ಇಪಿಎಲ್: ರೆಡ್ ಡೆವಿಲ್ಸ್ ಗೆಲುವಿಗೆ ಅಡ್ಡಿಯಾದ ಒಲಿವರ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 20: ಇಂಗ್ಲೀಷ್ ಪ್ರೀಮಿಯರ್ ಲೀಗ್(ಇಪಿಎಲ್) ನ 13ನೇ ವಾರದಲ್ಲಿ ಎರಡು ದಿಗ್ಗಜ ತಂಡಗಳ ಕಾಳಗ ಡ್ರಾನಲ್ಲಿ ಅಂತ್ಯ ಕಂಡಿದೆ. ಫ್ರೆಂಚ್ ಸ್ಟ್ರೈಕರ್ ಒಲಿವರ್ ಗಿರೋಡ್ ಹೊಡೆದ ಗೋಲು ಆರ್ಸೆನಲ್ ಮಾನ ಉಳಿಸಿತು. ಮೊದಲಿಗೆ ಗೋಲು ಗಳಿಸಿ ಮುನ್ನಡೆ ಪಡೆದಿದ್ದ ರೆಡ್ ಡೆವಿಲ್ಸ್ ಕೊನೆಡೆ 1-1 ಡ್ರಾಗೆ ತೃಪ್ತಿ ಪಡಬೇಕಾಯಿತು.

ಮ್ಯಾಂಚೆಸ್ಟರ್ ಯುನೈಟೆಡ್ ಪರ ಯುವಾನ್ ಮಾಠ 65ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಆರ್ಸೆನಲ್ ಪರ ಒಲಿವರ್ ಗಿರೋಡ್ ಕೊನೆ ಕ್ಷಣದಲ್ಲಿ ಚಂಬರ್ಲಿಯನ್ ನೀಡಿದ ಪಾಸನ್ನು ಗೋಲಾಗಿ ಪರಿವರ್ತಿಸಿ ಮ್ಯಾಂಚೆಸ್ಟರ್ ಯುನೈಟೆಡ್ ಆಸೆಗೆ ತಣ್ಣೀರೆರಚಿದರು.

ಪಂದ್ಯದ 90 ನಿಮಿಷಗಳ ಕಾಲ ಹಿಡಿತ ಸಾಧಿಸಿದ್ದ ರೆಡ್ ಡೆವಿಲ್ಸ್ ತಂಡ 3 ಅಂಕ ಗಳಿಸುವ ಎಲ್ಲಾ ಸಾಧ್ಯತೆಯಿತ್ತು. ಆದರೆ, 1 ಅಂಕ ಗಳಿಸಿ ಈಗ ಲೀಗ್ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.

ಇನ್ನೊಂದೆಡೆ ಲೀಗ್ ಆರಂಭದಲ್ಲಿ ಲಿವರ್ ಪೂಲ್ ವಿರುದ್ಧ ಸೋಲು ಕಂಡಿದ್ದ ಆರ್ಸೆನಲ್ ನಂತರ ಒಂದು ಪಂದ್ಯವನ್ನು ಬಿಟ್ಟುಕೊಟ್ಟಿಲ್ಲ. ಈ ಪಂದ್ಯದಲ್ಲೂ ಡ್ರಾ ಸಾಧಿಸುವ ಮೂಲಕ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ.

PHOTOS: EPL - Arsenal hold Manchester United for a 1-1 draw

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Juan Mata scored the opening goal for the Red Devils in the 65th minute. Manchester United dominated the proceedings of the match for almost the entire 90 minutes and deserved the three points.
Please Wait while comments are loading...