ಮೆಸ್ಸಿ ಮ್ಯಾಜಿಕ್ : ಮ್ಯಾಡ್ರಿಡ್ ವಿರುದ್ಧ ಬಾರ್ಸಿಲೋನಾಕ್ಕೆ ಜಯ

Posted By:
Subscribe to Oneindia Kannada

ಮಿಯಾಯಿ (ಯುಎಸ್), ಜುಲೈ 30: ಅಂತಾರಾಷ್ಟ್ರೀಯ ಚಾಂಪಿಯನ್ಸ್ ಕಪ್ ಎಲ್ ಕ್ಲಾಸಿಕೋ ಫುಟ್ಬಾಲ್ ಫ್ರೆಂಡ್ಲಿ ಪಂದ್ಯ ರೋಚಕ ಅಂತ್ಯ ಕಂಡಿದೆ. ಲಿಯೊನೆಲ್ ಮೆಸ್ಸಿ ಗೋಲಿನ ನೆರವಿನಿಂದ ಬಾರ್ಸಿಲೋನಾ ತಂಡವು 3-2 ಅಂತರದಲ್ಲಿ ರಿಯಲ್ ಮ್ಯಾಡ್ರಿಡ್ ತಂಡವನ್ನು ಸೋಲಿಸಿದೆ.

ಸ್ಟಾರ್ ಸ್ಟ್ರೈಕರ್ ಲಿಯೊನೆಲ್ ಮೆಸ್ಸಿ, ಮಿಡ್ ಫೀಲ್ಡರ್ ಇವಾನ್ ರಾಕಿಟಿಕ್ ಹಾಗೂ ಡಿಫೆಂಡರ್ ಗೆರಾಲ್ಡ್ ಪಿಕೆ ಮೂರು ಗೋಲುಗಳನ್ನು ಬಾರಿಸಿದರು. ಮಿಯಾಯಿ ಗಾರ್ಡನ್ಸ್ ನ ಹಾರ್ಡ್ ರಾಕ್ ಸ್ಟೇಡಿಯಂನ 65 ಸಾವಿರ ಪ್ರೇಕ್ಷಕರನ್ನು ಬಾರ್ಸಿಲೋನಾ ತಂಡ ರಂಜಿಸಿತು.

Lionel Messi scores as Barcelona edge Real Madrid 3-2
Lionel Messi gets 21 month jail sentence

ರಿಯಲ್ ಮ್ಯಾಡ್ರಿಡ್ ಪರ ಕೋವಸಿಕ್ ಹಾಗೂ ಮಾರ್ಕೊ ಅಸೆನ್ಸಿಯೋ ಅವರ ಗೋಲು ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

{video1}

ಈ ಎರಡು ಕ್ಲಾಸಿಕ್ ತಂಡಗಳು, ಆಗಸ್ಟ್ 13ರಂದು ಸ್ಪಾನೀಷ್ ಸೂಪರ್ ಕಪ್ ನಲ್ಲಿ ಮತ್ತೊಮ್ಮೆ ಎದುರಾಗಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Barcelona beat Real Madrid 3-2 in an El Clasico football friendly of the International Champions Cup here.
Please Wait while comments are loading...