ಲಾ ಲೀಗಾದಲ್ಲಿ ಮತ್ತೆ ರೊನಾಲ್ಡೊ ಮಿಂಚು, ಮ್ಯಾಡ್ರಿಡ್ ಅಗ್ರಸ್ಥಾನಕ್ಕೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 28: ಸ್ಪೇನಿನ ಲಾ ಲೀಗಾದಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ತನ್ನ ಗೆಲುವಿನ ಅಭಿಯಾನ ಮುಂದುವರೆಸಿದೆ. ನವೆಂಬರ್ 26ರಿಂದ 13ನೇ ವಾರದ ಪಂದ್ಯಗಳು ಆರಂಭಗೊಂಡಿದ್ದು, ವಾರಾಂತ್ಯದಲ್ಲಿ 10ರ ಪೈಕಿ 9 ಪಂದ್ಯಗಳು ಪ್ರೇಕ್ಷಕರನ್ನು ರಂಜಿಸಿದೆ.

ಶನಿವಾರದಂದು ಮೊದಲ ಪಂದ್ಯದಲ್ಲಿ ರಿಯಲ್ ಬೇಟಿಸ್ ಹಾಗೂ ಐಬಾರ್ ನಡುವೆ ಭರ್ಜರಿ ಆರಂಭ ಪಡೆದುಕೊಂಡಿತು. ಐಬಾರ್ ತಂಡ ಗೆಲುವು ಸಾಧಿಸಿತು.

30 ಅಂಕ ಗಳಿಸಿ ಲಾ ಲೀಗ್ ನಲ್ಲಿ ಮುನ್ನಡೆ ಕಾಯ್ದಿಕೊಂಡಿರುವ ರಿಯಲ್ ಮ್ಯಾಡ್ರಿಡ್ ತಂಡ ಸ್ಫೋರ್ಟಿಂಗ್ ಗಿಜೊನ್ ವಿರುದ್ಧ 2-1 ಅಂತರದಿಂದ ಗೆಲುವು ದಾಖಲಿಸಿತು.ಕಳೆದ ವಾರ ಮ್ಯಾಡ್ರಿಡ್ ಡರ್ಬಿ ಗೆದ್ದಿದ್ದಲ್ಲದೆ, ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಲಯಕ್ಕೆ ಮರಳಿರುವುದು ತಂಡಕ್ಕೆ ಬಲ ತಂದಿತ್ತು. ಈ ಪಂದ್ಯದಲ್ಲೂ ರೊನಾಲ್ಡೊ ಮತ್ತೊಮ್ಮೆ ಮಿಂಚಿದರು. 2011ರ ನಂತರ ರಿಯಲ್ ಮ್ಯಾಡ್ರಿಡ್ ಮತ್ತೊಮ್ಮೆ ಲಾ ಲೀಗಾ ಕಪ್ ಎತ್ತಿಹಿಡಿಯುವ ಕನಸು ಕಾಣುತ್ತಿದೆ.

La Liga game week 13: Roundup and results

ಇನ್ನೊಂದೆಡೆ ಈ ವಾರದ ಐದನೇ ಸ್ಥಾನದಲ್ಲಿರುವ ರಿಯಲ್ ಸೋಷಿಡಾಡ್ ವಿರುದ್ಧ ಹಾಲಿ ಚಾಂಪಿಯನ್ ಎಫ್ ಸಿ ಬಾರ್ಸಿಲೋನಾ ಸಮಬಲದ ಹೋರಾಟ ನಡೆಸಿ ಡ್ರಾಗೆ ತೃಪ್ತಿಪಟ್ಟಿತು. ಸ್ಟಾರ್ ಆಟಗಾರರ ಕೊರತೆ ಎದುರಿಸುತ್ತಿರುವ ಬಾರ್ಸಾಗೆ ಅಂಕಪಟ್ಟಿಯಲ್ಲಿ ರಿಯಲ್ ಮ್ಯಾಡ್ರಿಡ್ ಹಿಂದಿಕ್ಕುವ ಅವಕಾಶ ಕಳೆದುಕೊಂಡಿತು. ಭಾನುವಾರದ ಪಂದ್ಯದಲ್ಲಿ ಅಟ್ಲೆಟಿಕೋ ಮ್ಯಾಡ್ರಿಡ್ ತಂಡ ಒಸಾಸುನಾ ವಿರುದ್ಧ 3-0 ಅಂತರದಲ್ಲಿ ಸುಲಭ ಜಯ ದ
ಖಲಿಸಿತು.

ಲಾ ಲೀಗಾ 13ನೇ ವಾರದ ಫಲಿತಾಂಶ
ನವೆಂಬರ್ 26, ಶನಿವಾರ

* ಐಬಾರ್ 3-1 ರಿಯಲ್ ಬೇಟಿಸ್
* ಮಲಗಾ 4-3 ಡೆಪೊಟಿವೊ

* ರಿಯಲ್ ಮ್ಯಾಡ್ರಿಡ್ 2-1 ಸ್ಫೋರ್ಟಿಂಗ್ ಗಿಜೊನ್
* ಎಸ್ಪಾನ್ಯೊಲ್ 3-1 ಲೆಗಾನೆಸ್

ನವೆಂಬರ್ 27, ಭಾನುವಾರ
* ಸೆವಿಲ್ಲಾ 2-1 ವೆಲೆನ್ಸಿಯಾ
* ವಿಲ್ಲಾರ್ ರಿಯಾಲ್ 0-2 ಆಲಾವೇಸ್
* ಓಸಾಸುನಾ 0-3 ಅಟ್ಲೆಟಿಕೋ ಮ್ಯಾಡ್ರಿಡ್
* ಸೆಲ್ಟಾ ವಿಗೊ ಗೀ 3-1 ಗ್ರನಾಡಾ

ನವೆಂಬರ್ 28, ಸೋಮವಾರ
* ರಿಯಲ್ ಸೊಷಿಡಾಡ್ 1-1 ಎಫ್ ಸಿ ಬಾರ್ಸಿಲೋನಾ

ನವೆಂಬರ್ 29, ಮಂಗಳವಾರ
* ಲಾಸ್ ಪಾಲ್ಮಾಸ್ vs ಅಥ್ಲೆಟಿಕ್ ಬಲ್ಬವೋ 1:15 AM (IST)
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
La Liga game week 13 is underway and 9 out of the 10 matches were played during the weekend.
Please Wait while comments are loading...