ಫೆಡೆರೇಷನ್ ಕಪ್ ಫೈನಲ್: ಬೆಂಗಳೂರು ವಿರುದ್ಧ ಮೋಹನ್ ಬಗಾನ್ ಫೈಟ್

Posted By:
Subscribe to Oneindia Kannada

ಬೆಂಗಳೂರು, ಮೇ 14: ಈ ಬಾರಿಯ ಐ ಲೀಗ್ ಚಾಂಪಿಯನ್ ಐಜ್ವಾಲ್ ಫುಟ್ಬಾಲ್ ಕ್ಲಬ್ ತಂಡವನ್ನು ಏಕೈಕ ಗೋಲಿನಿಂದ ಸೋಲಿಸಿದ ಬೆಂಗಳೂರು ಫುಟ್ಬಾಲ್ ಕ್ಲಬ್ ಫೆಡೆರೆಷನ್ ಕಪ್ ಫೈನಲಿಗೇರಿದೆ.

ಮಿಡ್ ಫೀಲ್ಡರ್ ಕೆಮರೊನ್ ವಾಟ್ಸನ್ ಅವರು ಪೆನಾಲ್ಟಿ ಕಿಕ್ ಮೂಲಕ ಬೆಂಗಳೂರು ಪರ ಖಾತೆ ತೆರೆದಿದ್ದಲ್ಲದೆ, ತಂಡದ ಗೆಲುವಿಗೆ ಕಾರಣರಾದರು.

Federation Cup: Mohun Bagan beat East Bengal to set up final with Bengaluru FC

ಗಾಯಗೊಡಿರುವ ಸ್ಟಾರ್ ಆಟಗಾರ ಸುನಿಲ್ ಛೆಟ್ರಿ ಇಲ್ಲದೆ ಕಣಕ್ಕಿಳಿದ ಬೆಂಗಳೂರು ತಂಡ ಕೊನೆ ಕ್ಷಣದಲ್ಲಿ ಆತಂಕ ಎದುರಿಸಿತು. 20 ಸೆಕೆಂಡುಗಳು ಬಾಕಿ ಇರುವಂತೆ ಐಜ್ವಾಲ್ ತಂಡಕ್ಕೆ ಪೆನಾಲ್ಟಿ ಸಿಕ್ಕಿತು.

ಆದರೆ, ಬೆಂಗಳೂರಿನ ಗೋಲ್ ಕೀಪರ್ ಅಮರೀಂದರ್ ಸಿಂಗ್ ಅವರು ಚೆಂಡನ್ನ್ನು ತಡೆದು ಮೇ 21ರಂದು ಫೈನಲ್ ಗೆ ತಂಡವನ್ನು ತಲುಪಿಸಿದರು.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಕೋಲ್ಕತ್ತಾದ ತಂಡಗಳಾದ ಈಸ್ಟ್ ಬೆಂಗಾಲ್ ಹಾಗೂ ಮೋಹನ್ ಬಗಾನ್ ತಂಡಗಳು ಸೆಣಸಾಟ ನಡೆಸಿದವು. ಈಸ್ಟ್ ಬೆಂಗಾಲ್ ತಂಡವನ್ನು 0-2 ಅಂತರದಿಂದ ಸೋಲಿಸಿದ ಮೋಹನ್ ಬಗಾನ್ ತಂಡ ಫೈನಲ್ ತಲುಪಿತು. ಮೋಹನ್ ಬಗಾನ್ ಪರ ಡರಿಲ್ ಡಫಿ(35ನೇ ನಿಮಿಷ) ಹಾಗೂ ಬಲ್ವಂತ್ ಸಿಂಗ್ (84ನೇ ನಿಮಿಷ) ಗೋಲು ಗಳಿಸಿತು.

ದಾಖಲೆಯ 14 ಬಾರಿ ಫೆಡೆರೇಷನ್ ಕಪ್ ಗೆದ್ದಿರುವ ಮೋಹನ್ ಬಗಾನ್ ತಂಡವನ್ನು ಬೆಂಗಳೂರು ಎಫ್ ಸಿ ಎದುರಿಸಲಿದೆ. 19ನೇ ಬಾರಿಗೆ ಕೋಲ್ಕತ್ತಾದ ಮೊಹನ್ ಬಗಾನ್ ತಂಡ ಫೈನಲ್ ತಲುಪಿದೆ. (ಐಎಎನ್ಎಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mohun Bagan kept their title defence on track by defeating arch-rivals East Bengal 2-0 to enter the final. Earlier Bengaluru FC defeated I-League champions Aizawl FC 1-0 and qualified for the final of Federation Cup 2017.
Please Wait while comments are loading...