ಇಂಗ್ಲೆಂಡ್ ಫುಟ್ಬಾಲ್ ದಿಗ್ಗಜ ಲ್ಯಾಂಪರ್ಡ್ ನಿವೃತ್ತಿ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 02: ಇಂಗ್ಲೆಂಡ್ ಹಾಗೂ ಚೆಲ್ಸಿಯಾ ಕ್ಲಬ್ ದಿಗ್ಗಜ ಫ್ರ್ಯಾಂಕ್ ಲ್ಯಾಂಪರ್ಡ್ ಅವರು 21 ವರ್ಷ ಗಳ ತಮ್ಮ ಫುಟ್ಬಾಲ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. ವೃತ್ತಿಪರ ಫುಟ್ಬಾಲ್ ತೊರೆಯುತ್ತಿರುವುದಾಗಿ ಲ್ಯಾಂಪರ್ಡ್ ಹೇಳಿದ್ದಾರೆ.

ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ವೆಸ್ಟ್ ಹ್ಯಾಂ ಯುನೈಟೆಡ್ ಮೂಲಕ ಫುಟ್ಬಾಲ್ ವೃತ್ತಿ ಬದುಕು ಆರಂಭಿಸಿದ ಲ್ಯಾಂಪರ್ಡ್ 1995 ರಿಂದ 2001 ರ ತನಕ ಆಡಿದರು. ನಂತರ ಚೆಲ್ಸಿಯಾ ತಂಡ ಸೇರಿ ಹೀರೋ ಆಗಿ ಮೆರೆದರು.[ಲ್ಯಾಂಪರ್ಡ್ ಗೋಲು: ಫೀಫಾ ಕ್ಷಮೆಯಾಚನೆ]

Frank Lampard announces retirement from football

ಮೂರು ಫೀಫಾ ಪ್ರೀಮಿಯರ್ ಲೀಗ್ಸ್ ಹಾಗೂ 4 ಎಫ್ ಎ ಕಪ್, 1 ಯುಇಎಫ್ಎ ಚಾಂಪಿಯನ್ಸ್ ಲೀಗ್, 1 ಯುರೋಪಾ ಲೀಗ್ ಹಾಗೂ 2 ಇಂಗ್ಲೀಷ್ ಫುಟ್ಬಾಲ್ ಕಪ್ ಎತ್ತಿದ್ದಾರೆ.

2014ರಲ್ಲಿ 13 ವರ್ಷಗಳ ಬಳಿಕ ಚೆಲ್ಸಿಯಾ ನಂಟು ಕಳಚಿಕೊಂಡು ಎಂಎಲ್ಎಸ್ ನ ನ್ಯೂಯಾರ್ಕ್ ಸಿಟಿ ಎಫ್ ಸಿ ಸೇರಿದರು. ಇಂಗ್ಲೆಂಡ್ ಪರ 106 ಪಂದ್ಯಗಳನ್ನಾಡಿ 26 ಬಾರಿ ಸ್ಕೋರ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ನಿವೃತ್ತಿ ಬಗ್ಗೆ ವಿಡಿಯೋ ಮಾಡಿ ಹಾಕಿದ್ದಾರೆ. ( ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chelsea legend and former England international footballer Frank Lampard has officially announced his retirement from professional football.
Please Wait while comments are loading...