ಒಲಿಂಪಿಕ್ಸ್ ಗೆ ಪೇಸ್, ಬೋಪಣ್ಣ ಜೋಡಿ ಆಟ

Posted By:
Subscribe to Oneindia Kannada

ನವದೆಹಲಿ, ಜೂನ್ 12: ಭಾರತದ ಹೆಮ್ಮೆಯ ಟೆನಿಸ್ ತಾರೆ ಲಿಯಾಂಡರ್ ಪೇಸ್ ಅವರು ದಾಖಲೆಯ ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದಾರೆ. ರೋಹನ್ ಬೋಪಣ್ಣ ಅವರ ಜೋಡಿಯಾಗಿ ಪೇಸ್‌ರನ್ನು ಒಲಿಂಪಿಕ್ಸ್‌ನಲ್ಲಿ ಸ್ಪರ್ಧೆಗಿಳಿಯಲಿದ್ದಾರೆ ಎಂದು ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ) ತಿಳಿಸಿದೆ.

ಒಲಿಂಪಿಕ್ಸ್‌ನಲ್ಲಿ ನೇರ ಪ್ರವೇಶ ಪಡೆದಿದ್ದ ರೋಹಣ್ಣ ಬೋಪಣ್ಣ ಅವರು ತನ್ನ ಡಬಲ್ಸ್ ಜೊತೆಗಾರನನ್ನು ಆಯ್ಕೆ ಮಾಡುವ ಅವಕಾಶ ಪಡೆದಿದ್ದರು. ಅದರಂತೆ ಶುಕ್ರವಾರದಂದು ಸಾಕೇತ್ ಮೈನೇನಿ ಅವರನ್ನು ಆಯ್ಕೆ ಮಾಡಿದ್ದರು. ಆದರೆ, ಪೇಸ್ ಅವರು ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುತ್ತಿದ್ದಂತೆ, ಪೇಸ್ ಜೋಡಿಯಾಗಿ ಆಡುವಂತೆ ಬೋಪಣ್ಣ ಅವರಿಗೆ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್(ಎಐಟಿಎ) ಶನಿವಾರ ಸೂಚಿಸಿದೆ.[ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಟೆನಿಸ್ ತಾರೆ ಬೋಪಣ್ಣ]

Leander Paes to Partner Rohan Bopanna at 2016 Rio Olympics: AITA

ಆಗಸ್ಟ್ 5 ರಿಂದ ಆರಂಭವಾಗಲಿರುವ ಒಲಿಂಪಿಕ್ಸ್‌ಗೆ ಭಾರತೀಯ ಟೆನಿಸ್ ತಂಡಗಳನ್ನು ಎಐಟಿಎ ಅಧ್ಯಕ್ಷ ಅನಿಲ್ ಖನ್ನಾ, ಅವರು ಪ್ರಕಟಿಸಿದರು. ಬೋಪಣ್ಣ ಅವರು ಪುರುಷರ ಡಬಲ್ಸ್‌ನಲ್ಲಿ ಪೇಸ್‌ರೊಂದಿಗೆ ಆಡಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ವಿಶ್ವದ ನಂ.1 ಡಬಲ್ಸ್ ಆಟಗಾರ್ತಿ ಸಾನಿಯಾ ಮಿರ್ಜಾರೊಂದಿಗೆ ಬೋಪಣ್ಣ ಕಣಕ್ಕಿಳಿಯಲಿದ್ದಾರೆ. ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಅವರು ಪ್ರಾರ್ಥನಾ ಥಾಂಬರೆ ಜೊತೆ ಆಡಲಿದ್ದಾರೆ ಎಂದರು.


ಪೇಸ್ ಹಾಗೂ ಬೋಪಣ್ಣ ಡೇವಿಸ್ ಕಪ್‌ನಲ್ಲಿ ನಾಲ್ಕು ಬಾರಿ ಒಟ್ಟಿಗೆ ಆಡಿದ್ದಾರೆ. 2-2 ದಾಖಲೆ ಹೊಂದಿದ್ದಾರೆ. ಡೇವಿಸ್ ಕಪ್ ಕೋಚ್ ಜೀಶನ್ ಅಲಿ ಆರನ್ನು ಒಲಿಂಪಿಕ್ಸ್ ಟೆನಿಸ್ ತಂಡದ ನಾಯಕರಾಗಿ ನೇಮಿಸಲಾಗಿದೆ ಎಂದು ಅನಿಲ್ ಖನ್ನಾ ಹೇಳಿದರು. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Leander Paes has been chosen to partner Rohan Bopanna in the men's doubles category and The AITA also announced Sania Mirza will partner Bopanna in the mixed doubles category, Sania Mirza and Prarthana Thombare in womens doubles in the 2016 Rio Olympics by the All India Tennis Association
Please Wait while comments are loading...