ ಹೊನಲು ಹರಿಸಿದರು. 32ನೇ ನಿಮಿಷದಲ್ಲಿ ತಮಗೆ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಶರವೇಗದಲ್ಲಿ ಗೋಲ್ ನತ್ತ ಅಟ್ಟಿ ಯಶಸ್ವಿಯಾದರು.

Hockey

46ನೇ ನಿಮಿಷದಲ್ಲಿ ನಾಯಕ ಸಂಜೀಪ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ರೀತಿ ಮನಸೆಳೆಯುವಂತಿತ್ತು. ಇದರೊಂದಿಗೆ ಭಾರತದ ಗೆಲುವು ಖಾತ್ರಿಯಾಯಿತು. ಇಷ್ಟಾದರೂ ಪಾಕಿಸ್ತಾನ ತಂಡ ಹೋರಾಟ ಮುಂದುವರಿಸಿತು.

63ನೇ ನಿಮಿಷದಲ್ಲಿ ಈ ತಂಡದ ಅಮ್ಜದ್‌ ಅಲಿ ಖಾನ್‌ ಗೋಲು ಗಳಿಸಿ ಹಿನ್ನಡೆಯನ್ನು 1-3ಕ್ಕೆ ತಗ್ಗಿಸಿದರು. ಬಳಿಕದ ಎಚ್ಚರಿಕೆಯ ಆಟ ಆಡಿದ ಭಾರತ ಪಂದ್ಯ ಗೆದ್ದು ಬೀಗಿತು. ಪಾಕಿಸ್ತಾನ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿದ ಭಾರತ ತಂಡವನ್ನು ಕೇಂದ್ರ ಕ್ರೀಡಾ ಸಚಿವ ವಿಜಯ್‌ ಗೋಯಲ್ ಅಭಿನಂದಿಸಿದ್ದಾರೆ.

ಅವರು ತಮ್ಮ ಟ್ವೀಟ್ ನಲ್ಲಿ ಕಿರಿಯ ಆಟಗಾರರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ನಡೆಯುವ ಫೈನಲ್‌ನಲ್ಲಿ ಭಾರತ ತಂಡ ಆತಿಥೇಯ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
India outplayed Pakistan 3-1 to enter the final of the Under-18 Asia Cup hockey tournament here on Thursday (September 29).
Please Wait while comments are loading...