ರಿಯೋ ಪರೀಕ್ಷೆ ನಂತರ ಮತ್ತೊಂದು ಪರೀಕ್ಷೆಗೆ ದೀಪಾ ಸಜ್ಜು

By: ಕ್ರೀಡಾ ಡೆಸ್ಕ್
Subscribe to Oneindia Kannada

ಅಗರ್ತಲಾ,ಆಗಸ್ಟ್, 20: ರಿಯೋ ಒಲಿಂಪಿಕ್ಸ್ ಜಿಮ್ನಾಸ್ಟಿಕ್ ನಲ್ಲಿ ಸ್ವಲ್ಪದರಲ್ಲೇ ಪದಕ ಮಿಸ್‌ ಮಾಡಿಕೊಂಡ ಭಾರತದ ಸ್ಪರ್ಧಿ ದೀಪಾ ಕರ್ಮಾಕರ್ ಸದ್ಯ ಎಂಎ (ಮಾಸ್ಟರ್‌ ಆಫ್ ಆರ್ಟ್ಸ್ ಇನ್ ಪಾಲಿಟಿಕಲ್) ಪರೀಕ್ಷೆಗೆ ಸಿದ್ಧವಾಗಲಿದ್ದಾರೆ. ತ್ರಿಪುರಾ ವಿಶ್ವವಿದ್ಯಾಲಯದ ಮುಂದಿನ ವಾರ ನಡೆಯಲಿರುವ ಪರೀಕ್ಷೆಯನ್ನು ಅವರು ಬರೆಯಲಿದ್ದಾರೆ ಎಂದು ದೀಪಾ ತಂದೆ ದುಲಾಲ್ ಕರ್ಮಾಕರ್ ತಿಳಿಸಿದ್ದಾರೆ.

ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ

ಪರೀಕ್ಷೆ ನಂತರ ದೀಪಾ 2020ರಲ್ಲಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಅಭ್ಯಾಸ ಆರಂಭಿಸಲಿದ್ದಾರೆಂದು ದುಲಾಲ್ ಕರ್ಮಾಕರ್ ತಿಳಿಸಿದರು. ಒಲಿಂಪಿಕ್ಸ್ ನಲ್ಲಿ ಫೈನಲ್‌ ಪ್ರವೇಶಿಸಿದ ದೇಶದ ಮೊದಲ ಜಿಮ್ಟಾಸ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ದೀಪಾ ಅವರು ಪದಕ ಗೆಲ್ಲುತ್ತಾರೆ ಎಂಬ ನಿರೀಕ್ಷೆ ಮೂಡಿತ್ತು.[ಜಿಮ್ನಾಸ್ಟ್ ದೀಪಾ ಕರ್ಮಾಕರ್ ಗೆ ಖೇಲ್ ರತ್ನ]

ತಮ್ಮ ಚೊಚ್ಚಲ ರಿಯೋ ಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಕೂದಲೆಳೆ ಅಂತರದಲ್ಲಿ ಪದಕದಿಂದ ವಂಚಿತರಾದ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ತವರಿಗೆ ಆಗಮಿಸಿದ್ದಾರೆ. [ಸಾಧಕಿ ದೀಪಾ ಕರ್ಮಾಕರ್ ಅವರ ಬಗ್ಗೆ ಒಂದಿಷ್ಟು]

ನವದೆಹಲಿಯ ವಿಮಾನ ನಿಲ್ದಾಣದಲ್ಲಿ ದೇಶದ ಹೃದಯ ಗೆದ್ದ ಜಿಮ್ನಾಸ್ಟರ್ ಗೆ ಅದ್ಧೂರಿ ಸ್ವಾಗತ ಕೋರಲಾಯಿತು. ಸಾವಿರಾರು ಅಭಿಮಾನಿಗಳು ಏರ್‌ಪೋರ್ಟ್‌ಗೆ ಆಗಮಿಸಿ ದೀಪಾ ಅವರನ್ನು ಸ್ವಾಗತಿಸಿದರು. [ಮುಂದಿನ ಒಲಿಂಪಿಕ್ಸ್ ನಲ್ಲಿ ಪದಕ ಗೆಲ್ಲುವೆ: ದೀಪಾ]

ಆದರೆ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಕೂದಲೆಳೆ ಅಂತರದಲ್ಲಿ ದೀಪಾ ಕಂಚಿನ ಪದಕ ಗೆಲ್ಲಲು ವಿಫಲರಾದರು. ಆದರೂ ದೀಪಾ ಅವರ ಮೊದಲ ಒಲಿಂಪಿಕ್ ನಲ್ಲಿ ಇಂತಹ ಸಾಧನೆ ಮಾಡಿ ದೇಶದ ಹೃದಯ ಗೆದ್ದಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gymnast Dipa Karmakar, who finished fourth in the Olympics final at Rio, will take her MA examination next week under Tripura University, her father said here on Friday.
Please Wait while comments are loading...