ರೊನಾಲ್ಡೊ ಕಮಾಲ್, ಕ್ಲಬ್ ವಿಶ್ವಕಪ್ ಗೆದ್ದ ಮ್ಯಾಡ್ರಿಡ್

Posted By:
Subscribe to Oneindia Kannada

ಯೊಕೊಹಾಮ(ಜಪಾನ್), ಡಿಸೆಂಬರ್ 19: ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೊ ರೊನಾಲ್ಡೊ ಅವರ 'ಹ್ಯಾಟ್ರಿಕ್' ಗೋಲುಗಳ ನೆರವಿನಿಂದ ಸ್ಪೇನಿನ ರಿಯಲ್ ಮ್ಯಾಡ್ರಿಡ್ ತಂಡ ಈ ಬಾರಿಯ ಕ್ಲಬ್ ವಿಶ್ವಕಪ್ ಗೆದ್ದುಕೊಂಡಿದೆ.

ಭಾನುವಾರದಂದು ಇಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಆತಿಥೇಯ ಕಾಶಿಮಾ ಅಂಟ್ಲೆರ್ಸ್‌ ತಂಡದ ವಿರುದ್ಧ ಹೆಚ್ಚುವರಿ ಸಮಯದಲ್ಲಿ 2-4 ಗೋಲುಗಳ ಅಂತರದಲ್ಲಿ ಮ್ಯಾಡ್ರಿಡ್ ಗೆಲುವು ಸಾಧಿಸಿತು.

ನಿಗದಿತ 90 ನಿಮಿಷಗಳ ಆಟದಲ್ಲಿ ಉಭಯ ತಂಡಗಳು 2-2 ರಿಂದ ಸಮಬಲ ಸಾಧಿಸಿ, ಕುತೂಹಲ ಹೆಚ್ಚಿಸಿದ್ದವು, ಹೆಚ್ಚುವರಿ ಸಮಯದಲ್ಲಿ (98, 102 ನಿಮಿಷ) ಗೋಲು ಬಾರಿಸಿದ ರೊನಾಲ್ಡೊ ಕಪ್ ಎತ್ತಿ ಮುತ್ತಿಟ್ಟರು.

Real Madrid beat Kashima Antlers 4-2 to win Club World Cup

ರೊನಾಲ್ಡೊ ಅವರು ಮ್ಯಾಡ್ರಿಡ್‌ನ ಪರ 40ನೇ ಬಾರಿಗೆ ಹ್ಯಾಟ್ರಿಕ್ ಗೋಲು ಬಾರಿಸಿದರು. ಮ್ಯಾಡ್ರಿಡ್‌ನ ಪರ ಲೂಕಾ ಮ್ಯಾಡ್ರಿಕ್ 9ನೇ ನಿಮಿಷದಲ್ಲಿ 1-0 ಮುನ್ನಡೆ ಒದಗಿಸಿಕೊಟ್ಟರು. ನಂತರ ರೊನಾಲ್ಡೊ ಅವರದ್ದೇ ಆಟವಾಯಿತು.

ಚಾಂಪಿಯನ್ಸ್ ಲೀಗ್, ಯುರೋಪಿಯನ್ ಚಾಂಪಿಯನ್ ಹಾಗೂ 2016ರ ಬ್ಯಾಲನ್ ಡಿ'ಒರ್ ಪ್ರಶಸ್ತಿಯನ್ನು ಜಯಿಸಿದ ಪೋರ್ಚುಗಲ್ ಆಟಗಾರ ರೊನಾಲ್ಡೊ ಅವರು ಈ ವರ್ಷ ಕ್ಲಬ್ ಫುಟ್ಬಾಲ್ ವಿಶ್ವಕಪ್ ಕೂಡಾ ತಮ್ಮದಾಗಿಸಿಕೊಂಡಿದ್ದಾರೆ. ಸ್ಪೇನ್‌ನ ದೈತ್ಯ ಕ್ಲಬ್ 3 ವರ್ಷಗಳಲ್ಲಿ ಎರಡನೆ ಬಾರಿ ಕ್ಲಬ್ ವಿಶ್ವಕಪ್ ಹಾಗೂ ಒಟ್ಟಾರೆ 5ನೇ ಬಾರಿ ಈ ಪ್ರಶಸ್ತಿ ಗೆದ್ದುಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Spanish giants Real Madrid won the football Club World Cup, defeating Japanese side Kashima Antlers 4-2 in the final match at the International Stadium here on Sunday, December 18.
Please Wait while comments are loading...