ಶಾಕಿಂಗ್ : 'ತಂಡ ಸೇರಬೇಕಾದ್ರೆ, ಕೋಚ್ ಜತೆ ಮಂಚ ಏರಬೇಕಾಗಿತ್ತು'

Posted By:
Subscribe to Oneindia Kannada

ನವದೆಹಲಿ, ಮೇ 12 : 'ಭಾರತ ಫುಟ್ಬಾಲ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬೇಕಿದ್ದರೆ ಮೊದಲು ತಂಡದ ಕೋಚ್ ಹಾಗೂ ಕಾರ್ಯದರ್ಶಿಗಳ ಜೊತೆ ಮಲಗಬೇಕಿತ್ತು', ಎಂಬ ಆಘಾತಕಾರಿ ಸುದ್ದಿಯನ್ನು ಭಾರತ ಮಹಿಳಾ ಫುಟ್ಬಾಲ್ ತಂಡದ ಮಾಜಿ ನಾಯಕಿ ಹರಿಯಾಣದ ಸೋನಾ ಚೌಧರಿ ಅವರು ತಮ್ಮ "ಗೇಮ್ ಇನ್ ಗೇಮ್" ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ಇತ್ತೀಚೆಗೆ ವಾರಣಾಸಿಯಲ್ಲಿ"ಗೇಮ್ ಇನ್ ಗೇಮ್" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ ಸೋನು, ಭಾರತ ಮಹಿಳಾ ಫುಟ್ಬಾಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಆಟಗಾರರು ಏನೇಲ್ಲ ಕಷ್ಟ ಪಡಬೇಕಿತ್ತು ಎಂಬುದನ್ನು ಈ ಪುಸ್ತಕದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

 Sona Chaudhary

ಹೌದು, ತಂಡದಲ್ಲಿ ಆಡಲು ಅವಕಾಶ ಸಿಗಬೇಕಾದರೆ ತಂಡದ ಕೋಚ್ ಹಾಗೂ ಕಾರ್ಯದರ್ಶಿ ಮತ್ತು ಟೀಂ ಮ್ಯಾನೇಜ್ ಮೆಂಟ್ ಗೆ ಲೈಂಗಿಕ ಸುಖ ನೀಡಬೇಕಿತ್ತು. ಅಲ್ಲದೇ ಲೆಸ್ಬಿಯನ್ ರೀತಿಯಲ್ಲಿ ವರ್ತಿಸಬೇಕಿತ್ತು ಎಂದು ಸೋನು ಅಂದಿನ ಕರಾಳ ದಿನಗಳ ಬಗ್ಗೆ ಉಲ್ಲೇಖಿಸಿದ್ದಾರೆ.

ಅಷ್ಟೇ ಅಲ್ಲದೇ ಪಂದ್ಯಗಳನ್ನು ಆಡಲು ವಿದೇಶಕ್ಕೆ ಹೋದಾಗ ರಾತ್ರಿ ಆಟಗಾರ್ತಿಯರ ಕೋಣೆಗಳಲ್ಲಿಯೇ ಟೀ ಮ್ಯಾನೇಜ್ ಮೆಂಟ್ ಗಳ ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗುತ್ತಿತ್ತು. ಹೀಗೆ ಮಾಜಿ ಫುಟ್ಬಾಲ್ ಆಟಗಾರ್ತಿ ಸೋನು ಚೌಧರಿ ಅವರು ಭಾರತ ಫುಟ್ಬಾಲ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಿದ್ದರೆ ಆಟಗಾರ್ತಿಯರು ಏನೆಲ್ಲ ಮಾಡಬೇಕಿತ್ತು ಎಂದು ಗೇಮ್ ಇನ್ ಗೇಮ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

1995 ರಲ್ಲಿ ಅಂತರಾಷ್ಟ್ರೀಯ ಫುಟ್ಬಾಲ್ ಗೆ ಪಾದಾರ್ಪಣೆ ಮಾಡಿದ್ದ ಸೋನು ಚೌಧರಿ ಕೇವಲ ಒಂದೇ ಒಂದು ವರ್ಷದಲ್ಲಿ ಭಾರತ ತಂಡದ ನಾಯಕಿಯಾಗಿ ಆಯ್ಕೆಗೊಂಡಿದ್ದರು. 1998ರ ಏಷ್ಯನ್ ಗೇಮ್ಸ್ ವೇಳೆ ಮೊಣಕಾಲು ಹಾಗೂ ಬೆನ್ನುಮೂಳೆಗೆ ಗಂಭೀರ ಗಾಯ ಮಾಡಿಕೊಂಡಿದ್ದ ಸೋನಾ, 2002 ರಲ್ಲಿ ಸೋನು ಭಾರತ ಫುಟ್ಬಾಲ್ ತಂಡಕ್ಕೆ ವಿದಾಯ ಹೇಳಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Indian Women football team captain Sona Chaudhary came up with few sensational and shocking revelations in her new book ‘Game in Game’. Sona wrote about how team management, coach and secretary harassed the female players of the squad
Please Wait while comments are loading...