ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲರ್ಸ್: ಮೆಸ್ಸಿ, ರೊನಾಲ್ಡೊ ಅಲ್ಲ!

Posted By:
Subscribe to Oneindia Kannada

ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 20 ಫುಟ್ಬಾಲರ್ಸ್
ಬೆಂಗಳೂರು, ಡಿಸೆಂಬರ್ 25 : 2016ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಬಾರ್ಸಿಲೋನಾದ ಲಿಯೊನೆಲ್ ಮೆಸ್ಸಿಯಾಗಲಿ, ರಿಯಲ್ ಮ್ಯಾಡ್ರಿಡ್ ನ ಕ್ರಿಸ್ಟಿಯಾನೊ ರೊನಾಲ್ಡೊ ಇಲ್ಲ ಎಂಬುದು ಅಚ್ಚರಿಯಾದರೂ ಸತ್ಯ. ಅರ್ಜೆಂಟೀನಾದ ಕಾರ್ಲೊಸ್ ಟೆವೆಜ್ ಹಾಗೂ ಬ್ರೆಜಿಲ್ಲಿನ ಆಸ್ಕರ್ ಈಗ ಮೊದಲೆರಡು ಸ್ಥಾನಕ್ಕೆ ಜಿಗಿದಿದ್ದಾರೆ.

ಇತ್ತೀಚೆಗೆ ಬಾಲ್ಯದ ಗೆಳತಿಯನ್ನು ವರಿಸಿದ ಅರ್ಜೆಂಟೀನಾ ಮುಂಪಡೆ ಫುಟ್ಬಾಲರ್ ಕಾರ್ಲೊಸ್ ಟೆವೆಜ್ ಅವರು ಕೂಡಾ ಚೀನಾದ ಕ್ಲಬ್ ಸೇರುತ್ತಿದ್ದು, ಪ್ರತಿ ವಾರಕ್ಕೆ 615,000 ಪೌಂಡ್ ಪಡೆಯಲಿದ್ದು, ಅಗ್ರಸ್ಥಾನದಲ್ಲಿದ್ದಾರೆ,

ಬ್ರೆಜಿಲ್ಲಿನ ಮಿಡ್ ಫೀಲ್ದರ್ ಆಸ್ಕರ್ ಅವರು ಚೀನಾದ ಲೀಗ್ ಆಡಲು 60 ಮಿಲಿಯನ್ ಪೌಂಡ್ ಪಡೆದಿದ್ದು, ವರ್ಷದ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.


ಇಂಗ್ಲೀಷ್ ಪ್ರೀಮಿಯರ್ ಲೀಗ್ ನ ಚೆಲ್ಸಿಯಾ ತಂಡದಲ್ಲಿದ್ದ ಆಸ್ಕರ್ ಅವರು ಚೀನಾದ ಸೂಪರ್ ಲೀಗ್ ತಂಡಕ್ಕೆ ಭಾರಿ ಮೊತ್ತದೊಂದಿಗೆ ಜಿಗಿದಿದ್ದಾರೆ.ವಾರವೊಂದಕ್ಕೆ 400,000 ಪೌಂಡ್ ಗಳಿಸಲಿರುವ ಆಸ್ಕರ್ ಅವರು ಒಟ್ಟಾರೆ ಹಣ ಗಳಿಕೆ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಲಿಯೊನೆಲ್ ಮೆಸ್ಸಿ ನಂತರದ ಸ್ಥಾನದಲ್ಲಿದ್ದಾರೆ.


ಒಂದು ತಿಂಗಳ ಕೆಳಗೆ ರಿಯಲ್ ಮ್ಯಾಡ್ರಿಡ್ ನ ಸ್ಟಾರ್ ಆಟಗಾರರಾದ ರೊನಾಲ್ಡೊ ಹಾಗೂ ಗರೇತ್ ಬೇಲ್ ಅವರ ಗುತ್ತಿಗೆ ನವೀಕರಿಸಲಾಯಿತು. ಪರಿಷ್ಕೃತ ದರದಂತೆ ಬೇಲ್ ಅವರು ವಾರವೊಂದಕ್ಕೆ 350,000 ಪೌಂಡ್ ಗಳಿಸಲಿದ್ದು, ರೊನಾಲ್ಡೊ ಅವರು ವಾರವೊಂದಕ್ಕೆ 365, 000 ಪೌಂಡ್ ಪಡೆಯಲಿದ್ದಾರೆ.


