ಫ್ರೆಂಡ್ಲಿ ಮ್ಯಾಚಲ್ಲಿ ಭಾರತದ 'ಬ್ಲೂ ಟೈಗರ್ಸ್' ಗೆ ಭರ್ಜರಿ ಜಯ

Posted By:
Subscribe to Oneindia Kannada

ಮುಂಬೈ, ಸೆ. 04: ಸ್ಟಾರ್ ಆಟಗಾರ ಸುನಿಲ್ ಛೇಟ್ರಿ ಅವರ ನೇತೃತ್ವದ ದಾಳಿಯಿಂದ ಉತ್ತಮ ಶ್ರೇಯಾಂಕವುಳ್ಳ ಪೋರ್ಟೋರಿಕೋ ತಂಡವನ್ನು ಭಾರತದ ಬ್ಲೂ ಟೈಗರ್ಸ್ ತಂಡ ಭರ್ಜರಿಯಾಗಿ ಸೋಲಿಸಿದೆ. ಅಂಧೇರಿಯ ಕ್ರೀಡಾ ಕಾಂಪ್ಲೆಕ್ಸ್ ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ 4-1 ಅಂತರದ ಜಯ ದಾಖಲಿಸಿದೆ.

2015ರ ಮಾಚ್‍೯ ನಲ್ಲಿ ತುಕ೯ಮೆನಿಸ್ತಾನ ವಿರುದ್ಧ 1-2 ಅಂತರದಿಂದ ಸೋತು ಕಳೆಗುಂದಿದ್ದ 'ಬ್ಲೂಟೈಗರ್ಸ್' ಈಗ ಸತತ ನಾಲ್ಕು ಗೆಲುವು ದಾಖಲಿಸಿದ್ದಾರೆ.ಲಾವೋಸ್ ತ೦ಡವನ್ನು 2 ಬಾರಿ ಹಾಗೂ ಭೂತಾನ್ ತ೦ಡವನ್ನು ಒಮ್ಮೆ ಸೋಲಿಸಿದೆ. ಸ್ಯಾಫ್ ಕಪ್ ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಸೋಲು ಕಂಡಿತ್ತು.

Sunil Chhetri shines as India thrash higher-ranked Puerto Rico 4-1 in Mumbai

ಅಂತಾರಾಷ್ಟ್ರೀಯ ಫ್ರೆಂಡ್ಲಿ ಮ್ಯಾಚ್ ಆಗಿದ್ದರೂ ಹೆಚ್ಚಿನ ಫೀಫಾ ಶ್ರೇಯಾಂಕವುಳ್ಳ ತಂಡವನ್ನು ಸೋಲಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಭಾರತ(152) ತನಗಿಂತ 38 ಸ್ಥಾನ ಮೇಲಿರುವ ಪೋಟೋ೯ ರಿಕೋ ವಿರುದ್ಧ ಭಜ೯ರಿ ಜಯ ದಾಖಲಿಸಿದೆ.

ಪ೦ದ್ಯ ಆರ೦ಭವಾದ 7ನೇ ನಿಮಿಷದಲ್ಲೇ ಎಮಾನ್ಯುಯೆಲ್ ಸ್ಯಾ೦ಚೇಜ್ ಸ್ಪಾಟ್ ಕಿಕ್ ಮೂಲಕೆ ಗೋಲು ಗಳಿಸಿ ಪೋರ್ಟೋ ರಿಕೋಗೆ ಮುನ್ನಡೆ ತಂದುಕೊಟ್ಟರು ನಂತರ ಭಾರತ ಮೇಲುಗೈ ಸಾಧಿಸಿತು. ಮಧ್ಯಂತರ ವಿರಾಮದ ವೇಳೆಗೆ ಭಾರತ 3-1 ಮುನ್ನಡೆ ಪಡೆಯಿತು. ನಾರಾಯಣ್ ದಾಸ್ (18ನೇ ನಿಮಿಷ), ಸುನೀಲ್ ಛೇಟ್ರಿ (26ನೇ ನಿಮಿಷ), ಜೆಜೆ ಲಾಲ್ಪೆಕುಲಾ (34ನೇ ನಿಮಿಷ) ಗೋಲು ಬಾರಿಸಿದ್ದರು. ನಂತರ ಜಾಕಿಚ೦ದ್ ಸಿ೦ಗ್ 58ನೇ ನಿಮಿಷದಲ್ಲಿ ಗೋಲು ದಾಖಲಿಸಿ ಜಯದ ಅಂತರ ಹೆಚ್ಚು ಮಾಡಿದರು.(ಪಿಟಿಐ_

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Masterminded superbly by ace striker Sunil Chhetri, a dominant India scripted a sensational 4-1 win over higher-ranked Puerto Rico in an international football friendly at the Andheri Sports Complex stadium here tonight (September 3).
Please Wait while comments are loading...