ಜರ್ಮನಿ ಕ್ಲಬ್ ಪರ 'ರೆಡ್ ಡೆವಿಲ್ಸ್' ಫ್ಯಾನ್ ಬೋಲ್ಟ್ ಓಟ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 14: ಇಂಗ್ಲೆಂಡ್ ಪ್ರೀಮಿಯರ್ ಲೀಗ್ ನ ಅತ್ಯಂತ ಜನಪ್ರಿಯ ಫುಟ್ಬಾಲ್ ಕ್ಲಬ್ ತಂಡ ಮ್ಯಾಂಚೆಸ್ಟರ್ ಯುನೈಟೆಡ್ ನ ಸೆಲೆಬ್ರಿಟಿ ಫ್ಯಾನ್ ಈಗ ಜರ್ಮನಿಯ ಕ್ಲಬ್ ಪರ ತಮ್ಮ ಓಟ ಆರಂಭಿಸಿದ್ದಾರೆ.

ಜಗದೇಕ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಅವರು ಈಗ ಬುಂಡೆಲ್ಸೀಗಾದ ಕ್ಲಬ್ ತರಬೇತಿ ಕೇಂದ್ರ ಸೇರಲಿದ್ದಾರೆ. ಮೊದಲಿಗೆ ಈ ಸುದ್ದಿ ಬಂದಾಗ ಎಲ್ಲರೂ ತಮಾಷೆಗೆ ಎಂದು ತಿಳಿದಿದ್ದರೂ ಆದರೆ, ಬುಂಡೆಲ್ಸೀಗಾದ ತಂಡ ಬೊರುಸ್ಸಿಯಾ ಡೊರ್ಟ್ಮಂಡ್ ನ ಸಿಇಒ ಜೋಕಿಮ್ ವಾಜ್ಕೆ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಒಲಿಂಪಿಕ್ಸ್ ದಿಗ್ಗಜ 9 ಬಾರಿ ಚಿನ್ನದ ಪದಕ ಗೆದ್ದಿರುವ ಉಸೇನ್ ಬೋಲ್ಟ್ ಅವರು ನಮ್ಮ ತಂಡದ ತರಬೇತಿ ಶಿಬಿರ ಸೇರಿ, ನಮ್ಮೊಂದಿಗೆ ತರಬೇತಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.

Usain Bolt to train with Borussia Dortmund squad

ಜರ್ಮನಿ ತಂಡದ ಲಿಂಕ್ ಹೇಗೆ?: ಪ್ಯೂಮಾ ಮುಖ್ಯಸ್ಥ ಯೊರ್ನ್ ಗುಲ್ಡೆನ್ ಅವರು ಜರ್ಮನಿಯ ಕ್ಲಬ್ ನ ನಿರ್ದೇಶಕರಲ್ಲಿ ಒಬ್ಬರಾಗಿದ್ದು, ಉಸೇನ್ ಅವರ ಕಠಿಣ ತರಬೇತಿಯ ಲಾಭ ಫುಟ್ಬಾಲ್ ತಂಡಕ್ಕೂ ಸಿಗಲಿ ಎಂಬ ಉದ್ದೇಶದಿಂದ ಹೀಗೊಂದು ಯೋಜನೆ ರೂಪಿಸಿದ್ದಾರೆ.

ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬಿನ ಬಹುದೊಡ್ಡ ಅಭಿಮಾನಿಯಾದ ಉಸೇನ್ ಬೋಲ್ಟ್ ಅವರಿಗೆ 2012ರಲ್ಲಿ ಓಲ್ಡ್ ಟ್ರಾಫರ್ಡ್ ನಲ್ಲಿ ವಿಶೇಷ ಜರ್ಸಿಯನ್ನು ಕೂಡಾ ನೀಡಲಾಗಿತ್ತು. 9.63 ಎಂದು ಹಿಂಬದಿಯಲ್ಲಿ ದಾಖಲೆ ಸೆಕೆಂಡುಗಳನ್ನು ಬರೆಯಲಾಗಿತ್ತು. ಇದು 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕ್ರಮಿಸಿದ ದಾಖಲೆ ಅವಧಿಯಾಗಿದೆ.

ಅಥ್ಲೆಟಿಕ್ಸ್ ಅಲ್ಲದೆ ಕ್ರಿಕೆಟ್ ಹಾಗೂ ಫುಟ್ಬಾಲ್ ನಲ್ಲೂ ಸಮಾನ ಆಸಕ್ತಿ ಹೊಂದಿರುವ ಬೋಲ್ಟ್ ಅವರು ಕ್ರಿಕೆಟ್ ಹಾಗೂ ಫುಟ್ಬಾಲ್ ಲೀಗ್ ಗಳ ಜತೆ ತೊಡಗಿಕೊಂಡಿರುವುದು ಅಭಿಮಾನಿಗಳಿಗೆ ಸಕತ್ ಖುಷಿ ಕೊಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Usain Bolt is an ardent Manchester United fan when it comes to football and he has expressed his love for the Red Devils on several occasions.
Please Wait while comments are loading...