ರಿಯೋ ದಲ್ಲಿ ಮತ್ತೊಂದು ಸಲಿಂಗಿಗಳ ನಿಶ್ಚಿತಾರ್ಥ

Posted By:
Subscribe to Oneindia Kannada

ರಿಯೋ ಡಿ ಜನೈರೊ, ಆ.16: ರಿಯೋ ಒಲಿಂಪಿಕ್ಸ್ 2016ರಲ್ಲಿ ಮತ್ತೊಂದು ಸಲಿಂಗ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ. ರಗ್ಬಿ ಆಟಗಾರ್ತಿ ತನ್ನ ಗೆಳತಿಗೆ ಪ್ರಪೋಸ್ ಮಾಡಿದ ಪ್ರಸಂಗದ ನಂತರ ಸಲಿಂಗಿ ಗೆಳೆಯರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಮೂರು ಬಾರಿ ಬ್ರಿಟನ್ ಪರ ದಾಖಲೆ ಬರೆದಿರುವ ಸ್ಪೀಡ್ ವಾಕರ್ ಅಥ್ಲೀಟ್ ಟಾಮ್ ಬಾಸ್‌ವರ್ತ್ ಅವರು ತಮ್ಮ ಸ್ಪರ್ಧೆ ಬಳಿಕ ಕೊಪಕಬಾನಾ ಬೀಚ್‌ನಲ್ಲಿ ಗೆಳೆಯ ಹ್ಯಾರಿ ಡಿನ್ಲೇ ಅವರ ಮುಂದೆ ನಿಶ್ಚಿತಾರ್ಥದ ಪ್ರಪೋಸ್ ಮಾಡಿದ್ದಾರೆ.[10 ಕ್ರೀಡಾಪಟುಗಳಿಗೆ ರಿಯೋ 2016 ಅವಿಸ್ಮರಣೀಯ]

ರಿಯೋ ಒಲಿಂಪಿಕ್ಸ್ ನಲ್ಲಿ ಟಾಮ್ ಅವರು ಪುರುಷರ 20 ಕಿ.ಮೀ.ನಡಿಗೆಯಲ್ಲಿ ಆರನೆ ಸ್ಥಾನ ಪಡೆದಿದ್ದಾರೆ. 26ರ ಪ್ರಾಯದ ಟಾಮ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಚಿತ್ರವೊಂದನ್ನು ಹಂಚಿಕೊಂಡು ನಿಶ್ಚಿತಾರ್ಥ ವಿಷಯ ಬಹಿರಂಗಪಡಿಸಿದ್ದಾರೆ.[ಈಜುಕೊಳದ ಬಳಿ ಚೀನಿ ಲವ್ ಸ್ಟೋರಿ]

ನನ್ನ ಪ್ರಪೋಸಲ್ ಗೆ ನನ್ನ ಗೆಳೆಯ ಒಪ್ಪಿಗೆ ಸೂಚಿಸಿದ್ದಾನೆ ಎಂದು ಟಾಮ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹ್ಯಾರಿ ಡಿನ್ಲೇ ನಿಶ್ಚಿತಾರ್ಥ ಉಂಗುರದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, 'ನನಗೂ ಒಪ್ಪಿಗೆ ಇದೆ' ಎಂದಿದ್ದಾರೆ.[ರಗ್ಬಿ ಆಟಗಾರ್ತಿ ಮದ್ವೆಗೆ ಗೆಳತಿಯ ಚುಂಬನ ಮುದ್ರೆ]

ಸ್ಪೀಡ್ ವಾಕರ್ ಅಥ್ಲೀಟ್ ಟಾಮ್ ಬಾಸ್‌ವರ್ತ್

ಸ್ಪೀಡ್ ವಾಕರ್ ಅಥ್ಲೀಟ್ ಟಾಮ್ ಬಾಸ್‌ವರ್ತ್

ಮೂರು ಬಾರಿ ಬ್ರಿಟನ್ ಪರ ದಾಖಲೆ ಬರೆದಿರುವ ಸ್ಪೀಡ್ ವಾಕರ್ ಅಥ್ಲೀಟ್ ಟಾಮ್ ಬಾಸ್‌ವರ್ತ್ ಅವರು ತಮ್ಮ ಸ್ಪರ್ಧೆ ಬಳಿಕ ಕೊಪಕಬಾನಾ ಬೀಚ್‌ನಲ್ಲಿ ಗೆಳೆಯ ಹ್ಯಾರಿ ಡಿನ್ಲೇ ಅವರ ಮುಂದೆ ನಿಶ್ಚಿತಾರ್ಥದ ಪ್ರಪೋಸ್ ಮಾಡಿದ್ದಾರೆ.

ಬ್ರಿಟನ್ನಿನ ಮೊದಲ ಸಲಿಂಗಿ ಅಥ್ಲೀಟ್

ಬಾಸ್‌ವರ್ತ್ ಸಲಿಂಗಿಯಾಗಿ ಪರಿವರ್ತಿತಗೊಂಡಿರುವ ಬ್ರಿಟನ್‌ನ ಮೊದಲ ಟ್ರಾಕ್ ಅಥ್ಲೀಟ್ ಆಗಿದ್ದಾರೆ. 2015ರ ಅಕ್ಟೋಬರ್‌ನಲ್ಲಿ ವಿಕ್ಟೋರಿಯ ಡರ್ಬಿಶೈರ್ ಶೋನಲ್ಲಿ ತನ್ನ ನಿರ್ಧಾರವನ್ನು ವಿವರಿಸಿದ್ದರು.

ಟಾಮ್ ಪ್ರಪೋಸಲ್ ಒಪ್ಪಿದ ಹ್ಯಾರಿ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹ್ಯಾರಿ ಡಿನ್ಲೇ ನಿಶ್ಚಿತಾರ್ಥ ಉಂಗುರದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ‘ನನಗೂ ಒಪ್ಪಿಗೆ ಇದೆ' ಎಂದಿದ್ದಾರೆ.

ಇದು ಮೊದಲ ಬಹಿರಂಗ ನಿಶ್ಚಿತಾರ್ಥವಲ್ಲ

ಇದು ಮೊದಲ ಬಹಿರಂಗ ನಿಶ್ಚಿತಾರ್ಥವಲ್ಲ

ಚೀನಾದ ಡೈವರ್‌ಗಳಾದ ಹೀ ಝಿ ಹಾಗೂ ಕ್ಸಿನ್ ಝೈ ನಿಶ್ಚಿತಾರ್ಥ. ರಗ್ಬಿ ಆಟಗಾರ್ತಿ ಹಾಗೂ ಮ್ಯಾನೇಜರ್ ಗೆಳತಿ ನಡುವಿನ ಮದುವೆ ಪ್ರಪೋಸಲ್ ಅನ್ನು ರಿಯೋ ಕಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
British track and field star Tom Bosworth asked his boyfriend, Harry Dineley, to marry him on a beach in Rio de Janiero – and he said yes!
Please Wait while comments are loading...