ಜರ್ಮನಿಯ ವಿಶ್ವಕಪ್ ಹೀರೋ ಮಿರೋಸ್ಲವ್ ನಿವೃತ್ತಿ!

Posted By:
Subscribe to Oneindia Kannada

ಬರ್ಲಿನ್, ನವೆಂಬರ್ 02: ಫುಟ್ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ , ಜರ್ಮನಿಯ ವಿಶ್ವಕಪ್ ಹೀರೋ ಮಿರೊಸ್ಲಾವ್ ಕ್ಲೋಸ್ ಅವರು ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಆದರೆ, ಕೋಚ್ ಆಗಿ ಹೊಸ ರೂಪದಲ್ಲಿ ಕಾಣಿಸಿಕೊಳ್ಳುವುದಾಗಿ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಒಟ್ಟು 16 ಗೋಲುಗಳನ್ನು ಬಾರಿಸಿ ಟಾಪ್ ಸ್ಕೋರರ್ ಎನಿಸಿಕೊಂಡಿರುವ ಕ್ಲೋಸ್ ಅವರು ಜರ್ಮನಿಯ ಪರ 137 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿ ಒಟ್ಟು 71 ಗೋಲುಗಳನ್ನು ಬಾರಿಸಿದ್ದಾರೆ. ಇದು ಜರ್ಮನಿ ದೇಶದ ಪರ ಗರಿಷ್ಠ ಸ್ಕೋರ್ ದಾಖಲೆಯಾಗಿದೆ.[ಕ್ಲೋಸ್ ಹೊಡೆದ್ರೆ ಗೋಲು, ಜರ್ಮನಿಗಿಲ್ಲ ಸೋಲು]

German international Miroslav Klose retires from football

38ರ ಹರೆಯದ ಕ್ಲೋಸ್(Klose) ಅವರು 2014ರಲ್ಲಿ ಜರ್ಮನಿ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಘೋಷಿಸಿದ್ದರು. ಆದರೆ, ಕ್ಲಬ್‌ಗಳಲ್ಲಿ ಆಡುತ್ತಿದ್ದರು. ಲಾಝಿಯೊ ಕ್ಲಬ್‌ನೊಂದಿಗೆ ಕ್ಲೋಸ್ ಒಪ್ಪಂದ ಕೊನೆಗೊಂಡ ಬಳಿಕ ಫುಟ್ಬಾಲ್ ಆಟಗಾರನಾಗಿ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ.[ಗೋಲು ಬಾರಿಸಿ, ಪಲ್ಟಿ ಹೊಡಿ, ಕ್ಲೋಸ್ ಕಮಾಲ್]

ಕ್ಲೋಸ್ ಎರಡು ವರ್ಷಗಳ ಹಿಂದೆ ಬ್ರೆಝಿಲ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ನಲ್ಲಿ ಆತಿಥೇಯ ಬ್ರೆಝಿಲ್ ವಿರುದ್ಧದ ಸೆಮಿಫೈನಲ್‌ನಲ್ಲಿ 7-1 ಅಂತರದಿಂದ ಗೆದ್ದ ಪಂದ್ಯದಲ್ಲಿ 16ನೆ ಬಾರಿ ವಿಶ್ವಕಪ್ ಗೋಲು ಬಾರಿಸಿ ಹೊಸ ದಾಖಲೆ ಬರೆದಿದ್ದರು.

2000ರಲ್ಲಿ ಜರ್ಮನಿಯ ಬಂಡೆಸ್ಲಿಗ ಫುಟ್ಬಾಲ್ ಕ್ಲಬ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದ ಕ್ಲೋಸ್ ಈ ಅಗ್ರ ಕ್ಲಬ್‌ನಲ್ಲಿ 307 ಪಂದ್ಯಗಳನ್ನು ಆಡಿದ್ದು 121 ಗೋಲು ಬಾರಿಸಿದ್ದರು. 2014ರ ವಿಶ್ವಕಪ್ ಫೈನಲ್‌ನಲ್ಲಿ ಜರ್ಮನಿಯ ಪರ ಕ್ಲೋಸ್ ಕೊನೆಯ ಪಂದ್ಯ ಆಡಿದ್ದರು. ರಿಯೋ ಡಿ ಜನೈರೊದ ಪ್ರತಿಷ್ಠಿತ ಮರಕಾನ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದ ಹೆಚ್ಚುವರಿ ಸಮಯದಲ್ಲಿ ಅರ್ಜೆಂಟೀನವನ್ನು ಮಣಿಸಿದ್ದ ಜರ್ಮನಿ ವಿಶ್ವ ಚಾಂಪಿಯನ್ ಆಗಿತ್ತು.[ಜರ್ಮನಿಗೆ ಫೀಫಾ ವಿಶ್ವಕಪ್, ಮೆಸ್ಸಿಗೆ ಗೋಲ್ಡನ್ ಬಾಲ್]

ಜರ್ಮನಿಯ ಮುಖ್ಯ ಕೋಚ್ ಜೋಕಿಮ್ ಲಾ ರಿಂದ ಕೋಚಿಂಗ್ ಆಹ್ವಾನ ಸ್ವೀಕರಿಸಿರುವ ಕ್ಲೋಸ್ ಜರ್ಮನಿಯ ಕೋಚಿಂಗ್ ವಿಭಾಗಕ್ಕೆ ಸೇರ್ಪಡೆಯಾಗಲಿದ್ದಾರೆ. ಕೋಚಿಂಗ್ ವೃತ್ತಿಜೀವನ ಆರಂಭಿಸುವ ಮೊದಲು ಕ್ಲೋಸ್ ವೈಯಕ್ತಿಕ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Germany veteran Miroslav Klose has retired from professional football to start a coaching career.After 213 goals in overall 529 competitive matches, Klose hung up his boots to start a coaching career with the German national team.
Please Wait while comments are loading...