ಇಂಡಿಯನ್ ಸೂಪರ್ ಲೀಗ್ 2016 ಆರಂಭಕ್ಕೆ ಮೈದಾನ ಸಜ್ಜು!

Posted By:
Subscribe to Oneindia Kannada

ಗುವಹಾಟಿ, ಸೆ. 30: ದೇಶದ ಅತ್ಯಂತ ದೊಡ್ಡ ಫುಟ್ಬಾಲ್ ಹಬ್ಬ ಶನಿವಾರ (ಅಕ್ಟೋಬರ್ 01) ಆರಂಭವಾಗಲಿದೆ. ಹೀರೋ ಇಂಡಿಯನ್ ಸೂಪರ್ ಲೀಗ್ 2016 (ಐಎಸ್ಎಲ್) ಆರಂಭಕ್ಕೆ ಮೈದಾನ ಸಜ್ಜಾಗಿದೆ.

ಈಶಾನ್ಯ ಭಾರತದಲ್ಲಿರುವ ಫುಟಾಲ್ ಕ್ರೇಜ್ ಗೆ ಮಣೆ ಹಾಕಿರುವ ಫುಟ್ಬಾಲ್ ಲೀಗ್ ಆಯೋಜಕರು ಗುವಹಾಟಿಯ ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂನಲ್ಲಿ ಸೂಪರ್ ಲೀಗ್ ನ ಮೂರನೇ ಆವೃತ್ತಿಗೆ ಈಶಾನ್ಯ ಭಾರತದ ಮೈದಾನವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ISL 2016 to kick-off on October 1 with a grand opening ceremony in Guwahati

ಇಂದಿರಾಗಾಂಧಿ ಅಥ್ಲೆಟಿಕ್ ಸ್ಟೇಡಿಯಂನ ಗೇಟುಗಳು ಮಧ್ಯಾಹ್ನ 3 ಗಂಟೆಗೆ ತೆರೆಯಲಿದ್ದು, 5.30ಕ್ಕೆ ಉದ್ಘಾಟನಾ ಸಮಾರಂಭ ಆರಂಭಗೊಳ್ಳಲಿದೆ. ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ತಾರೆಗಳಾದ ಜಾಕ್ವಲಿನ್ ಫರ್ನಾಂಡೀಸ್ ಹಾಗೂ ವರುಣ್ ಧವನ್ ಬರಲಿದ್ದಾರೆ. ಜತೆಗೆ 500ಕ್ಕೂ ಅಧಿಕ ಕಲಾವಿದರು ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ. ಫುಟ್ಬಾಲ್ ಸ್ಫೋರ್ಟ್ಸ್ ಡೆವಲ್ಪೆಂಟ್ ಲಿಮಿಟೆಡ್ ನ ಸ್ಥಾಪಕ ಹಾಗೂ ಮುಖ್ಯಸ್ಥೆ ನೀತಾ ಅಂಬಾನಿ ಅವರು ಉಪಸ್ಥಿತರಿರಲಿದ್ದಾರೆ.

ಎಲ್ಲಿ ಪ್ರಸಾರ?: ಸ್ಟಾರ್ ಸ್ಫೋರ್ಟ್ 1,೨, ಎಚ್ ಡಿ 1, ಎಚ್ ಡಿ 2, ಸ್ಟಾರ್ ಗೋಲ್ಡ್, ಗೋಲ್ಡ್ ಎಚ್ ಡಿ , ಜಲ್ಸಾ ಮೂವೀಸ್, ಸ್ಟಾರ್ ಜಲ್ಸಾ ಮೂವೀಸ್ ಎಚ್ ಡಿ, ಏಷ್ಯಾ ನೆಟ್, ವಿಜಯ್ ಸೂಪರ್, ಹಾಟ್ ಸ್ಟಾರ್ ಗಳಲ್ಲಿ 6.15ರಿಂದ ಪಂದ್ಯಗಳನ್ನು ವೀಕ್ಷಿಸಬಹುದು.

ಮೊದಲ ಪಂದ್ಯ: ಹೀರೋ ಐಎಸ್ಎಲ್ ನ ಮೊದಲ ಪಂದ್ಯ ನಾರ್ಥ್ ಈಸ್ಟ್ ಯುನೈಟೆಡ್ ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ಎಫ್ ಸಿ ನಡುವೆ 7.00 PMಗೆ ಪಂದ್ಯ ಆರಂಭ.(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The country's biggest football extravaganza is set to take place in Guwahati with the Hero Indian Super League 2016 poised to commence on 1st October 2016
Please Wait while comments are loading...