ಲಿಯೊನೆಲ್ ಮೆಸ್ಸಿ ಸದ್ಯಕ್ಕೆ ಪ್ರತಿ ವಾರಕ್ಕೆ 336,000 ಪೌಂಡ್ ಪಡೆಯುತ್ತಿದ್ದು, ಗುತ್ತಿಗೆ ನವೀಕರಣದ ಬಗ್ಗೆ ಇನ್ನೂ ಸುದ್ದಿ ಬಂದಿಲ್ಲ. ಟಾಪ್ 20 ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲರ್ ಗಳ ಪೈಕಿ ಬಾರ್ಸಿಲೋನಾಅ ಮೆಸ್ಸಿ,ಸ್ವಾರೇಜ್, ನೇಮಾರ್ ಇದ್ದರೆ, ಇಪಿಲ್ ನ ಕೆಲ ಸ್ಟಾರ್ ಆಟಗಾರರು ಸೇರಿದ್ದಾರೆ,

Top 20 highest paid footballers in the world

Carlos Tevez (Image courtesy: Boca Jrs. Twitter handle)

ಹೆಚ್ಚು ಸಂಭಾವನೆ ಪಡೆಯುವ ಟಾಪ್ 20 ಫುಟ್ಬಾಲರ್ಸ್ :

1. ಕಾರ್ಲೊಸ್ ಟೆವೆಜ್ (ಶಾಂಘೈ ಶೆನ್ಹ್ಯೂವಾ) -1) £615,000 (ಪ್ರತಿ ವಾರಕ್ಕೆ)
2. ಆಸ್ಕರ್ (ಶಾಂಘೈ ಎಸ್ ಐಪಿಜಿ) -£400,000
3. ಕ್ರಿಸ್ಟಿಯಾನೊ ರೊನಾಲ್ಡೊ (ರಿಯಲ್ ಮ್ಯಾಡ್ರಿಡ್) -£365,000
4. ಗರೇತ್ ಬೇಲ್ (ರಿಯಲ್ ಮ್ಯಾಡ್ರಿಡ್) - £350,000
5. ಲಿಯೊನೆಲ್ ಮೆಸ್ಸಿ (ಎಫ್ ಸಿ ಬಾರ್ಸಿಲೋನಾ) -£360,000
6.ಹಲ್ಕ್ (ಶಾಂಘೈ ಎಸ್ ಐಪಿಜಿ)- £320,000
7. ಪಾಲ್ ಪೋಗ್ಬಾ (ಮ್ಯಾಂಚೆಸ್ಟರ್ ಯುನೈಟೆಡ್)- £290,000
8. ಗ್ರಾಜಿಯಾನೊ ಪೆಲ್ಲೆ (ಶಾಂಗ್ಡೊಂಡ್ ಲುನೆಂಗ್) -£290,000
9. ನೇಮಾರ್ (ಎಫ್ ಸಿ ಬಾರ್ಸಿಲೋನಾ) -£275,000
10. ವೇಯ್ನ್ ರೂನಿ(ಮ್ಯಾಂಚೆಸ್ಟರ್ ಯುನೈಟೆಡ್) -£260,000
11. ರಾಬಿನ್ ವಾನ್ ಪರ್ಸಿ (ಫೆನೆರ್ಬಾಸ್) £240,000
12. ಯಾಯಾ ಟೊರೆ (ಮ್ಯಾಂಚೆಸ್ತರ್ ಸಿಟಿ) -£230,000
13. ಸರ್ಗಿಯೊ ಆಕ್ವೆರೊ (ಮ್ಯಾಂಚೆಸ್ಟರ್ ಸಿಟಿ) -£230,000
14.ಲೂಯಿಸ್ ಸ್ವಾರೇಜ್ (ಎಫ್ ಸಿ ಬಾರ್ಸಿಲೋನಾ)- £230,000
15.ಅಸಾಮೊವ್ ಗ್ಯಾನ್(ಶಾಂಘೈ ಎಸ್ ಐಪಿಜಿ)- £227,000
16. ಜ್ಲಾಟಾನ್ ಇಬ್ರಾಹಿಮೊವಿಚ್ (ಮ್ಯಾಂಚೆಸ್ಟರ್ ಯುನೈಟೆಡ್)- £220,000
17.ಎಜೆಕ್ವಿಲ್ ಲವೆಜ್ಜಿ(ಹರ್ಬೈ ಫಾರ್ಚ್ಯೂನ್)- £220,000
18. ಡೇವಿಡ್ ಸಿಲ್ವಾ(ಮ್ಯಾಂಚೆಸ್ಟರ್ ಯುನೈಟೆಡ್)-£210,000
19. ಡೇಇಡ್ ಡಿ ಗಿಯಾ(ಮ್ಯಾಂಚೆಸ್ಟರ್ ಯುನೈಟೆಡ್) -£200,000
20. ಬಾಸ್ಟಿನ್ ಶ್ವಾಸ್ಟೈಗರ್ (ಮ್ಯಾಂಚೆಸ್ಟರ್ ಯುನೈಟೆಡ್) -£200,000

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In this article, we have decided to make a list of top 20 highest wage earners in the football world. In this list Barcelona trio Messi, Suarez and Neymar features along with Ronaldo, Bale and quite a few EPL stars.
Please Wait while comments are loading...