ಭಾರತೀಯ ಹಾಕಿ ದಿಗ್ಗಜ ಮೊಹಮ್ಮದ್ ಶಾಹಿದ್ ಇನ್ನಿಲ್ಲ

Posted By:
Subscribe to Oneindia Kannada

ಬೆಂಗಳೂರು, ಜುಲೈ 20: ಭಾರತೀಯ ಹಾಕಿ ದಿಗ್ಗಜ, ಮಾಜಿ ಒಲಿಂಪಿಯನ್ ಮೊಹಮ್ಮದ್ ಶಾಹಿದ್(56) ಅವರು ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ. ಕೆಲ ಕಾಲದಿಂದ ಕರಳುಬೇನೆ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಮೊಹಮ್ಮದ್ ಶಾಹಿದ್ ಅವರು ಹೊಟ್ಟೆ ನೋವಿನ ಕಾರಣದಿಂದ ಜೂನ್ 29ರಂದು ಬನಾರಸ್ ಹಿಂದು ವಿಶ್ವವಿದ್ಯಾಲಯದ ಎಸ್​ಎಸ್​ಎಲ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಗುರ್ಗಾಂವ್​ನ ಮೇದಾಂತ ಮೆಂಡಿಸಿಟಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ನಿಧನರಾಗಿದ್ದಾರೆ ಎಂದು ಕುಟುಂಬ ಮೂಲಗಳು ಹೇಳಿವೆ.

Read also ರಿಯೋ ಒಲಿಂಪಿಕ್ಸ್ ಗೆ ಹಾಕಿ ತಂಡ ಪ್ರಕಟ, ನಾಲ್ವರು ಕನ್ನಡಿಗರು

ಮೃತರು ಮತ್ನಿ ಪರ್ವೀನ್ ಶಾಹಿದ್ ಹಾಗೂ ಮಕ್ಕಳಾದ ಮೊಹಮ್ಮದ್ ಸೈಫ್ ಮತ್ತು ಹೀನಾ ಶಾಹಿದ್ ಅವರನ್ನು ಅಗಲಿದ್ದಾರೆ.

Former Indian Hockey star Mohammad Shahid passes away at 56

ಒಲಿಂಪಿಕ್ಸ್ ಹೀರೋ: ಮೊಹಮ್ಮದ್ ಶಾಹಿದ್ ಅವರು 1980ರ ಮಾಸ್ಕೊ ಒಲಿಂಪಿಕ್ಸ್​ನಲ್ಲಿ ಅತ್ಯಾಕರ್ಷಕ ಆಟದೊಂದಿದೆ ತಂಡಕ್ಕೆ ಆಧಾರಸ್ತಂಭವೆನಿಸಿಕೊಂಡಿದ್ದರು.

Read also ಹಾಕಿ ಶ್ರೇಯಾಂಕ : 5ನೇ ಸ್ಥಾನಕ್ಕೇರಿದ ಭಾರತ ಪುರುಷರ ತಂಡ

ಏಪ್ರಿಲ್ 14ರ 1960ರಂದು ವಾರಾಣಸಿಯಲ್ಲಿ ಜನಿಸಿದ ಮೊಹಮ್ಮದ್ ಶಾಹಿದ್ ಅವರು ತಮ್ಮ 19ನೇ ವಯಸ್ಸಿನಲ್ಲಿ ಫ್ರಾನ್ಸ್ ವಿರುದ್ಧ ಕಿರಿಯರ ವಿಶ್ವಕಪ್ (1979)ನಲ್ಲಿ ಆಡಿ ಗಮನ ಸೆಳೆದಿದ್ದರು. ನಂತರ ಮೊಹಮ್ಮದ್ ಶಾಹಿದ್ ಅವರು 1980ರ ಮಾಸ್ಕೊ ಒಲಿಂಪಿಕ್ಸ್​ನಲ್ಲಿಉತ್ತಮ ಪ್ರದರ್ಶನ ನೀಡಿದರು.

1985-86ನೇ ಸಾಲಿನಲ್ಲಿ ಮೊಹಮ್ಮದ್ ಶಾಹಿದ್ ಭಾರತ ತಂಡದ ನಾಯಕರಾದರು. 1981ರಲ್ಲಿ ಅರ್ಜುನ ಪ್ರಶಸ್ತಿ, 1986ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಮೊಹಮ್ಮದ್ ಶಾಹಿದ್ ಅವರು ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆದುಕೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Former Indian hockey star Mohammad Shahid passed away on Wednesday (July 20) due to liver and kidney ailment at Gurgaon's Medanta Hospital.
Please Wait while comments are loading...