ಹರ್ಯಾಣದ ಸಿಎಂಗೆ ಪಿವಿ ಸಿಂಧು ಹೆಸರು, ಊರು ಗೊತ್ತಿಲ್ಲ!

Posted By:
Subscribe to Oneindia Kannada

ಚಂಡೀಗಢ, ಆಗಸ್ಟ್ 24: ಹರ್ಯಾಣ ಸಿಎಂ ಮನೋಹರ್ ಖಟ್ಟರ್ ಅವರಿಗೆ ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಹೆಸರು ಗೊತ್ತಿಲ್ಲದೆ ವೇದಿಕೆಯೇರಿದ್ದಾರೆ, ಸಿಂಧು ಕರ್ನಾಟಕದ ಕುವರಿ ಎಂದು ಘೋಷಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ರಿಯೋ ಒಲಿಂಪಿಕ್ಸ್ ಪದಕ ವಿಜೇತರಿಗೆ ಸನ್ಮಾನ ಮಾಡಲು ರಾಜಕೀಯ ಮುಖಂಡರು ಮುಗಿಬೀಳುತ್ತಿರುವುದು ಸಂತಸದ ವಿಷಯವೇನೋ ಸರಿ. ಆದರೆ, ಪದಕ ವಿಜೇತರ ಹೆಸರು, ಊರು ಯಾವುದೇ ವಿವರ ಇಲ್ಲದೆ, ವೇದಿಕೆ ಮೇಲೆ ತಪ್ಪು ತಪ್ಪಾಗಿ ಮಾತನಾಡಿದರೆ ಆಭಾಸ, ಮುಜುಗರವಾಗದೆ ಇರಲು ಸಾಧ್ಯವೇ? [ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಸಾಕ್ಷಿ ರಾಯಭಾರಿ]

Haryana CM forgets PV Sindhu's name, then says she is 'from Karnataka'

ಕಂಚು ಪದಕ ವಿಜೇತೆ ಸಾಕ್ಷಿ ಮಲಿಕ್ ಅವರಿಗೆ ತವರೂರು ರೋಹ್ಟಕ್ ಜಿಲ್ಲೆಯ ವೋಖ್ರಾ ಹಳ್ಳಿಯಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಈ ಸಮಾರಂಭದಲ್ಲಿ ತೀವ್ರ ಮುಜುಗರಕ್ಕೆ ಒಳಗಾಗುವ ಪ್ರಸಂಗ ನಡೆಯಿತು. [ಸಾಕ್ಷಿ, ಸಿಂಧು, ದೀಪಾಗೆ ವಜ್ರದ ನೆಕ್ಲೇಸ್ ಉಡುಗೊರೆ]

'ದೇಶಕ್ಕೆ ಪದಕ ತಂದ ಇಬ್ಬರು ಮಹಿಳೆಯರು ರಕ್ಷಾ ಬಂಧನ್ ದಿನ ಪದಕ ಗೆದ್ದಿದ್ದಾರೆ. ಹರ್ಯಾಣದ ಸಾಕ್ಷಿ ಮಲಿಕ್ ಹಾಗೂ ಸಿಂಧು (ಪಕ್ಕದವರನ್ನು ಪೂರ್ತಿ ಹೆಸರು ಏನು ಎಂದು ಕೇಳಿದರು) ಹಾ.. ಕರ್ನಾಟಕದ ಪಿವಿ ಸಿಂಧು ಅವರು ಪದಕ ಗೆದ್ದಿರುವುದು ಹೆಮ್ಮೆಯ ವಿಷಯ ಎಂದರು. ಮುಖ್ಯಮಂತ್ರಿ ಖಟ್ಟರ್ ಅವರು ಹೆಸರು ಮರೆತ್ತಿದ್ದು ಈಗ ದೇಶವ್ಯಾಪಿ ಟೀಕೆಗೆ ಎಡೆಮಾಡಿದೆ.[ಐತಿಹಾಸಿಕ ಸಾಧನೆ ಮಾಡಿದ ಸಾಕ್ಷಿ ಮಲಿಕ್ ಯಾರು?]

ಸಾಕ್ಷಿ ಮಲಿಕ್ ಅವರಿಗೆ ಸನ್ಮಾನ ಮಾಡಿ, 2.5 ಕೋಟಿ ರೂ. ಚೆಕ್ ನೀಡಿದ ಖಟ್ಟರ್,ಈ ಸಂದರ್ಭದಲ್ಲಿ ಸಾಕ್ಷಿ ಮಲ್ಲಿಕ್ ಹರಿಯಾಣದ ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯ ರಾಯಭಾರಿ ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In a faux pas, Haryana Chief Minister Manohar Lal Khattar today (August 24) forgot Olympic silver medallist PV Sindhu's full name and also wrongly called her from Karnataka.
Please Wait while comments are loading...