ಭಾರತದಲ್ಲಿ ಫೀಫಾ ಅಂಡರ್ 17 ವಿಶ್ವಕಪ್ ಆಯೋಜನೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 25: 2017ರಲ್ಲಿ ಆಂಡರ್ 17 ವಿಶ್ವಕಪ್ ಫುಟ್ಬಾಲ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸಲಾಗಿದೆ ಎಂದು ಫೀಫಾ ಮಂಗಳವಾರ ಪ್ರಕಟಿಸಿದೆ.

ಆಕ್ಟೋಬರ್ 6 ರಿಂದ 28, 2017ರ ತನಕ ಟೂರ್ನಿ ನಡೆಯಲಿದ್ದು, ಆರು ಮೈದಾನಗಳನ್ನು ಫೀಫಾ ಘೋಷಿಸಿದೆ. ಜುಲೈ 07, 2017ಕ್ಕೆ ವೇಳಾಪಟ್ಟಿ ಇನ್ನಿತರ ವಿವರ ಬಹಿರಂಗ ಪಡಿಸಲಿದೆ. ಕೊಚ್ಚಿ, ಮುಂಬೈ, ಗೋವಾ, ದೆಹಲಿ, ಗುವಾಹಟಿ ಹಾಗೂ ಕೋಲ್ಕತ್ತಾದಲ್ಲಿ ಪಂದ್ಯಗಳು ನಡೆಯಲಿವೆ.

FIFA Under-17 World Cup to be hosted in India from October 6 to October 28, 2017

ಸದ್ಯ ಭಾರತ ಪ್ರವಾಸದಲ್ಲಿರುವ 13 ಮಂದಿ ಫೀಫಾ ಅಧಿಕಾರಿಗಳು, ಮೈದಾನಗಳ ಪರಿಶೀಲನೆ ನಡೆಸಿದ್ದಾರೆ. ಪೂರ್ವ ಸಿದ್ಧತೆ ಸರಿಯಾಗಿದ್ದು, ದಿನಾಂಕವನ್ನು ಪ್ರಕಟಿಸಲಾಗಿದೆ ಎಂದು ಫೀಫಾ ಅಂಡರ್ 17 ವಿಶ್ವಕಪ್ ಇವೆಂಟ್ ಮ್ಯಾನೇಜರ್ ಎಂಎಸ್ ಮಾರಿಯಾನ್ ಹೇಳಿದ್ದಾರೆ.

ಮೊಟ್ಟ ಮೊದಲ ಬಾರಿಗೆ ಭಾರತ ತಂಡ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಒಟ್ಟು 24 ತಂಡಗಳು ವಿಶ್ವಕಪ್ ಗಾಗಿ ಸೆಣಸಲಿವೆ. ಇಲ್ಲಿ ತನಕ ಮೊದಲ ಸುತ್ತಿಗೆ ಭಾರತ ಸೇರಿದಂತೆ ಐದು ತಂಡಗಳು ಮಾತ್ರ ಅರ್ಹತೆ ಪಡೆದುಕೊಂಡಿವೆ. ಇರಾನ್, ಇರಾಕ್, ಉತ್ತರ ಕೊರಿಯಾ ಹಾಗೂ ಜಪಾನ್ ತಂಡಗಳು ಎಎಫ್ ಸಿ ಟೂರ್ನಿಯ ನಂತರ ಅರ್ಹತೆ ಪಡೆದಿವೆ. (ಒನ್ ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
FIFA have officially announced the date of the FIFA U-17 World Cup which is due to happen in India in 2017.
Please Wait while comments are loading...