ಫ್ರೆಂಚ್ ಓಪನ್ ಸ್ಪರ್ಧೆಯಿಂದ ಸಾನಿಯಾ ಮಿರ್ಜಾ ಹೊರಕ್ಕೆ

Posted By:
Subscribe to Oneindia Kannada

ಪ್ಯಾರಿಸ್, ಮೇ 30: ಫ್ರೆಂಚ್ ಓಪನ್ ಮಹಿಳಾ ಡಬಲ್ಸ್ ಸ್ಪರ್ಧೆಯಿಂದ ಭಾರತದ ಸಾನಿಯಾ ಮಿರ್ಜಾ ಹಾಗೂ ಸ್ವಿಟ್ಜರ್ಲೆಂಡ್ ನ ಮಾರ್ಟಿನಾ ಹಿಂಗಿಸ್ ಹೊರ ನಡೆದಿದ್ದಾರೆ. ಈ ನಡುವೆ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್ ತಲುಪಿದೆ.

ಮಿಶ್ರ ಡಬಲ್ಸ್: ಫ್ರೆಂಚ್ ಓಪನ್ ಲಿಯಾಂಡರ್ ಪೇಸ್ ಹಾಗೂ ಮಾರ್ಟಿನಾ ಹಿಂಗಿಸ್ ಡಬಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪುವ ಮೂಲಕ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿ ಜಯಿಸುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಎರಡನೇ ಸುತ್ತಿನ ಪಂದ್ಯದಲ್ಲಿ ಭಾರತ ಹಾಗೂ ಸ್ವಿಸ್ ಜೋಡಿ ಪೇಸ್ ಹಾಗೂ ಹಿಂಗಿಸ್ ನಾಲ್ಕನೆ ಶ್ರೇಯಾಂಕದ ಜೋಡಿ ಯಾರೊಸ್ಲೊವ್ ಶ್ವೆಡೋವಾ ಹಾಗೂ ಫ್ಲಾರಿನ್ ಮೆರ್ಗಿಯಾರನ್ನು 2-6, 7-5, 10-6 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

French Open: Sania-Martina crash out of women's doubles

ಪೇಸ್ ಹಾಗೂ ಹಿಂಗಿಸ್ ಮುಂದಿನ ಸುತ್ತಿನಲ್ಲಿ ಮತ್ತೊಂದು 2ನೇ ಸುತ್ತಿನ ಪಂದ್ಯದಲ್ಲಿ ಜಯ ಸಾಧಿಸಲಿರುವ ಅಗ್ರ ಶ್ರೇಯಾಂಕದ ಹಾವೊ-ಚಿಂಗ್ ಚಾನ್ ಹಾಗೂ ಜಮ್ಮಿ ಮರ್ರೆ ಅಥವಾ ಡಾರಿಯಾ ಗಾವ್ರಿಲೊವಾ ಹಾಗೂ ಜಾನ್ ಪೀರ್ಸ್‌ರನ್ನು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್ : ಲಿಯಾಂಡರ್ ಪೇಸ್ ಅವರು ಮಟ್ಕೋವೊಸ್ಕಿ ಜತೆ ಕೂಡಿ 3ನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಜೊಕೊವಿಕ್‌ಗೆ ನಾಲ್ಕನೇ ಸುತ್ತಿಗೆ ಪ್ಯಾರಿಸ್, ಮೇ 29: ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್ ಫ್ರೆಂಚ್ ಓಪನ್‌ನ ಪುರುಷರ ಸಿಂಗಲ್ಸ್‌ನಲ್ಲಿ ನಾಲ್ಕನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಮೂರನೇ ಸುತ್ತಿನ ಪಂದ್ಯದಲ್ಲಿ ಜೊಕೊವಿಕ್ ಬ್ರಿಟನ್‌ನ ಅಲ್‌ಜಾಝ್ ಬೆಡೆನಿ ಅವರನ್ನು 6-2, 6-3, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian tennis ace Sania Mirza made a shock exit from the women's doubles competition while compatriots Leander Paes and Rohan Bopanna entered the men's doubles quarterfinals along with their respective partners in the French Open here on Sunday.
Please Wait while comments are loading...