ಐ ಲೀಗ್ ಮೊದಲ ವಾರ: ಬೆಂಗಳೂರು ಎದುರಾಳಿ ಯಾರು?

Posted By:
Subscribe to Oneindia Kannada

ಬೆಂಗಳೂರು, ಜನವರಿ 05: ಐ ಲೀಗ್ 2016/17 ಸೀಸನ್ ಶನಿವಾರ(ಜನವರಿ 7)ದಿಂದ ಆರಂಭಗೊಳ್ಳಲಿದೆ. ಮೊದಲ ವಾರದ ಪಂದ್ಯಗಳಲ್ಲಿ ಕೋಲ್ಕತಾದ ಈಸ್ಟ್ ಬೆಂಗಾಲ್, ಮೊಹನ್ ಬಗಾನ್ ಹಾಗೂ ಹಾಲಿ ಚಾಂಪಿಯನ್ ಬೆಂಗಳೂರು ಎಫ್ ಸಿ ಪಂದ್ಯಗಳನ್ನು ಕಾಣಬಹುದು.

ಐ ಲೀಗ್ ನ ಉದ್ಘಾಟನಾ ಪಂದ್ಯ ಪಶ್ಚಿಮ ಬಂಗಾಲದ ಬರಾಸಾತ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಐಜ್ವಾಲ್ ಎಫ್ ಸಿ ವಿರುದ್ಧ ಈಸ್ಟ್ ಬೆಂಗಾಲ್ ಸೆಣಸಾಡಲಿದೆ. ಬೆಂಗಳೂರು ಎಫ್ ಸಿ ತಂಡ ಈಶಾನ್ಯ ಭಾರತದ ಕ್ಲಬ್ ಶಿಲ್ಲಾಂಗ್ ಲಜಾಂಗ್ ವಿರುದ್ಧ ಮೊದಲ ಪಂದ್ಯವಾಡಲಿದೆ.

2014-15ರ ಚಾಂಪಿಯನ್ ಮೋಹನ್ ಬಗಾನ್ ತಂಡ ಜನವರಿ 8ರಂದು ಗೋವಾದ ಚರ್ಚಿಲ್ ಬ್ರದರ್ಸ್ ತಂಡವನ್ನು ಎದುರಿಸಲಿದೆ. [ಐ ಲೀಗ್ ಫುಲ್ ವೇಳಾಪಟ್ಟಿ]

I-League 2016/17: Schedule of game week 1 and channel information

ಈ ಬಾರಿ ಐ ಲೀಗ್ ಗೆ ಎರಡು ಹೊಸ ತಂಡಗಳು ಸೇರ್ಪಡೆಗೊಂಡಿವೆ. ಚೆನ್ನೈ ಸಿಟಿ ಎಫ್ ಸಿ ಹಾಗೂ ಮಿನರ್ವಾ ಪಂಜಾಬ್ ಎಫ್ ಸಿ. ಈ ಎರಡು ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ.ಮಹಾ ಡರ್ಬಿಯಲ್ಲಿ ಮಹಾರಾಷ್ಟ್ರದ ಕ್ಲಬ್ ಗಳಾದ ಮುಂಬೈ ಎಫ್ ಸಿ ಹಾಗೂ ಡಿಎಸ್ ಕಿ ಶಿವಾಜಿಯಾನ್ ತಂಡ ಸೆಣಸಲಿವೆ.

ಎರಡು ಸೀಸನ್ ಗಳ ನಿಷೇಧದ ನಂತರ ಗೋವಾದ ಚರ್ಚಿಲ್ ಬ್ರದರ್ಸ್ ತಂಡ ಮತ್ತೊಮ್ಮೆ ಲೀಗ್ ನಲ್ಲಿ ಆಡಲು ಅರ್ಹತೆ ಪಡೆದುಕೊಂಡಿದೆ. ಕ್ಲಬ್ ಡಿ ಗೋವಾ ಹಾಗೂ ಡೆಂಪೋ ಎಸ್ ಸಿ ಈ ವರ್ಷ ಲೀಗ್ ನಲ್ಲಿ ಆಡುತ್ತಿಲ್ಲ.

ಐ ಲೀಗ್ ಮೊದಲ ವಾರದ ವೇಳಾಪಟ್ಟಿ
ಜನವರಿ 07, ಶನಿವಾರ
* ಈಸ್ಟ್ ಬೆಂಗಾಲ್ Vs ಐಜ್ವಾಲ್ ಎಫ್ ಸಿ -4.30 PM IST (ಲೈವ್ Ten 2/HD)
* ಬೆಂಗಳೂರು ಎಫ್ ಸಿ Vs ಶಿಲ್ಲಾಂಗ್ ಲಾಜಾಂಗ್ - 7 PM (ಲೈವ್ Ten 2/HD)

ಜನವರಿ 08, ಭಾನುವಾರ
* ಚೆನ್ನೈ ಸಿಟಿ ಎಫ್ ಸಿ Vs ಮಿನರ್ವಾ ಪಂಜಾಬ್ - 4.30 PM (ಲೈವ್ Ten 2/HD)
* ಮೊಹನ್ ಬಗಾನ್ Vs ಚರ್ಚಿಲ್ -7 PM (ಲೈವ್ Ten 2/HD)
* ಮುಂಬೈ ಎಫ್ ಸಿ Vs ಡಿಎಸ್ ಕೆ ಶಿವಾಜಿಯಾನ್ - 7 PM (ನೇರ ಪ್ರಸಾರವಿಲ್ಲ)
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
I-League 2016/17 season is all set to kick-start their campaign on Saturday, January 7 with Kolkata giants East Bengal and defending champions Bengaluru FC in action.
Please Wait while comments are loading...