ಕಂಚಿನ ಪದಕ ವಿಜೇತೆ ಸಾಕ್ಷಿಗೆ 3.5 ಕೋಟಿ ರು ಗೂ ಅಧಿಕ ಬಹುಮಾನ

By: ಕ್ರೀಡಾ ಡೆಸ್ಕ್
Subscribe to Oneindia Kannada

ರಿಯೋ ಡಿ ಜನೈರೋ, ಆಗಸ್ಟ್ 20: ರಿಯೋ ಒಲಿಂಪಿಕ್ಸ್ ನಲ್ಲಿ ಪದಕದ ಬರ ಎದುರಿಸುತ್ತಿದ್ದ ಭಾರತಕ್ಕೆ ಕಂಚಿನ ಪದಕ ದಕ್ಕಿಸಿಕೊಟ್ಟಿರುವ ಕುಸ್ತಿಪಟು ಸಾಕ್ಷಿ ಮಲಿಕ್ ಭಾರತೀಯ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿದ್ದಾರೆ. ಪದಕ ಗೆದ್ದ ಹರ್ಯಾಣದ ಪುತ್ರಿಗೆ ಈಗಾಗಲೇ 3.5 ಕೋಟಿ ರು ಗೂ ಅಧಿಕ ಬಹುಮಾನ ಲಭಿಸಿದೆ. [ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

ಈವರೆಗೆ ಒಲಿಂಪಿಕ್ಸ್ ನಲ್ಲಿ ಕುಸ್ತಿ ವಿಭಾಗದಲ್ಲಿ ಪದಕ ಜಯಿಸಿದ 4ನೇ ಭಾರತದ ಕುಸ್ತಿ ಪಟು ಎಂಬ ಕೀರ್ತಿಗೆ ಸಾಕ್ಷಿ ಮಲಿಕ್ ಪಾತ್ರರಾಗಿದ್ದಾರೆ. [12 ವರ್ಷಗಳ ನನ್ನ ತಪಸ್ಸಿಗೆ ಈಗ ಫಲ ಸಿಕ್ಕಿದೆ: ಸಾಕ್ಷಿ]

ಇವರ ಈ ಸಾಧನೆಗೆ ದೇಶದ ಮೂಲೆ ಮೂಲೆಗಳಿಂದ ಅಭಿನಂದನೆಗಳು ಹರಿದು ಬರುತ್ತಿರುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಬಹುಮಾನಗಳ ಮಹಾಪೂರವೇ ಹರಿದು ಬಂದಿವೆ. [ರಿಯೋ 2016: ಚಿನ್ನ ಪದಕಕ್ಕಾಗಿ ಹೀಗೂ ಮಾಡ್ತಾರೆ]

ಮೊದಲ ಬಾರಿಗೆ ಹರಿಯಾಣದ ಹುಡುಗಿಯೊಬ್ಬಳು ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದಿದ್ದಾರೆ ಎಂದು ಹರಿಯಾಣ ಸಿಎಂ ಮನೋಹರ್ ಲಾಲ್ ಕತ್ತಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹರಿಯಾಣ ಸರಕಾರ ಈಕೆಗೆ 2.5 ಕೋಟಿ ರೂ ಬಹುಮಾನ ಘೋಷಿಸಿದೆ.

ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಪ್ರವೇಶಿಸಿ ಪದಕ ಗೆದ್ದ ಸಾಧನೆ ಮಾಡಿರುವ ಸಾಕ್ಷಿ ಅವರಿಗೆ ಯಾರೆಲ್ಲ ಬಹುಮಾನಗಳನ್ನು ನೀಡಿದ್ದಾರೆ ಎಂಬುವುದನ್ನು ಮುಂದೆ ಓದಿ...

ಪ್ರಯೋಜಿತ ಪ್ರವಾಸದ ಪ್ಯಾಕೇಜ್

ಪ್ರಯೋಜಿತ ಪ್ರವಾಸದ ಪ್ಯಾಕೇಜ್

ಭಾರತೀಯ ರೈಲ್ವೆಯ ಐಆರ್ ಸಿಟಿಸಿ ಕೂಡಾ ಪ್ರಯೋಜಿತ ಪ್ರವಾಸದ ಪ್ಯಾಕೇಜ್ ಘೋಷಿಸಿದೆ. ಐಷಾರಾಮಿ ಮಹಾರಾಜ ಎಕ್ಸ್ ಪ್ರೆಸ್ ಟ್ರೈನ್ ನಲ್ಲಿ ಸುತ್ತಾಡಲು ಟಿಕೆಟ್ ನೀಡುತ್ತಿದೆ. ಸಾಮಾನ್ಯ ಪ್ರಯಾಣಿಕರಿಗೆ ಸುಮಾರು 2910 ಡಾಲರ್ (2 ಲಕ್ಷ ರು ದರ)

ಹರ್ಯಾಣ ಸರ್ಕಾರದಿಂದ ಬಂಪರ್ ಆಫರ್

ಹರ್ಯಾಣ ಸರ್ಕಾರದಿಂದ ಬಂಪರ್ ಆಫರ್

ಹರ್ಯಾಣ ಸರ್ಕಾರ 2.5 ಕೋಟಿ ರು ಬಹುಮಾನ ಘೋಷಿಸಿದೆ. ಜೊತೆಗೆ ಒಂದು ನಿವೇಶನವನ್ನು ನೀಡುವ ಭರವಸೆ ನೀಡಿದೆ. ಸರ್ಕಾರಿ ಉದ್ಯೋಗವೂ ಲಭಿಸಲಿದೆ. ಮಧ್ಯಪ್ರದೇಶದಿಂದ 25 ಲಕ್ಷ ರು ಘೋಷಿಸಿದೆ.

ರೈಲ್ವೆ ಇಲಾಖೆ ನೀಡಿದ್ದೆಷ್ಟು

ರೈಲ್ವೆ ಇಲಾಖೆ ನೀಡಿದ್ದೆಷ್ಟು

ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಸಾಕ್ಷಿಗೆ ಆ ಇಲಾಖೆಯಿಂದಲೂ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಐಆರ್ ಸಿಟಿಸಿಯಿಂದ ವಿಶೇಷ ಪ್ಯಾಕೇಜ್ ಕೂಡಾ ಸೇರಿಸಬಹುದು.

IOA ಏನು ನೀಡಿದೆ

IOA ಏನು ನೀಡಿದೆ

ಇದರ ಜೊತೆಗೆ ಇಂಡಿಯನ್ ಒಲಿಂಪಿಕ್ಸ್ ಆಸೋಸಿಯೇಶನ್ 20 ಲಕ್ಷ ರೂಪಾಯಿ ನೀಡುತ್ತಿದೆ.

ಸಲ್ಮಾನ್ ಖಾನ್ ಗಿಫ್ಟ್

ಸಲ್ಮಾನ್ ಖಾನ್ ಗಿಫ್ಟ್

ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಎಲ್ಲಾ ಒಲಿಂಪಿಕ್ ಪಟುಗಳಿಗೆ ಸಲ್ಮಾನ್ ಈ ಮೊತ್ತ ನೀಡುತ್ತಿದ್ದಾರೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Haryana Government has announced a reward of Rs. 2.5 crores and a government job for Sakshi. Here are the list of rewards, gifts pouring towards the achiever.
Please Wait while comments are loading...