ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನಂತರ ಸಚಿನ್ ರಿಂದ 'ಐಎಸ್ಎಲ್' ಕಿಕ್

By Mahesh

ಮುಂಬೈ, ಆ.28: ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಟಿ20 ಟೂರ್ನಿ ಯಶಸ್ಸಿನ ನಂತರ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಈಗ ಇಂಡಿಯನ್ ಸೂಪರ್ ಫುಟ್ಬಾಲ್ ಲೀಗ್(ಐಎಸ್‌ಎಲ್) ನತ್ತ ಮುಖ ಮಾಡಿದ್ದಾರೆ. ಕ್ರೀಡೆ ಹಾಗೂ ಗ್ಲಾಮರ್ ಜಗತ್ತಿನ ಬೆಸುಗೆಯೊಂದಿಗೆ ಫುಟ್ಬಾಲ್ ಕ್ಷೇತ್ರಕ್ಕೆ ಹೊಸ ಕಿಕ್ ನೀಡಲು ಐಎಸ್ಎಲ್ ಸಜ್ಜಾಗಿದೆ.

ಅಖಿಲ ಭಾರತ ಫುಟ್ಬಾಲ್ ಸಂಸ್ಥೆಯ (ಎಐಎಫ್‌ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಹಾಗೂ ತಂಡದ ಮಾಲೀಕರಾದ ಸಚಿನ್ ತೆಂಡೂಲ್ಕರ್, ನಟ ರಣಬೀರ್ ಕಪೂರ್ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಮೊದಲ ಆವೃತ್ತಿಯ ಇಂಡಿಯನ್ ಸೂಪರ್ ಫುಟ್ಬಾಲ್ ಲೀಗ್(ಐಎಸ್‌ಎಲ್) ಮುಂಬೈನಲ್ಲಿ ಅನಾವರಣಗೊಂಡಿದೆ. [ತೆಂಡೂಲ್ಕರ್ ಫುಟ್ಬಾಲ್ ತಂಡ ಹೆಸರು ಅನಾವರಣ]

ಭಾರತದಲ್ಲಿ ಫುಟ್ಬಾಲನ್ನು ಬೇರು ಮಟ್ಟದಿಂದ ಬೆಳೆಸಲು ತಂಡದ ಮಾಲಕರಿಗೆ ಹಾಗೂ ಟೂರ್ನಿಯ ಆಯೋಜಕರಿಗೆ ಕರೆ ನೀಡಿದ ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಮಾತನಾಡಿ,

'ಐಎಸ್‌ಎಲ್‌ ಟೂರ್ನಿಗೆ ಫೀಫಾದಿಂದ ಮಾನ್ಯತೆ ಸಿಕ್ಕಿರುವುದು ತುಂಬಾ ಸಂತೋಷದ ವಿಚಾರ ಎಂದರು. ಭಾರತದ ಫುಟ್ಬಾಲ್ ತಂಡ ಫೀಫಾ ಶ್ರೇಯಾಂಕ 150ಕ್ಕೂ ಕೆಳಗಿದ್ದು, ಈ ಟೂರ್ನಿಯಿಂದ ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಲಿದೆ' ಎಂಬ ಭವಸೆ ವ್ಯಕ್ತಪಡಿಸಿದರು. [ಕೆಪಿಎಲ್ ಶುಭಾರಂಭ: ಟೂರ್ನಿ ಬಗ್ಗೆ ಎಬಿಸಿಡಿ] ತಂಡಗಳ ವಿವರ, ಸಚಿನ್, ಜಾನ್ ಅಬ್ರಹಾಂ, ಸಲ್ಮಾನ್ ಖಾನ್, ರಣಬೀರ್ ಯಾವ ತಂಡದ ಪರ ಕಿಕ್ ನೀಡಲಿದ್ದಾರೆ ಮುಂದೆ ಓದಿ...

ಯಾವ ತಂಡಕ್ಕೆ ಯಾರು ಪ್ರತಿನಿಧಿ

ಯಾವ ತಂಡಕ್ಕೆ ಯಾರು ಪ್ರತಿನಿಧಿ

* ಗೋವಾ ಎಫ್‌ಸಿ ತಂಡ
* ಡೆಲ್ಲಿ ಡೈನಮೊಸ್ ತಂಡ
* ಅಟ್ಲೆಟಿಕೊ ಕೋಲ್ಕತಾ ತಂಡ
* ನಾರ್ಥ್ ಈಸ್ಟ್ ಯುನೈಟೆಡ್ ತಂಡ
* ಟೀಮ್ ಚೆನ್ನೈ
* ಪುಣೆ ಎಫ್‌ಸಿ
* ಟೀಮ್ ಮುಂಬೈ
* ಕೊಚ್ಚಿ ಬ್ಲಾಸ್ಟರ್ಸ್‌ ತಂಡ

