ಫುಟ್ಬಾಲ್ ದುರಂತ: ಸ್ಟಾರ್ ಆಟಗಾರನ ಕಣ್ಣಿಗೆ ತೀವ್ರ ಗಾಯ

Posted By:
Subscribe to Oneindia Kannada

ಇಸ್ತಾನ್ ಬುಲ್, ನವೆಂಬರ್ 07: ಫುಟ್ಬಾಲ್ ಪಂದ್ಯದ ವೇಳೆ ಭಾರಿ ದುರಂತವೊಂದು ಸಂಭವಿಸಿದ್ದು, ಸ್ಟಾರ್ ಆಟಗಾರ ತನ್ನ ಒಂದು ಕಣ್ಣನ್ನು ಕಳೆದುಕೊಳ್ಳುವ ಸ್ಥಿತಿ ತಲುಪಿದ್ದಾರೆ. ಆರ್ಸೆನೆಲ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ಪರ ಅಡಿರುವ ಸ್ಟಾರ್ ಸ್ಟ್ರೈಕರ್ ರಾಬಿನ್ ವಾನ್ ಪರ್ಸಿ(ಆರ್ ವಿಪಿ) ಅವರು ಟರ್ಕಿ ದೇಶದ ಸೂಪರ್ ಲೀಗ್ ಪಂದ್ಯದ ವೇಳೆ ರಾಬಿನ್ ಗೆ ಭಾರಿ ಪೆಟ್ಟು ತಗುಲಿದೆ.

ಅಖಿಸಾರ್ ಬೆಲೆಡಿಯೆಸ್ ಪೋರ್ ಹಾಗೂ ಫೆನೆರ್ಬಾಸ್ ನಡುವಿನ ಪಂದ್ಯದಲ್ಲಿ ಈ ದುರಂತ ಸಂಭವಿಸಿದೆ. 33 ವರ್ಷ ವಯಸ್ಸಿನ ಡಚ್ ಮೂಲದ ವಾನ್ ಪರ್ಸಿಗೆ ತಗುಲಿರುವ ಗಾಯದ ತೀವ್ರತೆ ಗಮನಿಸಿದರೆ ಒಂದು ಕಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದೆ.

Robin van Persie suffers horrific eye injury, may lose sight in one eye

ಪಂದ್ಯದ ವೇಳೆ ಸಹ ಆಟಗಾರನ ಜತೆ ಘರ್ಷಣೆಯಾಗಿ ರಾಬಿನ್ ಕಣ್ಣಿಗೆ ನೇರವಾಗಿ ಪೆಟ್ಟಾಗಿದೆ, ಕಣ್ಣಿನ ರೆಪ್ಪೆ, ಹುಬ್ಬು ಸೀಳಿ ರಕ್ತ ಸೋರಿದೆ ಎಂದು ಫೆನೆರ್ ಬಾಸ್ ತಂಡದ ವೈದ್ಯ ಬುರಕ್ ಕುಂದುರಸಿಯೊಗ್ಲ್ ಹೇಳಿದ್ದಾರೆ.

ಆದರೆ, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಕಣ್ಣಿನ ದೃಷ್ಟಿ ಮರುಕಳಿಸಬಹುದು ಎಂಬ ಸುದ್ದಿಯೂ ಇದೆ. ಅಖಿಸಾರ್ ಬ್ಲೆ ಡಿಯೆಸ್ಪೊರ್ ತಂಡದ ಡಿಫೆಂಡರ್ ಗೆ ಪರ್ಸಿ ಗುದ್ದಿದಾಗ ಪರ್ಸಿ ಅವರ ಎಡಗಣ್ಣಿಗೆ ತೀವ್ರ ಪೆಟ್ಟಾಗಿದೆ ಎಂದು ವಿಡಿಯೋದಿಂದ ತಿಳಿದು ಬಂದಿದೆ.

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Former Arsenal and Manchester United star striker Robin van Persie suffered a horrific eye injury while playing in the Super Lig for Fenerbahce against Akhisar Belediyespor.
Please Wait while comments are loading...