ಭ್ರಷ್ಟಾಚಾರದ ಆರೋಪ ಟೆನಿಸ್ ಆಟಗಾರನಿಗೆ ನಿಷೇಧ!

Posted By:
Subscribe to Oneindia Kannada

ಸಿಡ್ನಿ, ಜನವರಿ 10: ಭ್ರಷ್ಟಾಚಾರದ ಆರೋಪ ಹೊತ್ತಿರುವ ಆಸ್ಟ್ರೇಲಿಯಾದ ಟೆನಿಸ್ ಆಟಗಾರ ನಿಕ್ ಲೆಂಡ್ ಹಾಲ್ ಅವರನ್ನು ಏಳು ವರ್ಷಗಳ ನಿಷೇಧ ಹೇರಿ ಮಂಗಳವಾರ ಆದೇಶ ಹೊರಡಿಸಲಾಗಿದೆ. ನಿಷೇಧದ ಜತೆಗೆ 35,000 ಯುಎಸ್ ಡಾಲರ್ ದಂಡವನ್ನು ವಿಧಿಸಲಾಗಿದೆ.

ವೃತ್ತಿ ಬದುಕಿನಲ್ಲಿ ಗರಿಷ್ಠ 187ನೇ ಶ್ರೇಯಾಂಕ ತನಕ ತಲುಪಿದ್ದ ನಿಕ್ ಲೆಂಡ್ ಹಾಲ್ ಅವರು ಟೆನಿಸ್ ಇಂಟಿಗ್ರಿಟಿ ಯೂನಿಟ್ (ಟಿಐಯು) ತನಿಖೆ ಗೆ ಸಹಕರಿಸದ ಕಾರಣ ನಿಷೇಧಕ್ಕೊಳಗಾಗಬೇಕಿದೆ.

Former Australian tennis player gets seven-year ban for corruption

2013ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಫ್ಯೂಚರ್ಸ್ ಟೂರ್ನಮೆಂಟ್ ನಲ್ಲಿ ಪಂದ್ಯವೊಂದನ್ನು ಕೈಚೆಲ್ಲಲು ಆಫರ್ ಪಡೆದ ಆರೋಪ ಕೇಳಿ ಬಂದಿದೆ. ಹಾಗೂ ತನಿಖಾ ತಂಡಕ್ಕೆ ತನ್ನ ಮೊಬೈಲ್ ನೀಡಲು ನಿರಾಕರಿಸಿದ್ದರು.

2013ರ ನಂತರ ನಿವೃತ್ತಿ ಪಡೆದ ಲೆಂಡಹಾಲ್ ಅವರು ಇನ್ಮುಂದೆ 7 ವರ್ಷಗಳ ಕಾಲ ವೃತ್ತಿಪರ ಟೆನಿಸ್ ಆಡಲು ಬಯಸಿದರೂ ಸಾಧ್ಯವಾಗುವುದಿಲ್ಲ. ಟೆನಿಸ್ ಸಂಬಂಧಿಸಿದ ಕಾರ್ಯಕ್ರಮಗಳು, ಆಡಳಿತ ಮಂಡಳಿಯಲ್ಲೂ ಕಾರ್ಯ ನಿರ್ವಹಿಸುವಂತಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಈಗಾಗಲೇ ಮಾಹಿತಿ ನೀಡದ ಕಾರಣಕ್ಕೆ ಆಸ್ಟ್ರೇಲಿಯಾ ಕೋರ್ಟಿನಿಂದ ಲೆಂಡಹಾಮ್ ಗೆ 1,000 ಡಾಲರ್ ದಂಡ ವಿಧಿಸಲಾಗಿದೆ. ಬ್ರಾಂಡನ್ ವಾಕಿನ್ ಹಾಗೂ ಐಸಾಕ್ ಫ್ರೊಸ್ಟ್ ಎಂಬ ಆಟಗಾರರಿಗೂ ಶಿಕ್ಷೆ ನೀಡಲಾಗಿದೆ. (ಎಎಫ್ ಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Australian tennis player Nick Lindahl was today, January 10, banned for seven years and fined USD 35,000 over corruption allegations with two others also sanctioned, just days out from the first Grand Slam of the year.
Please Wait while comments are loading...