ಯಾವ ತಂಡಕ್ಕೆ ಯಾರು ಪ್ರತಿನಿಧಿ

ಯಾವ ತಂಡಕ್ಕೆ ಯಾರು ಪ್ರತಿನಿಧಿ

* ಗೋವಾ ಎಫ್‌ಸಿ ತಂಡವನ್ನು ಬಾಲಿವುಡ್‌ನ ವರುಣ್ ಧವನ್,
* ಡೆಲ್ಲಿ ಡೈನಮೊಸ್ ತಂಡವನ್ನು ಸಮೀರ್ ಮಾನ್‌ಚಂದ್,
* ಅಟ್ಲೆಟಿಕೊ ಕೋಲ್ಕತಾ ತಂಡವನ್ನು ಉತ್ಸವ್ ಪಾರೆಕ್,
* ನಾರ್ಥ್ ಈಸ್ಟ್ ಯುನೈಟೆಡ್ ತಂಡವನ್ನು ಜಾನ್ ಅಬ್ರಹಾಂ,
* ಟೀಮ್ ಚೆನ್ನೈಯನ್ನು ಅಭಿಷೇಕ್ ಬಚ್ಚನ್,
* ಪುಣೆ ಎಫ್‌ಸಿಯನ್ನು ಕಪಿಲ್ ವಾಧ್ವಾನ್,
* ಟೀಮ್ ಮುಂಬೈಯನ್ನು ರಣಧೀರ್ ಕಪೂರ್
* ಕೊಚ್ಚಿ ಬ್ಲಾಸ್ಟರ್ಸ್‌ ತಂಡವನ್ನು ಸಚಿನ್ ತೆಂಡೂಲ್ಕರ್ ಪ್ರತಿನಿಧಿಸುತ್ತಿದ್ದಾರೆ.

ಯಾವಾಗ ಟೂರ್ನಿ ಆರಂಭ

ಯಾವಾಗ ಟೂರ್ನಿ ಆರಂಭ

ಕೋಲ್ಕತಾದ ಐತಿಹಾಸಿಕ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅಕ್ಟೋಬರ್ 12 ರಂದು ಭಾರತೀಯ ಸೂಪರ್ ಫುಟ್ಬಾಲ್ ಲೀಗ್ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಅಟ್ಲೆಟಿಕೊ ಕೋಲ್ಕತಾ ತಂಡ ಟೀಮ್ ಮುಂಬೈಯನ್ನು ಎದುರಿಸಲಿದೆ.

ಪ್ರಚಾರಕ್ಕಾಗಿ ಇನ್ನಷ್ಟು ತಾರೆಗಳು ಸೇರ್ಪಡೆ

ಪ್ರಚಾರಕ್ಕಾಗಿ ಇನ್ನಷ್ಟು ತಾರೆಗಳು ಸೇರ್ಪಡೆ

ಮುಂಬೈ ತಂಡ ರಣಬೀರ್ ಕಪೂರ್, ನಾರ್ಥ್ ಈಸ್ಟ್ ತಂಡ ಜಾನ್ ಅಬ್ರಹಾಂ ಹಾಗೂ ಪುಣೆ ತಂಡ ಸಲ್ಮಾನ್ ಖಾನ್‌ರನ್ನು ಫ್ರಾಂಚೈಸಿಗಳ ಪ್ರಚಾರಕ್ಕಾಗಿ ನೇಮಿಸಿಕೊಂಡಿವೆ. ಸಚಿನ್ ತೆಂಡುಲ್ಕರ್ ಕೊಚ್ಚಿ ಫ್ರಾಂಚೈಸಿಯಲ್ಲಿ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗುಲಿ ಕೋಲ್ಕತಾ ಫ್ರಾಂಚೈಸಿಯೊಂದಿಗೆ ಕೈ ಜೋಡಿಸಿದ್ದಾರೆ.

ದೇಶ, ವಿದೇಶದ ಪ್ರತಿಭಾವಂತರಿಗೆ ಅವಕಾಶ

ದೇಶ, ವಿದೇಶದ ಪ್ರತಿಭಾವಂತರಿಗೆ ಅವಕಾಶ

ಚಿತ್ರದಲ್ಲಿ: ಅಭಿಷೇಕ್ ಬಚ್ಚನ್ ಅವರು ಐಎಸ್ ಎಲ್ ಫುಟ್ಬಾಲ್ ಲೀಗ್ ಅನಾವರಣ ಮಾಡುತ್ತಾ ಕಾಲ್ಚೆಂಡಿಗೆ ಹಸ್ತಾಕ್ಷರ ಹಾಕುತ್ತಿದ್ದಾರೆ. PTI Photo by Santosh Hirlekar

8 ತಂಡಗಳು ಸ್ಪರ್ಧಿಸಲಿರುವ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಆಟಗಾರರ ಜೊತೆಗೆ ಕೆಲ ಅಂತಾರಾಷ್ಟ್ರೀಯ ಖ್ಯಾತ ಆಟಗಾರರೊಂದಿಗೆ ಆಡಲಿದ್ದಾರೆ. ಬಾರ್ಸಿಲೋನದ ಮಾಜಿ ಸ್ಟಾರ್ ಲೂಯಿಸ್ ಗಾರ್ಸಿಯಾ ಕೋಲ್ಕತಾ ಫ್ರಾಂಚೈಸಿಯನ್ನು, ಫ್ರಾನ್ಸ್‌ನ ವಿಶ್ವಕಪ್ ವಿನ್ನರ್ ಡೇವಿಡ್ ಟ್ರೆಝೆಗೆಟ್ ಪುಣೆ ಫ್ರಾಂಚೈಸಿಯನ್ನು ಪ್ರತಿನಿಧಿಸಲಿದ್ದಾರೆ.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X