ಫಿಫಾ ಫುಟ್ಬಾಲ್ ಶ್ರೇಯಾಂಕ ಪಟ್ಟಿ: ಅರ್ಜೆಂಟೀನಾ ನಂ.1, ಭಾರತ?

Written By: Ramesh
Subscribe to Oneindia Kannada

ಬೆಂಗಳೂರು, ಸೆ. 15 : ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ ಫುಟ್ಬಾಲ್ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದೆ. ಲಿಯೊನೆಲ್ ಮೆಸ್ಸಿ ಒಳಗೊಂಡ ಅರ್ಜೆಂಟೀನಾ ತಂಡ ವಿಶ್ವ ನಂ.1 ಪಟ್ಟ ಅಲಂಕರಿಸಿದೆ.

ಇನ್ನು ಭಾರತ ಶ್ರೇಯಾಂಕ ಪಟ್ಟಿ ನಾಲ್ಕು ಸ್ಥಾನ ಮೇಲೇರಿದ್ದು, 205 ಅಂಕದೊಂದಿಗೆ ಭಾರತ 148ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದೆ. ಫಿಫಾ ಸಂಸ್ಥೆ ಬಿಡುಗಡೆ ಮಾಡಿದ ವಿಶ್ವ ಶ್ರೇಯಾಂಕ ಪಟ್ಟಿಯಲ್ಲಿ ಅರ್ಜೆಂಟೀನಾ ತಂಡ 1646 ಪಾಯಿಂಟ್‌ಗಳ ಮೂಲಕ ಅಗ್ರಸ್ಥಾನ ಪಡೆದುಕೊಂಡಿದೆ. [ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ಗುಡ್ ಬೈ ಹೇಳಿದ ಲಿಯೊನೆಲ್ ಮೆಸ್ಸಿ]

Indian football team (Image courtesy: Indian Football team facebook page)
Photo Credit: Indian football team (Image courtesy: Indian Football team facebook page)

ಬೆಲ್ಜಿಯಂ ತಂಡ 1369 ಅಂಕದೊಂದಿಗೆ ಎರಡನೇ ಸ್ಥಾನವನ್ನು ಕಾಯ್ದುಕೊಂಡರೆ, ಜರ್ಮನ್ ತಂಡ ಕೋಲಂಬಿಯಾ ತಂಡವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಇನ್ನು ಮೂರನೇ ಸ್ಥಾನದಲ್ಲಿದ್ದ ಕೋಲಂಬಿಯಾ ಒಂದು ಸ್ಥಾನದಿಂದ ಕುಸಿತ ಕಂಡು ನಾಲ್ಕನೇ ಸ್ಥಾನಕ್ಕೆ ಜಾರಿದೆ. [ಲಿಯೋನೆಲ್ ಮೆಸ್ಸಿ ಧೂಳಿಪಟ ಮಾಡಿದ ದಾಖಲೆಗಳು]

ಬ್ರೆಜಿಲ್ ಹಾಗೂ ಕೋಲಂಬಿಯಾ ಈ ಎರಡು ತಂಡಗಳು ಸರಿಸಮವಾಗಿ 1323 ಅಂಕಪಡೆದುಕೊಂಡು ಕ್ರಮವಾಗಿ ನಾಲ್ಕನೇ ಸ್ಥಾನದಲ್ಲಿವೆ. ಪ್ರಸ್ತುತ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಮೊದಲ 10 ಪಟ್ಟಿಯಲ್ಲಿ ಚೀಲಿ, ಪೋರ್ಚುಗಲ್, ಫ್ರಾನ್ಸ್, ಉರುಗ್ವೇ ದೇಶಗಳು ಸ್ಥಾನ ಪಡೆದುಕೊಂಡಿವೆ.

ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಫ್ರೆಂಡ್ಲಿ ಪಂದ್ಯದಲ್ಲಿ ಭಾರತ ಫುಟ್ಬಾಲ್ ತಂಡ ಪೋರ್ಟೊ ರಿಕೊ ವಿರುದ್ಧ 4-1 ಅಂತರದಿಂದ ಜಯಗಳಿಸಿತ್ತು. ಇದರಿಂದ ಶ್ರೇಯಾಂಕ ಪಟ್ಟಿಯಲ್ಲಿ 205 ಪಾಯಿಂಟ್ ಪಡೆದು ನಾಲ್ಕು ಸ್ಥಾನ ಮೇಲೇರಿ 148ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಟಾಪ್ 10 ಸ್ಥಾನದಲ್ಲಿರುವ ದೇಶಗಳು :
1. ಅರ್ಜೆಂಟೀನಾ- 1646.
2. ಬೆಲ್ಜಿಯಂ-1369.
3. ಜರ್ಮನ್-1347.
4.ಕೋಲಂಬಿಯಾ-1323.
4. ಬ್ರೆಜಿಲ್-1323.
6.ಚೀಲಿ-1284.
7. ಪೋರ್ಚುಗಲ್-1228.
8. ಫ್ರಾನ್ಸ್-1188.
9. ಉರುಗ್ವೇ-1173.
10. ವೇಲ್ಸ್-1161.
148. 205.
(ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The latest FIFA rankings have been revealed by the apex football body. Lionel Messi's Argentina hold on to their number 1 position in the rankings.
Please Wait while comments are loading...