ಮಹದೇವಪುರದಲ್ಲಿ ಸುಜುಕಿ ಸ್ಟಂಡ್ ರೈಡ್ ತಪ್ಪದೇ ನೋಡಿǃ

Posted By:
Subscribe to Oneindia Kannada

ಬೆಂಗಳೂರು, ಮೇ 11: ಎರಡು ಬಾರಿಯ ಯೂರೋಪಿಯನ್ ಸ್ಟಂಟ್‌ ರೈಡಿಂಗ್‌ ಚಾಂಪಿಯನ್ ಮತ್ತು ರೆಡ್‌ಬುಲ್‌ನ ಅಥ್ಲೀಟ್‌ ಅರಾಸ್‌ ಗಿಬಿಯೆಝ ಇದೀಗ ಮತ್ತೊಮ್ಮೆ ಮೈನವಿರೇಳಿಸುವ ಬೈಕ್ ಸ್ಟಂಟ್ ಮಾಡಲು ಬೆಂಗಳೂರಿಗೆ ಬರುತ್ತಿದ್ದಾರೆ.

26 ವರ್ಷದ ಈ ಸಾಹಸಿ 9 ನಗರಗಳ ಸುಜುಕಿ ಜಿಕ್ಸರ್‌ಡೇ ಟೂರ್‌ನಲ್ಲಿ ಪಾಲ್ಗೊಂಡು ತಮ್ಮ ಸಾಹಸಮಯ ಸ್ಟಂಟ್‌ಗಳನ್ನು ತೋರಿಸುವ ಮೂಲಕ ಮೈನವಿರೇಳಿಸುವುದಲ್ಲದೇ ವಿದ್ಯುತ್ ಸಂಚಾರ ಆಗುವಂತೆ ಮಾಡಲಿದ್ದಾರೆ. ಏಪ್ರಿಲ್ 15 ರಂದು ದೆಹಲಿಯಲ್ಲಿ ಆರಂಭವಾಗಿರುವ ಈ ಸುಜುಕಿ ಜಿಕ್ಸರ್‌ಡೇ ಟೂರ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ.[ಕಾರ್ ಮತ್ತು ಬೈಕ್ ರೇಸಿಂಗ್ ನೋಡಲು ಹೊಸೂರಿಗೆ ಬನ್ನಿ]

Freestyle stunt rider Aras to perform in Bengaluru

ದಿನಾಂಕ: ಗುರುವಾರ, 12 ಮೇ 2016
ಸಮಯ: ಸಂಜೆ 4 ರವರೆಗೆ
ಸ್ಥಳ: ಫಿಯೋನಿಕ್ಸ್ ಮಾರ್ಕೆಟ್ ಸಿಟಿ, ವೈಟ್‌ಫೀಲ್ಡ್‌ರಸ್ತೆ, ಮಹದೇವಪುರ.

ಅರಾಸ್‌ ಗಿಬಿಯೆಝ: ಲಿಥುನಿಯಾ(Lithuania)ದ ಅರಾಸ್ ಅವರು 10 ವರ್ಷ ವಯಸ್ಸಿನಲ್ಲಿದ್ದಾಗ, ಅಜ್ಜ ತಂದಿದ್ದ ಸುಜುಕಿ ಆರ್ ಜಿ50 ಸ್ಕೂಟರ್ ನೋಡಿ ಆಕರ್ಷಿತರಾದರು. 16 ವಯಸ್ಸಿಗೆ ಸೂಪರ್ ಬೈಕ್ ಓಡಿಸಲು ಕಲಿತರು. ಯಮಹಾ ಆರ್ 6 ಏರಿ ಸ್ಟಂಟ್ ಮಾಡುತ್ತಾ ಯುರೋಪಿನ ವಿವಿಧೆಡೆ ಪ್ರದರ್ಶನ ನೀಡತೊಡಗಿದರು.[ಹಾರ್ಲೆ 'ಬೈಕ್ ಗಳ ಟೂರ್']

ಸುಜುಕಿ ಜಿಎಸ್ ಎಕ್ಸ್ 600ಆರ್ ಖರೀದಿಸಿದ ಮೇಲೆ ಅರಾಸ್ ಅವರು ಸ್ಟಂಟ್ ಬೈಕ್ ರೈಡಿಂಗ್ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. [ಬೆಂಗಳೂರಲ್ಲಿ ಬಾಡಿಗೆ ಬೈಕ್ ಪಡೆದು ನಗರ ಸುತ್ತಾಡಿ]

2014ರಲ್ಲಿ ಲೂಥನಿಯಾದಲ್ಲಿ ಯುರೋ ಕಪ್ ಗೆದ್ದ ಬಳಿಕ ವಿಶ್ವದೆಲ್ಲೆಡೆ ಸ್ಟಂಟ್ ರೈಡ್ ಟೂರ್ ಹೊರಡಲು ಆರಂಭಿಸಿದರು. ಇದಕ್ಕೂ ಮುನ್ನ ಯುಕೆ, ಬಲ್ಗೇರಿಯಾದಲ್ಲಿ ಸತತವಾಗಿ ಚಾಂಪಿಯನ್ ಶಿಪ್ ಗೆದ್ದಿದ್ದ ಅರಾಸ್ ಇಂದು ಸ್ಟಂಟ್ ಬೈಕ್ ರೈಡರ್ ಗಳ ಸ್ಪೂರ್ತಿಯಾಗಿದ್ದಾರೆ. ಅರಾಸ್ ಸ್ಟಂಟ್ ರೈಡ್ ಝಲಕ್ ವಿಡಿಯೋ ನೋಡಿ:


(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lithuanian athlete and two-time European Stunt Riding Champion, Aras Gibieza will be performing in the city as part of the ‘Suzuki Gixxer Day tour’, which will zoom into Mahadevapura, Bengaluru
Please Wait while comments are loading...