ಗಿಫ್ಟ್ ಬಂದ ಐಷಾರಾಮಿ ಕಾರು ಹಿಂತಿರುಗಿಸಲು ದೀಪಾ ನಿರ್ಧಾರ!

Posted By:
Subscribe to Oneindia Kannada

ಹೈದರಾಬಾದ್, ಅಕ್ಟೋಬರ್ 10: ಒಲಿಂಪಿಕ್ಸ್ ಜಮ್ನಾಸ್ಟಿಕ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಪಡೆದ ಸಾಧನೆ ಮಾಡಿದ ದೀಪಾ ಅವರು ತಮಗೆ ಬಂದಿದ್ದ ಐಷಾರಾಮಿ ಕಾರು ಉಡುಗೊರೆಯನ್ನು ಹಿಂತಿರುಗಿಸಲು ನಿರ್ಧರಿಸಿದ್ದಾರೆ.

ಜಿಮ್ನಾಸ್ಟ್ ಸ್ಪರ್ಧೆಯ ಅಂತಿಮ ಹಂತಕ್ಕೆ ಆಯ್ಕೆಯಾದ ಮೊದಲ ಭಾರತೀಯ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ತಮ್ಮ ಚೊಚ್ಚಲ ಒಲಿಂಪಿಕ್ಸ್ ನ ಫೈನಲ್ ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರು. ದೀಪಾ ಸವರ ಸಾಧನೆಗೆ ಮೆಚ್ಚಿ ಹೈದರಾಬಾದಿನ ಬಾಡ್ಮಿಂಟನ್ ಅಸೋಸಿಯೇಷನ್ (ಎಚ್ ಬಿಎ) ನ ಅಧ್ಯಕ್ಷ ವಿ ಚಾಮುಂಡೇಶ್ವರನಾಥ್ ಅವರು ಬಿಎಂಡಬ್ಲ್ಯೂ ಕಾರನ್ನು ಉಡಗೊರೆಯಾಗಿ ನೀಡಿದ್ದರು.[ರಿಯೋ ಒಲಿಂಪಿಕ್ಸ್ 2016 : ಗ್ಯಾಲರಿ || ವಿಶೇಷ ಪುಟ]

Gymnast Dipa Karmakar to return her gift - BMW car

ಚಾಮುಂಡೇಶ್ವರನಾಥ್ ಅವರ ಅಪ್ತ ಮಿತ್ರ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ದೀಪಾ ಅವರಿಗೆ ಕಾರಿನ ಕೀ ನೀಡಿದ್ದರು. ದೀಪಾ ಅವರ ಜತೆಗೆ ಬಾಡ್ಮಿಂಟನ್ ತಾರೆ ಪಿವಿ ಸಿಂಧು ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್ ಅವರಿಗೂ ಬಿಎಂಡಬ್ಲೂ ಕಾರು ಲಭಿಸಿತ್ತು.[ಸಾಧಕಿ ದೀಪಾ ಕರ್ಮಾಕರ್ ಅವರ ಬಗ್ಗೆ ಒಂದಿಷ್ಟು]

ಗಿಫ್ಟ್ ವಾಪಸ್ ಏಕೆ?: ಐಷಾರಾಮಿ ಕಾರು ಹಿಂತಿರುಗಿಸುತ್ತಿರುವುದೇಕೆ ಎಂಬುದರ ಬಗ್ಗೆ ದೀಪಾ ಬಾಯ್ಬಿಟ್ಟಿಲ್ಲ. ಆದರೆ, ಆಪ್ತ ವರ್ಗದವರ ಪ್ರಕಾರ, ದೀಪಾ ಅವರಿಗೆ ಈ ಐಷಾರಾಮಿ ಕಾರನ್ನು ನಿಭಾಯಿಸಲು ಕಷ್ಟವಾಗುತ್ತದೆ.ಅಗರ್ತಲಾದಂಥ ಸಣ್ಣ ನಗರದಲ್ಲಿ ಇಂಥ ಕಾರನ್ನು ಇಟ್ಟುಕೊಂಡು ನಿಭಾಯಿಸುವುದು ಕಷ್ಟ ಎಂದಿದ್ದಾರೆ. ಸದ್ಯ ಜರ್ಮನಿಗೆ ತೆರಳಿ ತರಬೇತಿ ಪಡೆಯುತ್ತಿರುವ ದೀಪಾ ಅವರು ನವೆಂಬರ್ ನಲಲಿ ನಡೆಯಲುರುವ ಚಾಲೆಂಜರ್ಸ್ ಕಪ್ ಗಾಗಿ ಕಾದಿದ್ದಾರೆ.

ತ್ರಿಪುರಾ ಮೂಲದ ದೀಪಾ ಕರ್ಮಾಕರ್ ಅವರು ಒಲಿಂಪಿಕ್ಸ್ ಅರ್ಹತಾ ಸುತ್ತು ಪ್ರವೇಶಿಸಿದ ಮೊದಲ ಮಹಿಳಾ ಜಿಮ್ನಾಸ್ಟಿಕ್ ಆಗಿದ್ದಾರೆ. ದೀಪಾ 2014ರ ಗ್ಲಾಸ್ಗೊ ಕಾಮನ್‌ವೆಲ್ತ್ ಕ್ರೀಡಾಕೂಟದ ವಾಲ್ಟ್ ವಿಭಾಗದಲ್ಲಿ ಕಂಚು ಜಯಿಸಿ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಸ್ಪರ್ಧಿ ಎನಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dipa Karmakar, the first ever female gymnast from India to have participated in an Olympics and earned 4th place, has decided to give her latest gift back to the owner.
Please Wait while comments are loading...