ಕೊಲಂಬಿಯಾ ವಿಮಾನ ದುರಂತ: ಕಂಬನಿ ಮಿಡಿದ ಫುಟ್ಬಾಲ್ ಪ್ರೇಮಿಗಳು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 29: ಕೊಲಂಬಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ವಿಮಾನ ಅಪಘಾತಕ್ಕೀಡಾಗಿ 75 ಮಂದಿ ಮೃತಪಟ್ಟಿದ್ದು, ಆರು ಜನ ಮಾತ್ರ ಬದುಕುಳಿದಿದ್ದಾರೆ ಎಂದು ಮೆಡಿಲಿನ್ ನಗರದ ಮೇಯರ್ ಫೆಡ್ರಿಕೋ ಗುಟಿರೇಜ್ ತಿಳಿಸಿದ್ದಾರೆ. ಈ ದುರಂತದಲ್ಲಿ ಮೃತಪಟ್ಟ ಫುಟ್ಬಾಲರ್ ಗಳಿಗಾಗಿ ಟ್ವಿಟ್ಟರ್ ನಲ್ಲಿ ಕಂಬನಿಧಾರೆ ಹರಿದು ಬಂದಿದೆ.

ಬೊಲಿವಿಯಾದಿಂದ ಹೊರಟ್ಟಿದ್ದ ವಿಮಾನ ಮೆಡೆಲಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿತ್ತು. ಬ್ರೆಜಿಲ್ಲಿನ ಚಾಪೆಕೊಯಿನ್ಸೆ ಫುಟ್ಬಾಲ್ ತಂಡ ಹಾಗೂ ಅಟ್ಲೆಟಿಕೋ ನ್ಯಾಷಿನಲ್ ನಡುವೆ ಕೋಪಾ ಸುಡಾಮೆರಿಕಾ ಫೈನಲ್ ಪಂದ್ಯ ಮೆಡೆಲಿನ್ ನಲ್ಲಿ ನಿಗದಿಯಾಗಿತ್ತು. ವಿಮಾನದಲ್ಲಿ 9 ಮಂದಿ ಸಿಬ್ಬಂದಿ ಕೂಡಾ ಇದ್ದರು.

ಮೆಡೆಲಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಳಿ ಬಂದಾಗ ಇಂಧನ ಕೊರತೆ ಎದುರಿಸಿದ್ದರಿಂದ ವಿಮಾನವನ್ನು ರನ್ ವೇ ಬಳಿ ಕರೆದೊಯ್ಯಲಾಗಲಿಲ್ಲ. ಸ್ಥಳೀಯ ಕಾಲಮಾನ 10.15ರ ವೇಳೆಗೆ ಪತನಗೊಂಡಿತು ಎಂದು ತಿಳಿದು ಬಂದಿದೆ.

ದುರಂತದಲ್ಲಿ ಬಚಾವಾದವರು

ದುರಂತದಲ್ಲಿ ಬಚಾವಾದವರು

ಒಂದು ತಿಂಗಳ ಇದೇ ವಿಮಾನ ಸಂಸ್ಥೆಯ ವಿಮಾನದಲ್ಲಿ ಮೆಸ್ಸಿ ಸೇರಿದಂತೆ ಅರ್ಜೆಂಟಿನಾ ತಂಡ ಪ್ರಯಾಣಿಸಿತ್ತು. ಮೆಡಿಲಿನ್ ದುರಂತದಲ್ಲಿ ಬಚಾವಾದ ಐದು ಫುಟ್ಬಾಲರ್ ಡಾನಿಲೊ, ಫೊಲ್ಮಾನ್, ಅಲಾನ್ ರಶೆಲ್, ಪತ್ರಕರ್ತ ರಫೆಲ್ ಹೆನ್ಜೆಲ್ ಹಾಗೂ ಸಿಬ್ಬಂದಿ ಕ್ಸಿಮೆನಾ ಸ್ವಾರೇಜ್. Chapecoense football team (Image courtesy: Chapecoense Twitter handle)

ಸೆಮಿಫೈನಲ್ ಪಂದ್ಯ ಗೆದ್ದ ಸಂಭ್ರಮದಲ್ಲಿ

ಸೆಮಿಫೈನಲ್ ಪಂದ್ಯ ಗೆದ್ದ ಸಂಭ್ರಮದಲ್ಲಿ ಬ್ರೆಜಿಲ್ಲಿನ ಚಾಪೆಕೊಯಿನ್ಸೆ ಫುಟ್ಬಾಲ್ ತಂಡ

ನಿಜಕ್ಕೂ ನಂಬಲು ಆಗುತ್ತಿಲ್ಲ

ಬ್ರೆಜಿಲ್ಲಿನ ಚಾಪೆಕೊಯಿನ್ಸೆ ಫುಟ್ಬಾಲ್ ತಂಡಕ್ಕೆ ಇಂಥ ದುರಂತ ಒದಗಿ ಬರುತ್ತದೆ ಎಂಬುದನ್ನು ನಿಜಕ್ಕೂ ನಂಬಲು ಆಗುತ್ತಿಲ್ಲ

ಬೆಳಗ್ಗೆ ಎದ್ದು ಎಂಥಾ ಕೆಟ್ಟ ಸುದ್ದಿ

ಬೆಳಗ್ಗೆ ಎದ್ದು ಎಂಥಾ ಕೆಟ್ಟ ಸುದ್ದಿ ನನ್ನ ಕಣ್ಣ ಮುಂದಿದೆ. ಫುಟ್ಬಾಲರ್ಸ್ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ

ಫುಟ್ಬಾಲ್ ತಂಡ ಕೊನೆ ಚಿತ್ರ

ಕೊಲಂಬಿಯಾ ವಿಮಾನ ಪತನದ ನಂತರ ಸಾಮಾಜಿಕ ಜಾಲ ತಾಣಗಳಲ್ಲಿ ಫುಟ್ಬಾಲ್ ತಂಡ ಕೊನೆ ಚಿತ್ರ ಹರಿದಾಡುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A tragic incident shook the football world this morning when the news came in that an airplane carrying Brazilian football club Chapecoense football team crashed in Medellin, Colombia.
Please Wait while comments are loading...