ಭಾರತದ ಹೆಮ್ಮೆಯ ಪುತ್ರಿ ಸಾಕ್ಷಿಗೆ ಹರ್ಯಾಣದಿಂದ ಬಹುಮಾನ!

Posted By:
Subscribe to Oneindia Kannada

ಚಂಡೀಗಢ, ಆಗಸ್ಟ್ 18: ರಿಯೋ ಒಲಿಂಪಿಕ್ಸ್ 2016ರಲ್ಲಿ ಫ್ರೀ ಸ್ಟೈಲ್ ಕುಸ್ತಿ ಪಂದ್ಯದಲ್ಲಿ ಕಂಚಿನ ಪದಕ ಗೆದ್ದು ಭಾರತ ಕೀರ್ತಿ ಪತಾಕೆ ಹಾರಿಸಿರುವ ಸಾಕ್ಷಿ ಮಲೀಕ್ ಅವರಿಗೆ ಹರ್ಯಾಣ ಸರ್ಕಾರ ಬಹುಮಾನ ಘೋಷಿಸಿದೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಹರ್ಯಾಣದ ಖಟ್ಟಾರ್ ಸರ್ಕಾರ, ಭಾರತಕ್ಕೆ ಮೊದಲ ಪದಕ ಗೆದ್ದಿರುವ ಹರ್ಯಾಣದ ರೋಹ್ಟಕ್ ಜಿಲ್ಲೆಯ ಸಾಕ್ಷಿ ಅವರಿಗೆ 2.5 ಕೋಟಿ ರು ನಗದು ಬಹುಮಾನ ಘೋಷಿಸಿದೆ. [ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

ಕಂಚಿನ ಪದಕಕ್ಕೆ ಮುತ್ತಿಟ್ಟ ಸಾಕ್ಷಿಗೆ ಸರ್ಕಾರಿ ಉದ್ಯೋಗ, ನಿವೇಶನ ನೀಡುವ ಭರವಸೆಯು ಸಿಕ್ಕಿದೆ.[ಕಡೆಗೂ ಭಾರತ ಒಂದು ಪದಕ ಗೆದ್ದುಕೊಂಡಿದೆ, ಹುರ್ರೆ!]

Haryana Government Announces Cash Reward for Sakshi Malik

ರಿಯೋ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿರುವ ಕ್ರೀಡಾಪಟುಗಳು ಚಿನ್ನ ಗೆದ್ದರೆ 6 ಕೋಟಿ ರು, ಬೆಳ್ಳಿ ಗೆದ್ದರೆ 4 ಕೋಟಿ ರು ಹಾಗೂ ಕಂಚಿನ ಪದಕ ಗೆದ್ದರೆ 2 ಕೋಟಿ ರು ನೀಡುವುದಾಗಿ ಈ ಮುಂಚೆ ಹರ್ಯಾಣ ಸರ್ಕಾರ ಘೋಷಿಸಿತ್ತು. [ಮೋದಿ ಆಪ್ತ ಖಟ್ಟರ್ ಈಗ ಹರ್ಯಾಣ ಮುಖ್ಯಮಂತ್ರಿ]

ಅದರಂತೆ ಕಂಚಿನ ಪದಕ ಗೆದ್ದಿರುವ ಸಾಕ್ಷಿ ಅವರಿಗೆ 2 ಕೋಟಿ ಪ್ಲಸ್ ಬಹುಮಾನ ಘೋಷಿಸಿದೆ.

ಮಹಿಳಾ ಕುಸ್ತಿಯ 58 ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ಸಾಕ್ಷಿ ಮಲೀಕ್ ಅವರು ಕರ್ಜಕಿಸ್ತಾನದ ಟೈನಿಬೆಕೊವಾ ಐಸುಲು ಅವರನ್ನು 8-5ರಿಂದ ಸೋಲಿಸಿ ಕಂಚಿನ ಪದಕ ಗೆದ್ದು ಸಂಭ್ರಮಿಸಿದರು. [ಸಾಕ್ಷಿ ಸಾಧಿಸಿದ 5 ಹೊಸ ದಾಖಲೆಗಳು ಇಲ್ಲಿವೆ ಓದಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Haryana Government Announces Cash Reward for Sakshi Malik.The Haryana government had earlier promised Rs 6 crore for gold, Rs 4 crore for silver and Rs 2 crore for bronze medallists.
Please Wait while comments are loading...