ಟಾಪ್ 05 ಡೀಲ್ ː ನೇಮಾರ್, ಪೋಗ್ಬಾ, ರೊನಾಲ್ಡೋ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 04: ಫುಟ್ಬಾಲ್ ಜಗತ್ತಿನ ಬಹುದೊಡ್ಡ ಬೌಟ್ ಡೀಲ್ ಮುಕ್ತಯವಾಗಿದೆ. ಫ್ರೆಂಚ್ ಕ್ಲಬ್ ನೀಡಿದ ಮೊತ್ತಕ್ಕೆ ಸ್ಪೇನಿನ ಬಾರ್ಸಿಲೋನಾ ಕ್ಲಬ್ ಒಪ್ಪಿಗೆ ಮುದ್ರೆ ಒತ್ತಿದೆ. ಬ್ರೆಜಿಲಿನ ಸ್ಟಾರ್ ಆಟಗಾರ ನೇಮಾರ್ ಜ್ಯೂನಿಯರ್ ಅವರು ಸ್ಪೇನಿನ ಬಾರ್ಸಿಲೋನಾ ತಂಡವನ್ನು ತೊರೆದು ಪ್ಯಾರೀಸ್ ಸೇಂಟ್ ಜರ್ಮೈನ್ (ಪಿಎಸ್ ಜಿ) ಸೇರುತ್ತಿದ್ದಾರೆ.

ವಿಶ್ವದಾಖಲೆಯ 222 ಮಿಲಿಯನ್ ಯುರೋ (ಸುಮಾರು 1680 ಕೋಟಿ ರು) ಗೆ ವರ್ಗಾವಣೆಯಾಗುತ್ತಿದ್ದರೆ, ನೇಮಾರ್ ಗೆ ವೈಯಕ್ತಿಕವಾಗಿ ವಾರ್ಷಿಕ 30 ಮಿಲಿಯನ್ ಯುರೋ ಸಿಗಲಿದೆ. ಕಳೆದ ವರ್ಷ ಯುವೆಂಟೆಸ್ ನಿಂದ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಬಿಗೆ ಪಾಲ್ ಪೋಗ್ಬಾ ಸುಮಾರು 747 ಕೋಟಿ ಮೊತ್ತಕ್ಕೆ ವರ್ಗಾವಣೆಗೊಂಡಿದ್ದರು.

ಒಂದು ತಂಡದೊಡನೆ ಒಪ್ಪಂದ ಹೊಂದಿರುವ ಆಟಗಾರನನ್ನು ಇನ್ನೊಂದು ತಂಡಕ್ಕೆ ಸೇರಿಸಿಕೊಳ್ಳಬೇಕಾದರೆ, ಮೂಲ ತಂಡಕ್ಕೆ ಭಾರಿ ಮೊತ್ತದ ಡೀಲ್ ಹಣ ನೀಡಬೇಕಾಗುತ್ತದೆ. ಇದನ್ನು ಬೈ ಔಟ್ ಕ್ಲಾಸ್ ಎನ್ನುತ್ತಾರೆ. 2021ರ ತನಕ ಬಾರ್ಸಿಲೋನಾ ಜತೆ ಒಪ್ಪಂದ ಮಾಡಿಕೊಂಡಿದ್ದ ನೇಮಾರ್ ಅವರು ಒಪ್ಪಂದಾ ಅವಧಿ ಮುಕ್ತಾಯಕ್ಕೂ ಮುನ್ನವೇ ಬೇರೊಂದು ತಂಡಕ್ಕೆ ವರ್ಗಾವಣೆ ಬಯಸಿದ್ದರಿಂದ ಡೀಲ್ ಮೊತ್ತ ಹೆಚ್ಚಾಗಿದೆ. ಟಾಪ್ 5 ಫುಟ್ಬಾಲ್ ಟ್ರಾನ್ಸ್ ಫರ್ ಡೀಲ್ ಗಳು ಮುಂದಿವೆ...

#1 ನೇಮಾರ್ ː

#1 ನೇಮಾರ್ ː

ನೇಮಾರ್: 222 ಮಿಲಿಯನ್ ಯುರೋಸ್ (2017).ಬ್ರೆಜಿಲಿನ ಸ್ಟಾರ್ ಆಟಗಾರ ನೇಮಾರ್ ಜ್ಯೂನಿಯರ್ ಅವರು ಸ್ಪೇನಿನ ಬಾರ್ಸಿಲೋನಾ ತಂಡವನ್ನು ತೊರೆದು ಪ್ಯಾರೀಸ್ ಸೇಂಟ್ ಜರ್ಮೈನ್ (ಪಿಎಸ್ ಜಿ) ಸೇರುತ್ತಿದ್ದಾರೆ.

#2 ಪಾಲ್ ಪೋಗ್ಬಾ (2016)

#2 ಪಾಲ್ ಪೋಗ್ಬಾ (2016)

ಪಾಲ್ ಪೋಗ್ಬಾ: 105 ಮಿಲಿಯನ್ ಯುರೋಸ್.

ಯುವೆಂಟೆಸ್ ನಿಂದ ಮ್ಯಾಂಚೆಸ್ಟರ್ ಯುನೈಟೆಡ್

#3 ಗರೇತ್ ಬೇಲ್

#3 ಗರೇತ್ ಬೇಲ್

ಗರೇತ್ ಬೇಲ್ : 100 ಮಿಲಿಯನ್ ಯುರೋ.

ಟಾಟ್ ಹಮ್ ಹಾಟ್ಸ್ ಪುರ್ ನಿಂದ ರಿಯಲ್ ಮ್ಯಾಡ್ರಿಡ್ ಗೆ ವರ್ಗಾವಣೆ

4 ರೊನಾಲ್ಡೋ

4 ರೊನಾಲ್ಡೋ

ಪೋರ್ಚುಗಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊ ಅವರು 2009ರಲ್ಲಿ 94 ಮಿಲಿಯನ್ ಯುರೋಗೆ ರಿಯಲ್ ಮ್ಯಾಡ್ರಿಡ್ ಗೆ ವರ್ಗಾವಣೆಯಾಗಿದ್ದರು.

5 ಹಿಗ್ವೇನ್

5 ಹಿಗ್ವೇನ್

2016ರಲ್ಲಿ ನಪೋಲಿಯಿಂದ ಯುವೆಂಟಸ್ ಗೆ 90 ಮಿಲಿಯನ್ ಯುರೋಗೆ ವರ್ಗಾವಣೆಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Brazilian Neymar moved from Barcelona to Paris Saint Germain for a record transfer fee - 222 million Euros. Look at the top 5 transfer deals in the history. The Heavy Purse Deals
Please Wait while comments are loading...