ಮೆಸ್ಸಿ ನಿವೃತ್ತಿಯಿಂದ ವಾಪಸ್, ಉರುಗ್ವೆ ವಿರುದ್ಧ ಅರ್ಜೆಂಟೀನಾಗೆ ಜಯ

Posted By:
Subscribe to Oneindia Kannada

ಮೆಂಡೋಜಾ(ಅರ್ಜೆಂಟೀನಾ), ಸೆ. 02: ಕೋಪಾ ಅಮೆರಿಕಾದಲ್ಲಿನ ವೈಫಲ್ಯದಿಂದ ಬೇಸತ್ತು ಅರ್ಜೆಂಟೀನಾ ತಂಡ ತೊರೆದಿದ್ದ ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದಿದ್ದಾರೆ. ಶುಕ್ರವಾರ ನಡೆದ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಗೆಲುವಿನೊಂದಿಗೆ ತಮ್ಮ ರೀ ಎಂಟ್ರಿಯನ್ನು ಸಂಭ್ರಮಿಸಿದ್ದಾರೆ.

ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ್ದ ಮೆಸ್ಸಿ ಅವರು ಸ್ಪೇನಿನ ಬಾರ್ಸಿಲೋನಾ ಕ್ಲಬ್ ಪರ ಮಾತ್ರ ಆಡುತ್ತಿದ್ದರು. ಅಭಿಮಾನಿಗಳು ಹಾಗೂ ಫುಟ್ಬಾಲ್ ದಿಗ್ಗಜರ ಕೋರಿಕೆ ಮೇರೆಗೆ ಮತ್ತೊಮ್ಮೆ ಅರ್ಜೆಂಟೀನಾ ಜರ್ಸಿ ತೊಟ್ಟು ಕಣಕ್ಕಿಳಿದಿದ್ದಾರೆ.[ಅಭಿಮಾನಿಗಳ ಒತ್ತಾಯಕ್ಕೆ ಮಣಿದು ನಿವೃತ್ತಿ ವಾಪಸ್ :ಮೆಸ್ಸಿ]

Lionel Messi scores on return from retirement as Argentina win

ರಷ್ಯಾದಲ್ಲಿ 2018ರಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಗಾಗಿ ಅರ್ಹತಾ ಸುತ್ತಿನ ಪಂದ್ಯಗಳು ಆರಂಭಗೊಂಡಿದೆ. ಉರುಗ್ವೆ ವಿರುದ್ಧದ ಪಂದ್ಯವನ್ನು ಅರ್ಜೆಂಟೀನಾ 1-0 ಅಂತರದಲ್ಲಿ ಗೆದ್ದುಕೊಂಡಿದೆ. ಬೊನಸ್ ಐರೀಸ್ ನಿಂದ ಸಾವಿರ ಕಿ.ಮೀ ದೂರದಲ್ಲಿರುವ ಮೆಂಡೊಜಾ ಪ್ರಾಂತ್ಯದಲ್ಲಿ ನಡೆದ ಪಂದ್ಯದ 42ನೇ ನಿಮಿಷದಲ್ಲಿ ಮೆಸ್ಸಿ ಹೊಡೆದ ಗೋಲು ತಂಡಕ್ಕೆ ಜಯ ತಂದುಕೊಟ್ಟಿದೆ.[ಕೋಪಾ ಅಮೆರಿಕಾಕ್ಕೆ ಮುತ್ತಿಟ್ಟ ಚಿಲಿ]

ಈ ಗೆಲುವಿನೊಂದಿಗೆ 7 ಪಂದ್ಯಗಳಿಂದ 14 ಅಂಕಗಳನ್ನು ಅರ್ಜೆಂಟೀನಾ ಪಡೆದುಕೊಂಡಿದೆ. ಹೊಸ ಕೋಚ್ ಎಡ್ಗಾರ್ಡೊ ಬುವಾಜಾ ಅವರಿಗೂ ಇದು ಮೊಟ್ಟ ಮೊದಲ ಗೆಲುವಾಗಿದೆ. ಬಾರ್ಸಿಲೋನಾದಲ್ಲಿ ಒಟ್ಟಿಗೆ ಆಡುವ ಅರ್ಜೆಂಟೀನಾದ ಮೆಸ್ಸಿ ಹಾಗೂ ಉರುಗ್ವೆಯ ಸ್ವಾರೇಜ್ ನಡುವಿನ ಪೈಪೋಟಿ ಆಟ ನೋಡಿ ಪ್ರೇಕ್ಷಕರು ಕಣ್ತುಂಬಿಸಿಕೊಂಡಿದ್ದಾರೆ.(ಎಎಫ್ ಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lionel Messi marked his return from short-lived international retirement with the only goal as 10-man Argentina defeated Uruguay 1-0 to score a crucial 2018 World Cup qualifying victory.
Please Wait while comments are loading...