ರೂನಿ ದಾಖಲೆಯ ಆಟ, ಮ್ಯಾಂಚೆಸ್ಟರ್ ಯುನೈಟೆಡ್ ಗೆ ಜಯ

Posted By:
Subscribe to Oneindia Kannada

ಪ್ಯಾರೀಸ್, ನವೆಂಬರ್ 25: ಇಂಗ್ಲೀಷ್ ಪ್ರೀಮಿಯರ್ ಲೀಗ್ ನಲ್ಲಿ ಗೆಲುವಿನ ಹಾದಿ ಹಿಡಿಯಲು ತೀವ್ರ ಯತ್ನ ನಡೆಸಿರುವ ಮ್ಯಾಂಚೆಸ್ಟರ್ ಯುನೈಟೆಡ್ ತಂಡ, ಯುರೋಪಾ ಲೀಗ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಸ್ಟಾರ್ ಆಟಗಾರ ವೇಯ್ನ್ ರೂನಿ ದಾಖಲೆಯೊಂದನ್ನು ಸಮಗಟ್ಟಿದ್ದಾರೆ.

ಯುರೋಪಾ ಲೀಗ್ ನಲ್ಲಿ ಫೆಯೆನೂರ್ಡ್ ತಂಡದ ವಿರುದ್ಧ 0-4ಅಂತರದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಜಯಭೇರಿ ಬಾರಿಸುವ ಮೂಲಕ ಅಂತಿಮ 32ರ ಹಂತಕ್ಕೇರುವ ಅವಕಾಶ ಹೆಚ್ಚಿಸಿಕೊಂಡಿದೆ.

Europa League: Wayne Rooney equals record as Manchester United win

ಓಲ್ಡ್ ಟ್ರಾಫರ್ಡ್ ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ರೂನಿ ಮೊದಲ ಗೋಲು ಬಾರಿಸುತ್ತಿದ್ದಂತೆ ರುಡ್ ವಾನ್ ನಿಸ್ಟಲ್ ರಾಯ್ ದಾಖಲೆಯನ್ನು ಸಮಗಟ್ಟಿದರು. ಇನ್ನೊಂದು ಗೋಲು ಗಳಿಸಿದರೆ, ಬಾಬ್ಬಿ ಚಾರ್ಲ್ಟನ್ ಹೆಸರಿನಲ್ಲಿರುವ ಆಲ್ ಟೈಮ್ ಕ್ಲಬ್ ಗೋಲು ಗಳಿಕೆ ದಾಖಲೆ(249)ಯನ್ನು ರೂನಿ ಮುರಿಯಲಿದ್ದಾರೆ.


ಯುವಾನ್ ಮಾಠ, ಜೆಸ್ಸಿ ಲಿಂಗಾರ್ಡ್ ತಲಾ ಒಂದು ಗೋಲು ಗಳಿಸಿದರೆ, ಬ್ರಾಡ್ ಜೋನ್ಸ್ ಓನ್ ಗೋಲು ಹೊಡೆದು ಯುನೈಟೆಡ್ ಗೆ 4 ಗೋಲು ಗಳಿಸಲು ಸಹಕಾರಿಯಾದರು. ಎ ಗುಂಪಿನಲ್ಲಿರುವ ಯುನೈಟೆಡ್ ಜೋರ್ಯಾ ಲುಹಾನ್ಸ್ಕ್ ವಿರುದ್ಧ ಡ್ರಾ ಮಾಡಿಕೊಂಡರು ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಳ್ಳಲಿದೆ.(ಎಎಫ್ ಪಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Wayne Rooney claimed a piece of club history as he set Manchester United on the way to a 4-0 Europa League win over Feyenoord that saw them close on the last 32.
Please Wait while comments are loading...