ವಿಶ್ವಕಪ್: ಘಾನಾ ವಿರುದ್ಧ ಭಾರತದ ಯುವ ತಂಡಕ್ಕೆ ಸೋಲು

Posted By:
Subscribe to Oneindia Kannada

ನವದೆಹಲಿ, ಅಕ್ಟೋಬರ್ 13 : ಫಿಫಾ ಅಂಡರ್ 17 ವಿಶ್ವಕಪ್ ಪಂದ್ಯಾವಳಿಯಲ್ಲಿ ಚೊಚ್ಚಲ ಬಾರಿಗೆ ಆಡುತ್ತಿರುವ ಭಾರತದ ಫುಟ್ಬಾಲ್ ತಂಡ ತನ್ನ ಲೀಗ್ ಹಂತದ ಪಂದ್ಯಗಳಲ್ಲಿ ಯಾವುದೇ ಗೆಲುವು ಸಾಧಿಸಿದೆ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ. ಭಾರತ ವಿರುದ್ಧ 0-4ರಲ್ಲಿ ಗೆಲುವು ಸಾಧಿಸಿದ ಘಾನಾ ಮುಂದಿನ ಹಂತಕ್ಕೇರಿದೆ.

ಮೊದಲ ಬಾರಿಗೆ ಭಾರತದಲ್ಲಿ ನಡೆಯುವ ಅಂಡರ್-17 ಫೀಫಾ ವಿಶ್ವಕಪ್ ವೇಳಾಪಟ್ಟಿ

ಕೊಲಂಬಿಯಾ ವಿರುದ್ಧ 2-1 ಅಂತರದಲ್ಲಿ ಸೋಲು ಕಂಡಿದ್ದ ಬ್ಲೂ ಬಾಯ್ಸ್ ಗಳು ಘಾನಾ ವಿರುದ್ಧ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು.

FIFA U-17 World Cup: Ghana crush India 4-0 to top group; hosts' campaign ends in agony

ಭಾರತದ ಯುವ ಆಟಗಾರರ ತಂಡ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ 0-3 ಗೋಲುಗಳಿಂದ ಸೋಲು ಕಂಡಿತ್ತು. ಕೊಲಂಬಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಘಾನಾ ಗೆಲುವು ಸಾಧಿಸಿದ್ದಲ್ಲದೆ, ಭಾರತ ವಿರುದ್ಧ ಜಯ ದಾಖಲಿಸಿ 16ರ ಘಟ್ಟ ತಲುಪಿದೆ.

ನವದೆಹಲಿಯ ನೆಹರೂ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಘಾನಾ ಎದುರು ಉತ್ತಮವಾಗಿ ಆರಂಭ ಮಾಡಿದ ಭಾರತ ಎದುರಾಳಿ ತಂಡ ಗೋಲು ಗಳಿಸಿದಂತೆ 42 ನಿಮಿಷಗಳ ಕಾಲ ತಡೆ ಹಿಡಿದಿತ್ತು. ಮಧ್ಯಂತರದಲ್ಲಿ 1-0 ಮುನ್ನಡೆ ಪಡೆದ ಘಾನಾ ಮತ್ತೆ ಹಿಂತಿರುಗಿ ನೋಡಲಿಲ್ಲ.

ಒಟ್ಟಾರೆ, ಈ ವಿಶ್ವಕಪ್ ನಲ್ಲಿ ಆಡುವ ಅರ್ಹತೆ, ಜಾಕ್ಸನ್ ಸಿಂಗ್ ಅವರು ಕಳೆದ ಪಂದ್ಯದಲ್ಲಿ ಗಳಿಸಿದ ಏಕೈಕ ಗೋಲು ಅಭಿಮಾನಿಗಳ ಮನಸ್ಸಿನಲ್ಲಿ ಉಳಿಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A formidable Ghana side defeated India 4-0 in their final Group A stage match to enter in the final 16 of the ongoing FIFA U-17 World Cup here on Thursday (October 12). With this drubbing, India's journey in their first ever world cup appearance came to a sad end as they remained winless.
Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