ಪನಾಮಾದ ಫುಟ್ಬಾಲ್ ಆಟಗಾರ ದುರಂತ ಸಾವು

Posted By:
Subscribe to Oneindia Kannada

ಪನಾಮಾ, ಏಪ್ರಿಲ್ 16: ಪನಾಮಾ ದೇಶದ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರರೊಬ್ಬರನ್ನು ಕಲೊನ್ ನಗರದಲ್ಲಿ ಅನಾಮಿಕ ಶಸ್ತ್ರಧಾರಿಗಳು ಗುಂಡಿಕ್ಕಿ ಕೊಂದು ಹಾಕಿರುವ ಘಟನೆ ನಡೆದಿದೆ.

ಸ್ಥಳೀಯ ಪೊಲೀಸರ ವರದಿಯಂತೆ ಶನಿವಾರದಂದು ಹಲವಾರು ಸುತ್ತಿನ ಗುಂಡಿನ ದಾಳಿಗೆ ಮಿಡ್ ಫೀಲ್ಡರ್ ಅಮಿಲ್ಕಾರ್ ಹೆನ್ರಿಕ್ಯೂಸ್ ತುತ್ತಾಗಿದ್ದಾರೆ ಎಂದು ಇಎಫ್ಇ ವರದಿ ಮಾಡಿದೆ.

Panama international footballer Amilcar Henriquez shot dead

ಪನಾಮಾ ಪರ ಸುಮಾರು 75 ಪಂದ್ಯಗಳನ್ನಾಡಿದ್ದ ಹೆನ್ರಿಕ್ಯೂಸ್ ಅವರು ತಮ್ಮ ಮೂಲ ಕ್ಲಬ್ ಆರಾಬೆ ಯೂನಿಡೊ ಕ್ಲಬ್ ಸೇರಿದ್ದರು. ಪನಾಮಾದ ಅಗ್ರಪಂಕ್ತಿಯ ಈ ಕ್ಲಬ್ ಪರ ಆಡುತ್ತಿದ್ದರು.

ಪನಾಮಾದ ಅಧ್ಯಕ್ಷ ಯುವಾನ್ ಕಾರ್ಲೊಸ್ ವರೆಲ ಅವರು ಈ ದುರ್ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಹತ್ಯೆಗೆ ಕಾರಣರಾದವರನ್ನು ಬಂಧಿಸಿ, ಶಿಕ್ಷಿಸುವುದಾಗಿ ಭರವಸೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Panama international footballer was shot dead in the coastal city of Colon after an unidentified armed assailant attacked him, police said.
Please Wait while comments are loading...