ಬೆಂಗಳೂರಿನ 'ಪಂಡಿತ'ನಿಂದ ಫುಟ್ಬಾಲ್ ನಲ್ಲಿ ಹೊಸ ಇತಿಹಾಸ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 5: ಬೆಂಗಳೂರಿನ ಯುವಕ ಇಷಾನ್ ಪಂಡಿತ ಭಾರತೀಯ ಫುಟ್ಬಾಲ್ ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಸ್ಪೇನಿನ ಲಾ ಲೀಗಾ ಸೇರಿದ ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಾ ಲೀಗಾನ ಫುಟ್ಬಾಲ್ ಕ್ಲಬ್ ಜೊತೆ ವೃತ್ತಿಪರ ಗುತ್ತಿಗೆಗೆ ಸಹಿ ಹಾಕಿದ್ದಾರೆ.

ಮೂರು ವರ್ಷದ ಹಿಂದೆ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿ ಯುರೋಪಿನತ್ತ ಮುಖ ಮಾಡಿದ್ದ ಇಷಾನ್ ಪಂಡಿತನ ಶ್ರಮಕ್ಕೆ ಕೊನೆಗೆ ಬೆಲೆ ಸಿಕ್ಕಿದೆ.

ಬೆಂಗಳೂರು ಮೂಲದ 18 ವರ್ಷ ವಯಸ್ಸಿನ ಯುವಕ ಇಷಾನ್ ಅವರು ಒಂದು ವರ್ಷದ ಒಪ್ಪಂದಕ್ಕೆ ಸಿಡಿ ಲಾಗೆನಸ್ ತಂಡದೊಡನೆ ಸಹಿ ಮಾಡಿದ್ದಾನೆ. ಪಂಡಿತಗೆ 50ನೇ ನಂಬರಿನ ನೀಲಿ ಹಾಗೂ ಬಿಳಿ ಪಟ್ಟಿಯ ಜರ್ಸಿ ನೀಡಲಾಗಿದೆ.

Ishan Pandita becomes first Indian footballer to sign for a La Liga club

ಕ್ಲಬಿನ ಉಪಾಧ್ಯಕ್ಷ ಹಾಗೂ ಮಾಲಕ ಫಿಲಿಫ್ ಮೊರೇನೊ, ಈಸ್ಟಾಡಿಯೊ ಮುನ್ಸಿಪಲ್ ಡೆ ಬುಟ್ರಕ್ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಜರ್ಸಿ ಪ್ರದಾನ ಮಾಡಿ, ತಂಡಕ್ಕೆ ಸ್ವಾಗತಿಸಿದರು. ಪಂಡಿತ ಈಗ ಮುಖ್ಯ ಕ್ಲಬ್‌ಗೆ ಸಹಿ ಮಾಡಿದ್ದರೂ, ಅಂಡರ್ 19 ತಂಡಕ್ಕಾಗಿ ಆಡಲಿದ್ದಾರೆ.

ನಾನು ಓದಿಗೆ ಗುಡ್‌ಬೈ ಹೇಳಿದ ದಿನದಿಂದ ಈ ಕ್ಷಣದವರೆಗೂ ನನ್ನ ಕನಸನ್ನು ಬಿಟ್ಟಿರಲಿಲ್ಲ.ಮೂರು ವರ್ಷಗಳ ಕಠಿಣ ತರಬೇತಿ ಪಡೆದದ್ದು ಕೊನೆಗೂ ಫಲ ನೀಡಿದೆ ಎಂದು ಮ್ಯಾಡ್ರಿಡ್‌ನಿಂದ ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಇಶಾನ್ ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಕೊನೆಗೆ ಇಶಾನ್, ಎರಡನೇ ಡಿವಿಷನ್ ಕ್ಲಬ್‌ಗೆ ಸೇರಿದ್ದರು. ಆದರೆ ಆಗ 18 ವರ್ಷ ಆಗದ ಕಾರಣ ವೃತ್ತಿಪರ ಫುಟ್ಬಾಲ್‌ಗೆ ಸಹಿ ಮಾಡುವಂತಿರಲಿಲ್ಲ. ಗೆಟಾಫೆ ಸಿಎಫ್ ತಂಡಕ್ಕೆ ಸೇರಿದ್ದರೂ ಮುಖ್ಯ ಲೀಗ್ ಗೆ ಆಡಲು ಸಾಧ್ಯವಾಗಿರಲಿಲ್ಲ. ಈಗ ವೃತ್ತಿಪರ ತಂಡದ ಜತೆ ಗುರುತಿಸಿಕೊಂಡ ಭಾರತೀಯ ಹಾಗೂ ಬೆಂಗಳೂರಿನ ಪ್ರಪ್ರಥಮ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. (ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is a historical day for Indian football as Ishan Pandita becomes first Indian footballer to sign a professional contract with Spanish club and La Liga side Club Deportivo Leganes.
Please Wait while comments are loading...