ರೊನಾಲ್ಡೊ ವಿರುದ್ಧ ತೆರಿಗೆ ವಂಚನೆ ಪ್ರಕರಣ ದಾಖಲು

Posted By:
Subscribe to Oneindia Kannada

ಮ್ಯಾಡ್ರಿಡ್, ಜೂನ್ 13: ಜಗದ್ವಿಖ್ಯಾತ ಫುಟ್ಬಾಲ್ ಆಟಗಾರ, ಪೋರ್ಚುಗಲ್ ನ ಕ್ರಿಶ್ಚಿಯಾನೊ ರೊನಾಲ್ಡೊ ಅವರ ವಿರುದ್ಧ ತೆರಿಗೆ ವಂಚನೆ ಪ್ರಕರಣವೊಂದು ದಾಖಲಾಗಿದೆ.

ಸ್ಪೇನ್ ನ ಪ್ರತಿಷ್ಠಿತ ಫುಟ್ಬಾಲ್ ಸಂಸ್ಥೆಯಾದ ರಿಯಲ್ ಮ್ಯಾಂಡ್ರಿಡ್ ತಂಡಕ್ಕೂ ಆಡುತ್ತಿರುವ ರೊನಾಲ್ಡೊ, 2011ರಿಂದ 2014ರ ಅವಧಿಯಲ್ಲಿ ಸ್ಪೇನ್ ಸರ್ಕಾರದ ತೆರಿಗೆ ನಿಯಮಗಳನ್ನು ಉಲ್ಲಂಘಿಸಿದ್ದು, ಆಗನಿಂದ ಈವರೆಗೆ ಸುಮಾರು 14.7 ಮಿಲಿಯನ್ ಯೂರೋಸ್ (ಸುಮಾರು 106.10 ಕೋಟಿ ರು.) ತೆರಿಗೆ ವಂಚನೆ ನಡೆಸಿದ್ದಾರೆಂಬ ಆರೋಪ ಹೊತ್ತಿದ್ದಾರೆ.

Spanish prosecutor files tax fraud lawsuit against Cristiano Ronaldo

ಈ ಆರೋಪಗಳ ತನಿಖೆ ನಡೆಸಿದ ಸ್ಪೇನ್ ಸರ್ಕಾರದ ತನಿಖಾಧಿಕಾರಿಗಳು ಮಂಗಳವಾರ (ಜೂನ್ 3), ಅವರ ವಿರುದ್ಧ ಮ್ಯಾಡ್ರಿಡ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ರಿಯಲ್ ಮ್ಯಾಡ್ರಿಡ್ ತಂಡಕ್ಕೆ ಸೇರ್ಪಡೆಗೊಂಡ ನಂತರ, ಹಲವಾರು ಬ್ರಾಂಡ್ ಗಳಿಗೆ ತಮ್ಮ ಫೋಟೋ ಉಪಯೋಗಿಸಲು ಅನುವು ಮಾಡಿಕೊಟ್ಟಿದ್ದ ರೊನಾಲ್ಡೊ, ಅದರಿಂದ ಸಾವಿರಾರು ಕೋಟಿ ಆದಾಯ ಮಾಡಿಕೊಂಡಿದ್ದಾರೆ.

ಆದರೆ, ಸ್ಪೇನ್ ಸರ್ಕಾರಕ್ಕೆ ಅದರ ಮಾಹಿತಿ ಬಿಟ್ಟುಕೊಡದೇ ಅವರು ಆ ಮೂಲದಿಂದ ಬಂದ ಹಣಕ್ಕೆ ಕಟ್ಟಬೇಕಿದ್ದ ತೆರಿಗೆಯನ್ನು ವಂಚಿಸಿದ್ದಾರೆಂದು ಸರ್ಕಾರಿ ತನಿಖಾಧಿಕಾರಿಗಳು ಅವರ ವಿರುದ್ಧದ ದಾವೆಯಲ್ಲಿ ಆರೋಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Soccer star Cristiano Ronaldo faces a lawsuit filed on Tuesday by Spain's prosecutor's office in Madrid for allegedly defrauding Spanish tax authorities of 14.7 million euros ($16.48 million) between 2011 and 2014.
Please Wait while comments are loading...