ಚಾಂಪಿಯನ್ಸ್ ಟ್ರೋಫಿ: 38ವರ್ಷಗಳ ಬಳಿಕ ಫೈನಲ್ ತಲುಪಿದ ಭಾರತ

Posted By:
Subscribe to Oneindia Kannada

ಲಂಡನ್, ಜೂನ್ 17: 36ನೇ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ ತಂಡ 38 ವರ್ಷಗಳ ಬಳಿಕ ಫೈನಲ್​ಗೆ ಪ್ರವೇಶ ಪಡೆದಿದೆ. ಬ್ರಿಟನ್ ಮತ್ತು ಬೆಲ್ಜಿಯಂ ನಡುವಿನ ಪಂದ್ಯ 3-3 ರಿಂದ ಡ್ರಾ ಆದ ಕಾರಣ, ಭಾರತ ತಂಡದ ಫೈನಲ್ ಹಾದಿ ಸುಗುಮವಾಯಿತು. ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತವನ್ನು ಆಸ್ಟ್ರೇಲಿಯಾ ತಂಡ ಎದುರಿಸಲಿದೆ.

ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2-4 ಗೋಲುಗಳ ಅಂತರದಿಂದ ಭಾರತ ತಂಡ ಸೋಲು ಅನುಭವಿಸಿ ನೇರವಾಗಿ ಫೈನಲ್ ಪ್ರವೇಶಿಸುವ ಅವಕಾಶ ಕಳೆದುಕೊಂಡಿತ್ತು. ಭಾರತ 7 ಅಂಕ ಗಳಿಸಿ 2ನೇ ಸ್ಥಾನದಲ್ಲಿತ್ತು. ಈಗ ಫೈನಲ್ ನಲ್ಲಿ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ. [ಹಾಕಿ: ಚಾಂಪಿಯನ್ಸ್ ಟ್ರೋಫಿಗೆ ತಂಡ ಪ್ರಕಟ, ಶ್ರೀಜೇಶ್ ನಾಯಕ!]

 Hockey: India enter Champions Trophy final for 1st time in 38 years

ಆದರೆ, ಬ್ರಿಟನ್ ಮತ್ತು ಬೆಲ್ಜಿಯಂ ತಂಡಗಳ ನಡುವಿನ ಪಂದ್ಯ ಡ್ರಾ ಆದ ಕಾರಣ ಭಾರತಕ್ಕೆ ಫೈನಲ್ ಪ್ರವೇಶಿಸುವ ಅವಕಾಶ ದೊರೆಯಿತು. ಬ್ರಿಟನ್ ಒಂದು ವೇಳೆ ಪಂದ್ಯ ಗೆದ್ದಿದ್ದರೆ ಭಾರತಕ್ಕೆ ಅವಕಾಶ ಸಿಗುತ್ತಿರಲಿಲ್ಲ, ಬ್ರಿಟನ್ ತಂಡ 6 ಅಂಕ ಕಲೆ ಹಾಕಿ ನಾಲ್ಕನೇ ಸ್ಥಾನಕ್ಕೆ ದೂಡಲ್ಪಟ್ಟರೆ, ಬೆಲ್ಜಿಯಂ ತಂಡ 5 ಅಂಕಗಳೊಂದಿಗೆ ಐದನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. [ಅರ್ಜುನ ಪ್ರಶಸ್ತಿಗೆ ಕನ್ನಡಿಗ ರಘುನಾಥ್ ಹೆಸರು ಶಿಫಾರಸು]

1982ರಲ್ಲಿ ನೆದರ್ಲೆಂಡ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಳಿಕ ಮೊಟ್ಟಮೊದಲ ಬಾರಿಗೆ ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ ತಲುಪಿದೆ. ಶುಕ್ರವಾರ ರಾತ್ರಿ ಫೈನಲ್ ಪಂದ್ಯ ನಡೆಯಲಿದೆ. 1978ರಲ್ಲಿ ಆರಂಭಗೊಂಡ ಆರು ರಾಷ್ಟ್ರಗಳ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಂಡ ಈ ಬಾರಿ ಉತ್ತಮ ಸಾಧನೆ ತೋರಿ ಅಂತಿಮ ಹಣಾಹಣಿ ತನಕ ತಲುಪಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian men's hockey team had their date with history as they clinched a maiden appearance in the final of the prestigious 36th Hero Champions Trophy Hockey tournament against formidable Australia after hosts Great Britain held Belgium to 3-3 draw in a final round robin match.
Please Wait while comments are loading...