ಈ ವಾರವೂ ಮ್ಯಾಡ್ರಿಡ್ ಗೆಲುವಿನ ಓಟ ಮುಂದುವರೆಸುವ ನಿರೀಕ್ಷೆ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 23: ಸ್ಪೇನಿನ ಲಾ ಲೀಗಾದಲ್ಲಿ ರಿಯಲ್ ಮ್ಯಾಡ್ರಿಡ್ ತಂಡ ತನ್ನ ಗೆಲುವಿನ ಅಭಿಯಾನ ಮುಂದುವರೆಸುವ ನಿರೀಕ್ಷೆಯಿದೆ. ನವೆಂಬರ್ 26ರಿಂದ 13ನೇ ವಾರದ ಪಂದ್ಯಗಳು ಆರಂಭಗೊಳ್ಳಲಿದೆ.

ಶನಿವಾರದಂದು ಮೊದಲ ಪಂದ್ಯದಲ್ಲಿ ರಿಯಲ್ ಬೇಟಿಸ್ ಹಾಗೂ ಐಬಾರ್ ಕಾದಾಡಲಿವೆ. 13ನೇ ಸ್ಥಾನದಲ್ಲಿರುವ ರಿಯಲ್ ಬೇಟಿಸ್ ಹಾಗೂ 8ನೇ ಸ್ಥಾನದಲ್ಲಿರುವ ಐಬಾರ್ ಗೆ ಗೆಲುವು ಅನಿವಾರ್ಯವಾಗಿದೆ.

30 ಅಂಕ ಗಳಿಸಿ ಲಾ ಲೀಗ್ ನಲ್ಲಿ ಮುನ್ನಡೆ ಕಾಯ್ದಿಕೊಂಡಿರುವ ರಿಯಲ್ ಮ್ಯಾಡ್ರಿಡ್ ತಂಡ ಸ್ಫೋರ್ಟಿಂಗ್ ಗಿಜೊನ್ ವಿರುದ್ಧ ಸೆಣಸಲಿದೆ. ಕಳೆದ ವಾರ ಮ್ಯಾಡ್ರಿಡ್ ಡರ್ಬಿ ಗೆದ್ದಿದ್ದಲ್ಲದೆ, ಸ್ಟಾರ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಲಯಕ್ಕೆ ಮರಳಿರುವುದು ತಂಡಕ್ಕೆ ಬಲ ತಂದಿದೆ.

La Liga 2016/17: Schedule of game week 13

ಇನ್ನೊಂದೆಡೆ ಈ ವಾರದ ಐದನೇ ಸ್ಥಾನದಲ್ಲಿರುವ ರಿಯಲ್ ಸೋಷಿಡಾಡ್ ವಿರುದ್ಧ ಎಫ್ ಸಿ ಬಾರ್ಸಿಲೋನಾ ಸೆಣಸಲಿದೆ. ಸ್ಟಾರ್ ಆಟಗಾರರ ಕೊರತೆ ಎದುರಿಸುತ್ತಿರುವ ಬಾರ್ಸಾಗೆ ಅಂಕಪಟ್ಟಿಯಲ್ಲಿ ರಿಯಲ್ ಮ್ಯಾಡ್ರಿಡ್ ಹಿಂದಿಕ್ಕುವ ಅವಕಾಶವಿದೆ.

ಲಾ ಲೀಗಾ 13ನೇ ವಾರದ ವೇಳಾಪಟ್ಟಿ:
ನವೆಂಬರ್ 26, ಶನಿವಾರ

* ಐಬಾರ್ vs ರಿಯಲ್ ಬೇಟಿಸ್- 1:15 AM (IST)
* ಮಲಗಾ Vs ಡೆಪ್ರೊಟಿವೊ 5:30 PM (IST)

* ರಿಯಲ್ ಮ್ಯಾಡ್ರಿಡ್ vs ಸ್ಫೋರ್ಟಿಂಗ್ ಗಿಜೊನ್ 8:45 PM (IST)
* ಎಸ್ಪಾನ್ಯೊಲ್ vs ಲೆಗಾನೆಸ್ 1:00 PM (IST)
ನವೆಂಬರ್ 27, ಭಾನುವಾರ
* ಸೆವಿಲ್ಲಾ vs ವೆಲೆನ್ಸಿಯಾ -1:15 AM (IST)
* ವಿಲ್ಲಾರ್ ರಿಯಾಲ್ vs ಆಲಾವೇಸ್ 4:30 PM (IST)
* ಓಸಾಸುನಾ vs ಅಟ್ಲೆಟಿಕೋ ಮ್ಯಾಡ್ರಿಡ್ 8:45 PM (IST)
* ಸೆಲ್ಟಾ ವಿಗೀ vs ಗ್ರನಾಡಾ 11:00 PM (IST)

ನವೆಂಬರ್ 28, ಸೋಮವಾರ
* ರಿಯಲ್ ಸೊಷಿಡಾಡ್ vs ಎಫ್ ಸಿ ಬಾರ್ಸಿಲೋನಾ - 1:15 AM (IST)

ನವೆಂಬರ್ 29, ಮಂಗಳವಾರ
* ಲಾಸ್ ಪಾಲ್ಮಾಸ್ vs ಅಥ್ಲೆಟಿಕ್ ಬಲ್ಬವೋ 1:15 AM (IST)

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
La Liga game week 13 starts on Saturday, November 26 with Real Betis travel away to take on Eibar.
Please Wait while comments are loading...